Sunday, April 07, 2013

Daily Crime Reports As on 07/04/2013 At 17:00 Hrs



ಅಪಘಾತ ಪ್ರಕರಣ
  • ಕಾಪು: ದಿನಾಂಕ 06-04-2013 ರಂದು ಕೆ.ಎಲ್. -33 - ಬಿ 6022 ನೇ ಲಾರಿಯನ್ನು ಅದರ ಚಾಲಕ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾತ್ರಿ 10:20 ಗಂಟೆ ಸಮಯಕ್ಕೆ ಕಾಪು ಪ್ರಶಾಂತ್ ಆಸ್ಪತ್ರೆಯ ಬಳಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ನಂಬ್ರ ಹೆಚ್.ಆರ್.74-4900 ನೇ ಲಾರಿಯ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದಾಗಿದೆ. ಈ ಬಗ್ಗೆ ದಿನೇಶ್ ಶೆಟ್ಟಿ (37) ತಂದೆ: ಎಚ್ಚಣ್ಣ ಶೆಟ್ಟಿ ವಾಸ; ಗುರುಕೃಪಾ ಕಲ್ಯಾ ಕಾಪು ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 88/13 :ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬ್ರಹ್ಮಾವರ: ದಿನಾಂಕ: 05/04/2013 ರಂದು 18:30 ಗಂಟೆಗೆ ಉಡುಪಿ ತಾಲೂಕು ಚಾಂತಾರು ಗ್ರಾಮದ ಬ್ರಹ್ಮಾವರ ಅಕ್ಷತ ಪುಸ್ತಕ ಭಂಡಾರದ ಎದುರು ಆರೋಪಿ ತನ್ನ ಬಾಬ್ತು ಆಟೋ ರಿಕ್ಷಾ ಕೆಎ-20-ಬಿ-8180 ನ್ನು ಆಕಾಶವಾಣಿ ಕಡೆಯಿಂದ ಮಹಾಲಿಂಗೇಶ್ವರ ದೇವಸ್ಥಾನದ ಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದ 72 ವರ್ಷ ಪ್ರಾಯದ ರೋಹಿಣಿ ರವರಿಗೆ ಡಿಕ್ಕಿ ಹೊಡೆದು ಪರಿಣಾಮವಾಗಿ ರೋಹಿಣಿಯವರ ತಲೆಗೆ ಮತ್ತು ಕೈಗೆ ತೀವ್ರಗಾಯವಾಗಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣದ ಗಾಯಾಳು ರೋಹಿಣಿ ರವರು ದಿನಾಂಕ 06/04/13 ರಂದು 20:20 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಕೆ.ಎಂ.ಸಿ  ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಕ್ರಮಾಂಕ 141/13 ಕಲಂ:279, 338 ಐಪಿಸಿಯನ್ನು ಕಲಂ: 279,304(ಎ) ಐಪಿಸಿ ಯನ್ನಾಗಿ ಪರಿವರ್ತಿಸಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಹಿರಿಯಡ್ಕ: ದಿನಾಂಕ 6.4.2013 ರಂದು ಸಮಯ ಸುಮಾರು 18:00 ಗಂಟೆಗೆ ಕಾರ್ಕಳ ತಾಲೂಕಿನ ಕಣಂಜಾರು ಗ್ರಾಮದ ಕಡೆಬೆರಕೆ ದರ್ಖಾಸು ಮನೆ ಎಂಬಲ್ಲಿ ಕುಮಾರಿ ರತ್ನ ತಂದೆ: ಕಡ್ಡಿ, ವಾಸ: ಕಡಬೆರಕೆ ದರ್ಖಾಸು ಮನೆ, ಕಣಂಜಾರು ಗ್ರಾಮ, ಕಾರ್ಕಳ ತಾಲೂಕು ಇವರ ಅಣ್ಣ ಉಮೇಶ ಎಂಬಾತನು ತನ್ನ ಪತ್ನಿ ಮನೆ ಬಿಟ್ಟು ತವರು ಮನೆಯಲ್ಲಿದ್ದು, ವಾಪಾಸು ಮನೆಗೆ ಬರುವಂತೆ ಒತ್ತಾಯಿಸಿದರೂ ನಿರಾಕರಿಸಿದ್ದರಿಂದ ಜೀವನದಲ್ಲಿ ಜುಗುಪ್ಸೆಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿದವನನ್ನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ 21:45 ಗಂಟೆಗೆ ಮೃತಪಟ್ಟಿರುತ್ತಾನೆ. ಈ ಬಗ್ಗೆ ಕುಮಾರಿ ರತ್ನ ಇವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 07/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: