Sunday, April 07, 2013

Daily Crime Reports As on 07/04/2013 At 19:30 Hrs


ಹಲ್ಲೆ ಪ್ರಕರಣ
  • ಹಿರಿಯಡ್ಕ: ದಿನಾಂಕ 7.4.2013 ರಂದು ಬೆಳಗ್ಗೆ 11:0 ಗಂಟೆಗೆ ಉಡುಪಿ ತಾಲೂಕಿನ ಬೊಮ್ಮರಬೆಟ್ಟು ಗ್ರಾಮದ ಮುಂಡುಜೆ ಎಂಬಲ್ಲಿ ರಾಮಚಂದ್ರ ನಾಯರಿ, ಪ್ರಾಯ 53 ವರ್ಷ, ತಂದೆ: ದಿ. ನರಸಿಂಹ ನಾಯರಿ ವಾಸ: ಶ್ರೀ ನರಸಿಂಹ, ಇಂದ್ರಾಳಿ ದೇವಸ್ಥಾನ ಹತ್ತಿರ ಕುಂಜಿಬೆಟ್ಟು ಗ್ರಾಮ, ಶಿವಳ್ಳಿ ಗ್ರಾಮ ಎಂಬವರು ತಮ್ಮ ಬಾಬ್ತು ಜಾಗದಲ್ಲಿ ಗ್ರಾಹಕರೊಂದಿಗೆ ಮಾತನಾಡಿಕೊಂಡಿರುವಾಗ ಆರೋಪಿ ನಾರಾಯಣ ಕುಲಾಲ್ ಎಂಬಾತನು ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಅವರ ಮುಖಕ್ಕೆ ಕೈಯಿಂದ ಗುದ್ದಿ ರಕ್ತಗಾಯವನ್ನುಂಟು ಮಾಡಿರುವುದಾಗಿದೆ. ಈ ಬಗ್ಗೆ ರಾಮಚಂದ್ರ ನಾಯರಿ ಇವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 65/2013 ಕಲಂ 447, 323 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ಪಿರ್ಯಾದಿದಾರರಾದ ಶಾಹಿರಾ (22) ಗಂಡ:ರಫೀಕ್ ವಾಸ: ಗಣೇಶ ನಗರ ನಾವುಂದ ಗ್ರಾಮ  ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು ಪ್ರಕರಣದ ಆಪಾದಿತ ರಫೀಕ್ ನೊಂದಿಗೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ಗಣೇಶ ನಗರದಲ್ಲಿರುವ ಮನೆಯಲ್ಲಿ ದಿನಾಂಕ 28/04/2011  ರಂದು ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದು,  ವಿವಾಹ ಪೂರ್ವದಲ್ಲಿ ಅಪಾದಿತ 3 ಲಕ್ಷ ರೂಪಾಯಿ ನಗದು ಹಾಗೂ 40 ಪವನ್ ಚಿನ್ನಾಭರಣಗಳನ್ನು ನೀಡಬೇಕಾಗಿ ಬೇಡಿಕೆ ಇಟ್ಟಿದ್ದು,  ಅವರ ತಂದೆ 2 ಲಕ್ಷ ರೂಪಾಯಿ ನಗದು ಹಾಗೂ 30 ಪವನ್  ಚಿನ್ನಾಭರಣಗಳನ್ನು ನೀಡಲು ಒಪ್ಪಿ ಅದರಂತೆ ಮದುವೆಯ ಪೂರ್ವದಲ್ಲಿ ದಿನಾಂಕ 23/02/2011 ರಂದು ಆರೋಪಿಗೆ 2 ಲಕ್ಷ ರೂಪಾಯಿ ಹಾಗೂ ಮದುವೆಯ ಸಮಯ ಫಿರ್ಯಾದಿದಾರರ ಮೈಮೇಲೆ 30 ಪವನ್ ಚಿನ್ನಾಭರಣದ ರೂಪದಲ್ಲಿ ವರದಕ್ಷಿಣೆ ನೀಡಿದ್ದರು. ಮದುವೆಯಾಗಿ ಫಿರ್ಯಾದಿದಾರರನ್ನು ಆರೋಪಿಯು ತನ್ನ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆರೋಪಿತರಾದ 1] ರಫೀಕ್ 2] ಖತೀಜಾ 3] ಅಬ್ದುಲ್ಲಾ 4] ರಝಿಯಾ 5] ತಬಸ್ಸುಮ್  ವಾಸ:ಎಲ್ಲರೂ  ಗಣೇಶ ನಗರ ನಾವುಂದ ಗ್ರಾಮ  ಇವರು  ಇನ್ನೂ ರೂಪಾಯಿ 5 ಲಕ್ಷ ಹೆಚ್ಚಿನ ವರದಕ್ಷಿಣೆಯನ್ನು ತರುವಂತೆ ಫಿರ್ಯಾದಿದಾರರಿಗೆ ಒತ್ತಾಯಿಸಿ, ಅವಾಚ್ಯವಾಗಿ ಬೈದು, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಹಲವಾರು ಬಾರಿ ಕೈಗಳಿಂದ ಹಲ್ಲೆ ನಡೆಸಿರುತ್ತಾರೆ. ನಂತರ ಮತ್ತೆ ದಿನಾಂಕ 06/04/2013 ರಂದು ಆರೋಪಿಗಳು ಫಿರ್ಯಾದಿದಾರಿಗೆ ತಾವು ಹೇಳಿದ ವರದಕ್ಷಿಣೆಯನ್ನು ತರದಿದ್ದಲ್ಲಿ ಫಿರ್ಯಾದಿದಾರರನ್ನು ಹಾಗೂ ಮಗುವನ್ನು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿ ಅವರ ಚಿನ್ನವನ್ನೆಲ್ಲಾ ಆರೋಪಿಗಳೇ ತೆಗೆದುಕೊಂಡಿರುತ್ತಾರೆ ಎಂಬುದಾಗಿ ಶಾಹಿರಾ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 103/2013 ಕಲಂ: 498 (ಎ), 323, 504, 506 ಜೊತೆಗೆ 34 ಐಪಿಸಿ ಮತ್ತು 3,4, 6 ವರದಕ್ಷಿಣೆ ಕಾಯಿದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಪಘಾತ ಪ್ರಕರಣ 
  • ಕುಂದಾಪುರ: ದಿನಾಂಕ 07/04/2013 ರಂದು ಸಮಯ ಸುಮಾರು ಬೆಳಿಗ್ಗೆ 10:30 ಗಂಟೆಗೆ ಕುಂದಾಪುರ ತಾಲೂಕಿನ ಕಸಬಾ   ಗ್ರಾಮದ  ಸಂಗಮ್ ಪೆಟ್ರೋಲ್ ಬಂಕ್ ಎದುರುಗಡೆ ರಾ.ಹೆ 66 ರಲ್ಲಿ    KA20-B-3302 ನೇ ಬಸ್ ಅನ್ನು ಅದರ ಚಾಲಕ ಗೋಪಾಲ  ವಿ ನಾಯ್ಕ ರವರು ತಲ್ಲೂರು  ಕಡೆಯಿಂದ ಕುಂದಾಪುರ ಕಡಗೆ ವೇಗವಾಗಿ ಚಲಾಯಿಸಿಕೊಂಡು ಬಂದು ಯಾವುದೇ  ಸೂಚನೆ ನೀಡದೇ ಒಮ್ಮಲೇ ನಿರ್ಲಕ್ಷತನದಿಂದ ನಿಲ್ಲಿಸಿದಾಗ, ಸದ್ರಿ ಬಸ್ಸಿನ ಹಿಂದಿನಿಂದ  ಅಂದರೆ  ತಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ KA30-J-3727 ನೇ ದ್ವಿ ಚಕ್ರ ವಾಹನ ವಾಹನವನ್ನು ಅದರ ಸವಾರ  ಮಾರಿಯಪ್ಪ ವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿ ವಾಹನದ ಅಂತರ ಕಾಯ್ದುಕೊಳ್ಳದೇ ಸದ್ರಿ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ವಾಹನದ  ಸವಾರ ಮಾರಿಯಪ್ಪ ಹಾಗೂ  ಹಿಂದೆ ಕುಳಿತ  ಸವಾರನ ಮಗ  ನಾಗರಾಜ   ಗಾಯಗೊಂಡು  ಕುಂದಾಪುರ  ಸರಕಾರಿ  ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ  ವಿಜಯ ತಂದೆ:   ಅಪ್ಪು, ವಾಸ: ವಿನಾಯಕ ನಗರ, ಕುಂಭಾಶಿ ಗ್ರಾಮ ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 28/2013 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ:ದಿನಾಂಕ: 05/04/2013 ರಂದು ಬೆಳಿಗ್ಗೆ 08:20 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ಕೌಡೂರು ಗ್ರಾಮದ ಬೈಲೂರು ಬಸ್ಸು ನಿಲ್ದಾಣದ ಬಳಿ ಆರೋಪಿ ಹನುಮಾನ್ ಕಂಪೆನಿ ಬಸ್ಸು ಚಾಲಕನು ತನ್ನ ಬಾಬ್ತು ಬಸ್ಸು ನಂಬ್ರ ಕೆಎ-20 ಬಿ- 4467ನೇಯದನ್ನು ಉಡುಪಿ ಕಡೆಯಿಂದ ಬೈಲೂರು ಕಡೆಗೆ ಚಲಾಯಿಸಿಕೊಂಡು ಬಂದು ಬೈಲೂರು ಬಸ್ಸು ನಿಲ್ದಾಣದಲ್ಲಿ ಬಸ್ಸು ನಿಲ್ಲಿಸಿ ಪ್ರಯಾಣಿಕರು ಬಸ್ಸಿನಿಂದ ಇಳಿಯುತ್ತಿದ್ದು, ಶ್ರೀಮತಿ ಪುಷ್ಪಾ ಶೆಡ್ತಿ ಗಂಡ: ಶ್ಯಾಮ ಶೆಟ್ಟಿ ವಾಸ: ನೀರೆ ಗುತ್ತು ಮನೆ, ನೀರೆ ಗ್ರಾಮ ಕಾರ್ಕಳ ತಾಲೂಕು ಇವರ  ಗಂಡ ಶ್ಯಾಮ ಶೆಟ್ಟಿ ಎಂಬವರು ಬಸ್ಸಿನ ಹಿಂಭಾಗದ ಬಾಗಿಲಿನ ರಾಡ್ ಹಿಡಿದು ಇಳಿಯುತ್ತಿದ್ದಾಗ ಬಸ್ಸು ಚಾಲಕನು ನಿರ್ವಾಹಕನ ಸೂಚನೆ ಇಲ್ಲದೆ ನಿರ್ಲಕ್ಷತನದಿಂದ ಬಸ್ಸನ್ನು ಒಮ್ಮೆಲೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಶ್ಯಾಮ ಶೆಟ್ಟಿಯವರಿಗೆ ಬಸ್ಸಿನ ಎಡ ಬದಿಯು ಡಿಕ್ಕಿ ಹೊಡೆದ ಪರಿಣಾಮ ಶ್ಯಾಮ ಶೆಟ್ಟಿಯವರು ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿದೆ. ಈ ಬಗ್ಗೆ  ಶ್ರೀಮತಿ ಪುಷ್ಪಾ ಶೆಡ್ತಿ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 39/2013 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಗಂಗೊಳ್ಳಿ: ದಿನಾಂಕ: 01/04/2013ರಂದು ಉದಯ (31) ತಂದೆ: ದಿ: ರಂಗ ವಾಸ: ಅಡಿಲ್‌ ಮನೆ ಕೂಳೂರು ಕ್ರಾಸ್‌ ಕುಂದಬಾರಾಂದಾಡಿ ಗ್ರಾಮ,ಕುಂದಾಪುರ ತಾಲೂಕು ಇವರ ಹೆಂಡತಿ ಸರೋಜ (29) ಇವರು ಮನೆಯಲ್ಲಿ ವಿಪರೀತಿ ಇಲಿಯ ಕಾಟವಿರುವುದರಿಂದ ಅಂಗಡಿಯಿಂದ ಇಲಿಗೆ ಹಾಕುವ ಇಲಿ ಪಾಯಿಸನ್ ಹಾಗೂ ಅದರೊಂದಿಗೆ ತಿನ್ನಲು ಮಂಚ್‌ ಚಾಕಲೇಟ್‌ ಅನ್ನು ತರಿಸಿ ಮನೆಯ ಕಿಟಕಿಯ ಮೇಲೆ ಇಟ್ಟಿದ್ದು  ರಾತ್ರಿ ಕರೆಂಟ್‌ ಹೋದ  ಸಮಯದಲ್ಲಿ ಅವರ ಹೆಂಡತಿ ಮಂಚ್‌ ಚಾಕಲೇಟ್‌ ಎಂದು ಇಲಿ ಪಾಯಿಸನ್  ತಿಂದು ರಾತ್ರಿ ಮಲಗಿಕೊಂಡಿದ್ದು  ಸುಮಾರು 12:00 ಗಂಟೆಗೆ ವಾಂತಿ ಪ್ರಾರಂಭವಾಯಿತು  ಕೂಡಲೇ ಕುಂದಾಪುರ ಅದರ್ಶ ಅಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಮಾಣಿಪಾಲ ಆಸ್ಪತ್ರೆಗೆ  ಸೇರಿಸಿದ್ದು ಅಲ್ಲಿ ಸ್ವಲ್ಪ ಗುಣಮುಖವಾಗಿದ್ದು  ನಂತರ  ದಿನಾಂಕ:07/04/2013ರಂದು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ  7:30ಗಂಟೆಗೆ ಆಸ್ಪತ್ರೆಯಲ್ಲಿ  ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಉದಯ ಇವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 07/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: