Wednesday, April 24, 2013

Daily Crime Reported on 24/04/2013 at 19:30 Hrsಅಸ್ವಾಭಾವಿಕ ಮರಣ ಪ್ರಕರಣ
  • ಮಣಿಪಾಲ: ಪಿರ್ಯಾದಿದಾರರಾದ ರಮಾನಂದ ನಾಯ್ಕ (32) ತಂದೆ ವಾಸು ನಾಯ್ಕ ವಾಸ ಸಗ್ರಿ ನೋಳೆ, ಕುಂಜಿಬೆಟ್ಟು ಅಂಚೆ, ಉಡುಪಿ ತಾಲೂಕು ಇವರ ಅಣ್ಣ ದಯಾನಂದ ನಾಯ್ಕ (35) ಎಂಬವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪೆರಂಪಳ್ಳಿಯ ಬ್ಲೂ ವಾಟರ್‌ ಹೋಟೇಲಿನ ಹಿಂದುಗಡೆ ಗುಡ್ಡೆಯಲ್ಲಿ ಕುಸಿದು ಬಿದ್ದವರನ್ನು ಮಾಹಿತಿ ತಿಳಿದ ಪಿರ್ಯಾದಿ ರಮಾನಂದ ನಾಯ್ಕ ಇವರು ಸ್ಥಳಕ್ಕೆ ಹೋಗಿ ಅವರನ್ನು ಕೆ.ಎಂ.ಸಿ ಆಸ್ಪತ್ರೆಗೆ ಕರೆತಂದು ವೈದ್ಯರಲ್ಲಿ ಚಿಕಿತ್ಸೆಗೆ ತೋರಿಸಿದಲ್ಲಿ ದಯಾನಂದ ನಾಯ್ಕ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಮೃತರಿಗೆ ಕುಡಿತದ ಚಟವಿದ್ದು ದಿನಾಂಕ 24/04/2013 ರಂದು ಬೆಳಿಗ್ಗೆ 10:00 ಗಂಟೆಯಿಂದ 14:00 ಗಂಟೆ ನಡುವಿನ ಅವಧಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿದೆ ಎಂಬುದಾಗಿ ರಮಾನಂದ ನಾಯ್ಕ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 19/2013 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ
  • ಹೆಬ್ರಿ: ಪಿರ್ಯಾದಿದಾರರಾದ ಇಲ್ಯಾಸ್ (31) ತಂದೆ ಮೊಹಮ್ಮದ್ ವಾಸ ರಜಿಯ ಮಂಜಿಲ್ ಮುದೇಲ್ಕಡಿ ಮುನಿಯಾಲು ವರಂಗ ಗ್ರಾಮ ಕಾರ್ಕಳ ಇವರು ವರಂಗ ಗ್ರಾಮದ ಮುನಿಯಾಲು ಮುದೇಲ್ಕಡಿ ಎಂಬಲ್ಲಿ ಜೈಮುದ್ದೀನ್‌ ಎಂಬವರ ಬಾಡಿಗೆ ಕಟ್ಟಡದಲ್ಲಿ ಜೀನಸಿ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡಿರುವುದಾಗಿದೆ ಸದ್ರಿಯವರು ದಿನಾಂಕ 23/04/2013 ರಂದು 21:00 ಗಂಟೆಗೆ ಅಂಗಡಿಯನ್ನು ಮುಚ್ಚಿಕೊಂಡು ಹೋಗಿದ್ದು, ದಿನಾಂಕ 24/04/2013 ರಂದು ಬೆಳಿಗ್ಗೆ 07:00 ಗಂಟೆಗೆ ಅಂಗಡಿಗೆ ಬಂದು ಬೀಗ ತೆಗೆದು ನೋಡಿದಾಗ ಯಾರೋ ಕಳ್ಳರು ಅಂಗಡಿಯ ಹಿಂಬಾಗದ ಮೇಛ್ಚಾವಣೆಯ ಸಿಮೆಂಟಿನ ಸೀಟನ್ನು ಜಾರಿಸಿ, ಅದರ ಮುಖೇನ ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ ತೋಸಿಬ ಕಂಪೆನಿಯ ಎಲ್‌ಇಡಿ ಟಿ.ವಿ ತೂಗುವ ತಕ್ಕಡಿ ಹಾಗೂ ನಗದು ರೂಪಾಯಿ 3,300 ಒಟ್ಟು ಮೌಲ್ಯ ಸುಮಾರು ರೂಪಾಯಿ 22,300ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಇಲ್ಯಾಸ್ ಇವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 32/13 ಕಲಂ 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: