Sunday, April 21, 2013

Daily Crime Reports As on 21/04/2013 At 07:00 Hrs

ಅಕ್ರಮ ಮದ್ಯ ಮಾರಾಟ  ಪ್ರಕರಣ

  • ಬೈಂದೂರು: ಸೀತಾರಾಮ ಜೆ.ಬಿ ಪಿ.ಎಸ್.ಐ ಬೈಂದೂರು ಪೋಲೀಸ್ ಠಾಣೆ ಇವರಿಗೆ ದಿನಾಂಕ:  20/04/2013 ರಂದು 16-00 ಗಂಟೆಗೆ ಕುಂದಾಫುರ ತಾಲೂಕು ಬೈಂದೂರು ಪೊಲೀಸ್‌ ಠಾಣಾ ಸರಹದ್ದಿನ ಯಳಜಿತ್‌ ಗ್ರಾಮದ ಜಂಕ್ಷನ್‌ ಸಮೀಪ ರಾಜು ಪೂಜಾರಿ ರವರ ಬಾಬ್ತು ಅಂಗಡಿ ಕಟ್ಟಡದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ರಾಜೇಂದ್ರ ಕೊಠಾರಿ ತಂದೆ: ಬಾಬು ಕೊಠಾರಿ  ವಾಸ: ಕೆಳಕೋಟಿಕೇರಿ ಮನೆ  ಯಳಜಿತ್ ಗ್ರಾಮ, ಕುಂದಾಪುರ ತಾಲೂಕು ಎಂಬಾತನು ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತ ಬಂದ ನೀಡಿದ ಮೇರೆಗೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಆರೋಪಿ ರಾಜೇಂದ್ರ ಕೊಠಾರಿಯನ್ನು ದಸ್ತಗಿರಿ ಮಾಡಿ ಅವರ ಬಳಿಯಿದ್ದ 180 ಎಮ್.ಎಲ್‌ನ Mysore Lancer Whiskey ಎಂಬುದಾಗಿ ಲೇಬಲ್ ಹೊಂದಿರುವ ಬಾಟಲಿಗಳು198 (ಒಟ್ಟು ಅಂದಾಜು ಮೌಲ್ಯ 8875/-), ರಟ್ಟಿನ ಬಾಕ್ಸ್-4, ಕೈಚೀಲ-1, ಮತ್ತು ಅಕ್ರಮವಾಗಿ ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ ಬಾಬ್ತು ನಗದು ರೂ 575/-ಗಳನ್ನು ಸ್ವಾಧೀನಪಡಿಸಿಕೊಂಡದ್ದಾಗಿರುತ್ತದೆ. ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 131/13 ಕಲಂ:32, 34 ಕೆ.ಇ ಆಕ್ಟ್   ನಂತೆ ಪ್ರಕರಣ ದಾಖಲಾಗಿರುತ್ತದೆ. 
ಅಪಘಾತ ಪ್ರಕರಣ  
  • ಉಡುಪಿ: ರಾಘವೇಂದ್ರ ನಾಯ್ಕ ತಂದೆ:ನಾರಾಯಣ ನಾಯ್ಕ ವಾಸ:76 ಬಡಗಬೆಟ್ಟು,ಇಂದಿರಾ ನಗರ,ಕುಕ್ಕಿಕಟ್ಟೆ, ಉಡುಪಿ ಇವರ  ತಂದೆ ನಾರಾಯಣ ನಾಯ್ಕ ಎಂಬುವರು ದಿನಾಂಕ 19/04/2013 ರಂದು ಬೆಳಗ್ಗೆ  04:30 ಗಂಟೆಗೆ ಆಟೋರಿಕ್ಷಾವನ್ನು ಬಾಡಿಗೆ ತೆಗೆದುಕೊಂಡು ಉಡುಪಿಗೆ ಹೋಗಿದ್ದು  ಬಾಡಿಗೆಗೆಂದು ಕೃಷ್ಣಮಠಕ್ಕೆ  ಬಂದು ವಾಪಸ್ಸು ಬಸ್ ಸ್ಟಾಂಡಿಗೆ ಹೋಗುವರೇ  ನೊವೆಲ್ಟಿಯಿಂದ  ಹೊರಟು ಸಮಯ ಸುಮಾರು  ಬೆಳಗ್ಗೆ 05:30 ಗಂಟೆಗೆ ಸಾಯಿರಾಂ ಅಂಗಡಿ ಎದುರು  ತಲುಪಿದಾಗ  ಸಂಸ್ಕೃತ ಕಾಲೇಜು ಕಡೆಯಿಂದ ಬೃಂದಾವನದ ಕಡೆಗೆ  KA 04 MC 7508 ನೇ  ಕಾರು  ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅವರ  KA 20 A 8793 ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಜಖಂಗೊಂಡಿದ್ದು  ನಾರಾಯಣ ನಾಯ್ಕ ರವರಿಗೆ ತಲೆಗೆ ರಕ್ತಗಾಯ,ಬಲಗೈ ಮೂಳೆ ಮುರಿತ ,ಎಡಗಾಲಿನ ಎಲುಬು ಜಖಂಗೊಂಡಿದ್ದು ,ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ ಎಮ್ ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಅಪಘಾತ ಮಾಡಿದ ಕಾರಿನ ನಂಬ್ರ KA 04 MC 7508 ನೇ  ಆಗಿದ್ದು ಕಾರು  ಚಾಲಕನ ಹೆಸರು ಪ್ರಭಾಕರ ಎಂಬುದಾಗಿದ್ದು ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯು ಅಪಘಾತಕ್ಕೆ ಕಾರಣವಾಗಿರುತ್ತದೆ. ಈ ಬಗ್ಗೆ ರಾಘವೇಂದ್ರ ನಾಯ್ಕ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 206/13 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಜುಗಾರಿ ಪ್ರಕರಣ  
  • ಹೆಬ್ರಿ: ದಿನಾಂಕ: 20/04/13 ರಂದು ರಾತ್ರಿ ಪರಮೇಶ್ವರ ನಾಯ್ಕ, ಎಎಸ್‌ಐ, ಹೆಬ್ರಿ ಪೊಲೀಸ್ ಠಾಣೆ ಇವರು  ಠಾಣೆಯಲ್ಲಿರುವಾಗ ಕಾರ್ಕಳ ತಾಲೂಕು ಶಿವಪುರ ಗ್ರಾಮದ ಎಲಗೋಳಿ ಎಂಬಲ್ಲಿ ಸಾರ್ವಜನಿಕ ಸ್ಥಳದ ಹಾಡಿಯಲ್ಲಿ ಅಂದರ್‌-ಬಾಹರ್‌ ಇಸ್ಪೀಟು ಜೂಜಾಟವನ್ನು ಆಡುತ್ತಿದ್ದಾರೆ ಎಂಬುದಾಗಿ  ದೊರೆತ ಖಚಿತ ವರ್ತಮಾನದಂತೆ  ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ರಾತ್ರಿ 11-15 ಗಂಟೆ ಸಮಯಕ್ಕೆ ದಾಳಿ ನಡೆಸಿ ಅಂದರ್‌ -ಬಾಹರ್ ಇಸ್ಪೀಟ್‌ ಜೂಜಾಟವಾಡುತ್ತಿದ್ದ 1) ಶ್ಯಾಮರಾಮ ಅಚಾರಿ (62ವರ್ಷ) ತಂದೆ:ದಿ.ಪದ್ದಣ್ಣ ಅಚಾರಿ ವಾಸ: ಸಾಯಿ ಪ್ರಸಾದ್ ನಿಲಯ ಎಲೆಗೋಳಿ ಶಿವಪುರ ಗ್ರಾಮ,  2) ಕೃಷ್ಣಯ್ಯ ಅಚಾರಿ (56ವರ್ಷ) ತಂದೆ:ದಿ.ನಾರಾಯಣ ಅಚಾರಿ ವಾಸ: ನೆತ್ತಿನಕುಟ್ಟಿಗೆ ಎಲೆಗೋಳಿ ಶಿವಪುರ ಗ್ರಾಮ 3) ಸುರೇಶ್ ಶೆಟ್ಟಿ  (50ವರ್ಷ) ತಂದೆ:ದಿ.ಕುಮಾರ್ ಶೆಟ್ಟಿ ವಾಸ: ತೋಟದ ಮನೆ, ಪಡುಕುಡೂರು ಗ್ರಾಮ ಕಾರ್ಕಳ 4) ಶಂಕರ ಮಡಿವಾಳ (50ವರ್ಷ) ತಂದೆ: ದಿ.ದೂಮ ಮಡಿವಾಳ ವಾಸ; ಮಡಿವಾಳ ಮನೆ, ಎಲೆಗೋಳಿ ಶಿವಪುರ ಗ್ರಾಮ 5) ಪ್ರವೀಣ ಶೆಟ್ಟಿ (40ವರ್ಷ) ತಂದೆ: ಬೋಜ ಶೆಟ್ಟಿ ವಾಸ: ಪಡುಕುಡುರು ಶಾಲೆಯ ಬಳಿ ಪಡುಕುಡುರು ಗ್ರಾಮ ಕಾರ್ಕಳ 6) ಮಂದಾರ ಶೆಟ್ಟಿ ( 60ವರ್ಷ) ತಂದೆ: ದಿ.ಗಣಪಯ್ಯ ಶೆಟ್ಟಿ ವಾಸ: ಹೆಬ್ಬಾಗಿಲು ಮನೆ, ಎಲೆಗೋಳಿ ಶಿವಪುರ ಗ್ರಾಮ ಆರು ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರುಗಳು ಅಂದರ್‌ ಬಾಹರ್‌ ಆಟಕ್ಕೆ ಉಪಯೋಗಿಸಿದ 52 ಇಸ್ಪೀಟು ಎಲೆಗಳು, ಒಂದು ಹಳೆಯ ಚೌಕುಳಿ ಬೆಡ್‌ ಶೀಟ್, ಎರಡು ಚಿಮಿಣಿ ದೀಪ ಮತ್ತು ಆಟಕ್ಕೆ ಉಪಯೋಗಿಸಿದ 1,380/- ರೂ ನಗದನ್ನು ಪಂಚರ ಸಮಕ್ಷಮ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಠಾಣೆಗೆ ಬಂದು  ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 31/13, ಕಲಂ: 87 ಕೆ.ಪಿ ಕಾಯಿದೆ ಯಂತೆ ಪ್ರಕರಣ ದಾಖಲಿಸಿರುವುದಾಗಿದೆ.

No comments: