Sunday, April 21, 2013

Daily Crime Reports As On 21/04/2013 At 19:30 Hrsಅಪಘಾತ ಪ್ರಕರಣ ಪ್ರಕರಣ

  • ಗಂಗೊಳ್ಳಿ: ದಿನಾಂಕ: ದಿನಾಂಕ: 20/04/2013 ರಂದು ಫಿರ್ಯಾದಿ ಚಂದ್ರಶೇಖರ ಅಚಾರ್ಯ (29)  ತಂದೆ: ಮಂಜುನಾಥ ಆಚಾರ್ಯ ವಾಸ: ನವಮಿ ಹೊದ್ರಾಳಿ ಕೋಟೇಶ್ವರ ಗ್ರಾಮ ಕುಂದಾಪುರ ತಾಲೂಕು ಇವರ ಸಂಬಂಧಿ ಗಣೇಶ ಆಚಾರ್ಯರವರ ಮೋಟಾರು ಸೈಕಲನ್ನು ಕೆ.ಎ 20 ಯು 406 ನ್ನು ಪಡಕೊಂಡು ಪಿರ್ಯಾದಿದಾರರ ಅಣ್ಣ ಗಣೇಶ ಆಚಾರ್ಯರವರೊಂದಿಗೆ ಹಿಂಬದಿಯಲ್ಲಿ ಕುಳಿತುಕೊಂಡು ತ್ರಾಸಿ ಕಡೆಗೆ  ಹೋಗುವಾಗ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬೆಳಿಗ್ಗೆ 09:30 ಗಂಟೆಗೆ ಅರಾಟೇ ಸೇತುವೆ ದಾಟಿ ರಾ.ಹೆ 66 ರಲ್ಲಿ ಕಾರು ಗ್ಯಾರೇಜನ ಎದುರು ರಸ್ತೆಯ ತೀರ ಎಡಕ್ಕೆ ಚಲಾಯಿಸಿ ಬೈಕ್ ಸ್ಕಿಡ್‌ ಆಗಿ ಬಿದ್ದ ಪರಿಣಾಮ ಫಿರ್ಯಾದಿದಾರರ ಬಲಕೈ ಮಣಿಗಂಟಿಗೆ ಮೂಳೆ ಮುರಿತದ ಗಾಯ ಬಲ ಮೊಣಗಂಟೆಗೆ, ಎಡಕೋಲು ಕಾಲಿಗೆ, ಎಡಪಾದಕ್ಕೆ, ಎಡಕೈಯ ಹೆಬ್ಬೆರಳಿಗೆ ಮತ್ತು ಕೋಲು ಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ  ಚಂದ್ರಶೇಖರ ಅಚಾರ್ಯ ರವರು ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಸಂಖ್ಯೆ 60/2013 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ:

  • ಮಣಿಪಾಲ: ಉಡುಪಿ ತಾಲೂಕು ಹೆರ್ಗಾ ಗ್ರಾಮದ ಶಾಂತಲಾ ಲಾಡ್ಜ್‌ ಕೊಠಡಿ ನಂಬ್ರ 601 ನ್ನು ಪಿ.ಸಿ ಥೋಮಸ್‌‌ (68) ತಂದೆ: ಲ್ಯೂಕೋಸ್‌‌, ವಾಸ: ಇರಿಟ್ಟಿ, ಕೇರಳ ಎಂಬವರು 15.04.2013 ರಂದು ಪಡೆದು ದಿನಾಂಕ 16.04.2013 ರಂದು ಸಂಜೆಯಿಂದ ದಿನಾಂಕ 21.04.2013 ರ ನಡುವಿನ ಅವಧಿಯಲ್ಲಿ ಯಾವುದೋ ಕಾರಣದಿಂದ  ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಹೇಶ ಶೆಟ್ಟಿ (35), ತಂದೆ: ದಿ| ಸದಾನಂದ ಶೆಟ್ಟಿ, ವಾಸ: ಬಣ್ಣಂಪಳ್ಳಿ, ಪೆರ್ಡೂರು ಪೋಸ್ಟ್‌‌, ಉಡುಪಿ ತಾಲೂಕು.ರವರು ಮಣಿಪಾಲ ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಯು.ಡಿ.ಆರ್‌ ಸಂಖ್ಯೆ 18/2013 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments: