Wednesday, April 24, 2013

Daily Crime Reported on 24/04/2013 At 17:00 Hrs

ಹಲ್ಲೆ ನಡೆಸಿ ಜೀವ ಬೆದರಿಕೆ ಪ್ರಕರಣ
  • ಅಮಾಸೆಬೈಲು: ದಿನಾಂಕ 23/04/13 ರಂದು ಪಿರ್ಯಾದುದಾರರಾದ ಶೋಭಾ (33 ) ಗಂಡ ಮಂಜುನಾಥ ಶೆಟ್ಟಿ ವಾಸ ಹೊಸಂಗಡಿ ಜಂಕ್ಷನ್ ಬಳಿ ಹೊಸಂಗಡಿ ಕುಂದಾಪುರ ತಾಲೂಕು ಇವರು ಹೊಸಂಗಡಿ ಗ್ರಾಮದ ಹೊಂಗಡಿ ಜಂಕ್ಷನ್ ಬಳಿಯಲ್ಲಿರುವ ಅವರ ಬಾಬ್ತು ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ತೆಂಗಿನ ಸಿಪ್ಪೆಯನ್ನು ತೆಗೆಯುತ್ತಿರುವಾಗ ಬೆಳಿಗ್ಗೆ 10:00 ಗಂಟೆಗೆ ಆರೋಪಿತರುಗಳಾದ ಜಾನಕಮ್ಮ ಹಾಗೂ ಅವರ ಮಗಳು ಅಪೂರ್ವ ಎಂಬವರು ಬಂದು ಪಿರ್ಯಾದಿ ಶೋಭಾ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗೂ ಚಪ್ಪಲಿಯಿಂದ ಹೊಡೆದು ಪಿರ್ಯಾದಿ ಶೋಭಾ ಇವರ ತಂಗಿ ಜಯಾಳಿಗೂ ಕೂಡಾ ಕಾಲಿನಿಂದ ತುಳಿದುದಲ್ಲದೇ ಇನ್ನೂ ಮುಂದಕ್ಕೆ ಈ ಜಾಗಕ್ಕೆ ಬಂದಲ್ಲಿ ನಿಮ್ಮನ್ನು ಕೊಂದು ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾಗಿದೆ ಈ ಘಟನೆಗೆ ಜಾಗದ ತಕರಾರೇ ಕಾರಣವಾಗಿರುತ್ತದೆ ಎಂಬುದಾಗಿ ಶೋಭಾ ಇವರು ನೀಡಿದ ದೂರಿನಂತೆ ಅಮಾಸೆಬೈಲು ಠಾಣಾ ಅಪರಾಧ ಕ್ರಮಾಂಕ 14/13 ಕಲಂ 323, 355, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಹಿರಿಯಡ್ಕ: ಪಿರ್ಯಾದುದಾರರಾದ ಅಜಿತಿ ಜೆ ಶೆಟ್ಟಿ (24) ವಾಸ ಅನುಗ್ರಹ ನಿಲಯ ನಿಟ್ಟೂರು ಅಂಚೆ ನಿಟ್ಟೂರು ಉಡುಪಿ ತಾಲೂಕು ಇವರ ತಂದೆ ಜಯಕರ ಶೆಟ್ಟಿ (52) ಎಂಬವರು ದಿನಾಂಕ 23/೦4/2013ರಂದು ಬೊಮ್ಮರ ಬೆಟ್ಟು ಗ್ರಾಮದ ಮಂಜೊಟ್ಟಿ ಎಂಬಲ್ಲಿ ಪ್ರದೀಪ ಶೆಟ್ಟಿ ಎಂಬವರ ಮನೆಯಲ್ಲಿ ದೈವದ ಕೆಲಸಕ್ಕೆ ಹೋದವರಿಗೆ ರಾತ್ರಿ ೦9:00 ಗಂಟೆಗೆ ತೀವೃ ಎದೆನೋವಿನಿಂದ ಕುಸಿದು ಬಿದ್ದವರನ್ನು ಹಿರಿಯಡಕ ಕಾಮತ್ ನರ್ಸಿಂಗ್ ಹೋಂ ಗೆ  ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋದಲ್ಲಿ ವೈದ್ಯಾಧಿಕಾರಿಯವರು 09:15 ಗಂಟೆಗೆ ಜಯಕರ ಶೆಟ್ಟಿಯವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಬಳಿಕ ಜಯಕರ ಶೆಟ್ಟಿಯವರ ಮೃತ ದೇಹವನ್ನು ಉಡುಪಿ ಶವಾಗಾರದಲ್ಲಿರಿಸಿರುವುದಾಗಿದೆ ಎಂಬುದಾಗಿ ಅಜಿತಿ ಜೆ ಶೆಟ್ಟಿ ಇವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 8/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಪಘಾತ ಪ್ರಕರಣಗಳು
  • ಕಾಪು: ದಿನಾಂಕ 23/04/2013 ರಂದು ಪಿರ್ಯಾದಿದಾರರಾದ ಸತೇಂದ್ರೆ ಕುಮಾರ್ (22) ತಂದೆ ಮಹೇಂದ್ರಾ ಸಿಂಗ್ ವಾಸ ಡಿಬ್ರಾ ನವಗಡ ಪೊಸ್ಟ್ ಅಸನ್ ಸೋಲ್ ಜಿಲ್ಲಾ ಪಶ್ವಿಮ ಬಂಗಾಳ ಇವರು ತಮ್ಮ ಕೆಎ 20ಸಿ 4951 ನೇ ಲಾರಿಯಲ್ಲಿ ಡಿ.ಬಿ.ಎಮ್ ಮಿಕ್ಸ್ ಜೆಲ್ಲಿ ಡಾಮಾರು ಮಿಶ್ರಿತ ಲೋಡ್‌ನ್ನು ಹೇರಿಕೊಂಡು ಪಲಿಮಾರಿನಿಂದ ಚಲಾಯಿಸಿಕೊಂಡು ಸಂಜೆ 5:20 ಗಂಟೆಗೆ ಪಾಂಗಾಳ ಸೇತುವೆಯ ಬಳಿ ರಾ.ಹೆ 66 ರಲ್ಲಿ ಕಾಮಗಾಗಿ ನಡೆಯುವ ರಸ್ತೆಗೆ ವಾಹನವನ್ನು ಬಲ ಬದಿಗೆ ಅಂದರೆ ಪೂರ್ವ ಬದಿಗೆ ತಿರುಗಿಸಿದಾಗ ಆಪಾದಿತ ಕೆಎ 20ಆರ್ 8039ನೇ ಮೋಟಾರ್ ಸೈಕಲ್‌ ಸವಾರ ಚಂದ್ರಹಾಸ ಇವರು ರಾ.ಹೆ 66ರಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ಸತೇಂದ್ರೆ ಕುಮಾರ್ ಇವರು ಚಲಾಯಿಸುತ್ತಿದ್ದ ಲಾರಿಯ ಹಿಂಬದಿಯ ಬಲಬದಿಯ ಚಕ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್‌ ಜಖಂಗೊಂಡಿರುತ್ತದೆ ಎಂಬುದಾಗಿ ಸತೇಂದ್ರೆ ಕುಮಾರ್ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 127/2013 ಕಲಂ 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: