Thursday, April 25, 2013

Daily Crime Reported on 25/04/2013 At 07:00 Hrs


ಅಪಘಾತ ಪ್ರಕರಣಗಳು
  • ಹಿರಿಯಡ್ಕ: ದಿನಾಂಕ 24/04/2013 ರಂದು ಪಿರ್ಯಾದಿದಾರರಾದ ಪ್ರವೀಣ್ ಆರ್ ಪೂಜಾರಿ (22) ತಂದೆ ರಾಜು ಪೂಜಾರಿ ವಾಸ ಅನ್ನಪೂರ್ಣೇಶ್ವರಿ ನಿಲಯ ಹೋಳಿಂಜೆ ಮೇಲ್ಮನೆ ಪೆರ್ಡೂರು ಅಂಚೆ ಮತ್ತು ಗ್ರಾಮ ಉಡುಪಿ ತಾಲೂಕು ಇವರು ತಮ್ಮ ಬಾಬ್ತು ಆಟೋರಿಕ್ಷಾ ನಂಬ್ರ ಕೆಎ 20ಸಿ 5593ನೇದರಲ್ಲಿ ರಕ್ಷಿತ್ ಆಚಾರ್ಯ ಮತ್ತು ಸುಶೀಲಾ ಆಚಾರ್ಯ ಎಂಬವರನ್ನು ಕುಳ್ಳಿರಿಸಿಕೊಂಡು ಪೆರ್ಡೂರು ರಿಕ್ಷಾ ನಿಲ್ದಾಣದಿಂದ ಅಡಪಾಡಿ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ 11:10 ಗಂಟೆಗೆ ಅಲಂಗಾರು ಕಾನರಪಾಡಿ ಎಂಬಲ್ಲಿ ತಲುಪುವಷ್ಟರಲ್ಲಿ ಎದುಗಡೆಯಿಂದ ಅಂದರೆ ಅಡಪಾಡಿ ಕಡೆಯಿಂದ ಪೆರ್ಡೂರು ಕಡೆಗೆ ಆಪಾದಿತ ರಿಕ್ಷಾ ನಂಬ್ರ ಕೆಎ 20ಬಿ 1362  ನೇದರ ಚಾಲಕ ಹರೀಶ ಎಂಬವನು ತನ್ನ ಬಾಬ್ತು ರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಪ್ರವೀಣ್ ಆರ್ ಪೂಜಾರಿರವರ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ರಿಕ್ಷಾಗಳು ಜಖಂಗೊಂಡು ಪ್ರವೀಣ್ ಆರ್ ಪೂಜಾರಿ ಇವರ ರಿಕ್ಷಾದಲ್ಲಿ ಇದ್ದ ರಕ್ಷಿತ್ ಆಚಾರ್ಯ ಮತ್ತು ಸುಶೀಲಾ ಆಚಾರ್ಯ ಎಂಬವರು ಚರಂಡಿಗೆ ಬಿದ್ದ ಪರಿಣಾಮ ರಕ್ಷಿತ್ ನ ಬಲಕಾಲಿನ ತೊಡೆಯ ಮೂಳೆ ಮುರಿತವಾಗಿದ್ದು ಸುಶೀಲಾ ಆಚಾರ್ಯ ಮತ್ತು ಪ್ರವೀಣ್ ಆರ್ ಪೂಜಾರಿ ಇವರಿಗೆ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ ಎಂಬುದಾಗಿ ಪ್ರವೀಣ್ ಆರ್ ಪೂಜಾರಿ ಇವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 70/2013 ಕಲಂ 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ: ಪಿರ್ಯಾದಿದಾರರಾದ ನಾಗೇಶ್‌ (25) ತಂದೆ ದಿ. ರಾಜು ವಾಸ ಕೂನಮುದ್ದನ ಹಳ್ಳಿ, ರಾಮನಗರ ತಾಲೂಕು ಮತ್ತು ಜಿಲ್ಲೆ ಇವರು ಕ್ಲೀನರ್‌ ಕೆಲಸ ಮಾಡುತ್ತಿರುವ ಟೂರಿಸ್ಟ್‌ ಬಸ್ಸು ನಂಬ್ರ ಕೆಎ 06ಬಿ 1448ನೇದನ್ನು ಅದರ ಚಾಲಕ ಕೃಷ್ಣ ಎಂಬವರು ದಿನಾಂಕ 24/04/2013 ರಂದು ಮದ್ಯಾಹ್ನ 1:30 ಗಂಟೆಗೆ ಎಸ್.ಕೆ ಬಾರ್ಡರ್‌ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಕಾರ್ಕಳ ತಾಲೂಕು ಮಾಳ ಗ್ರಾಮದ ಮುಳ್ಳೂರು ಘಾಟ್‌ ಎನ್.ಹೆಚ್ 13 ರಸ್ತೆಯಲ್ಲಿ ಚಾಲಕರ ನಿಯಂತ್ರಣ ತಪ್ಪಿ, ಬಸ್ಸು ರಸ್ತೆಯ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದು ಬಸ್ಸು ಜಖಂಗೊಂಡಿರುವುದಾಗಿದೆ ಎಂಬುದಾಗಿ ನಾಗೇಶ್‌ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 48/2013ಕಲಂ 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ 24/04/2013 ರಂದು 18:30 ಗಂಟೆಗೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ನೀರೆ ಜೆಡ್ಡು ಎಂಬಲ್ಲಿ ಉಡುಪಿ-ಕಾರ್ಕಳ ಮುಖ್ಯ ರಸ್ತೆಯಲ್ಲಿ ಪಿರ್ಯಾದಿದಾರರಾದ ಬಿ ಮೊಹಮ್ಮದ್‌ (62) ತಂದೆ ದಿವಂಗತ ಅಬ್ದುಲ್‌ ಖಾದರ್‌, ವಾಸ ನಿಹಾ ಕಾಂಪೌಂಡ್‌, ಬೈಲೂರು ಹೈಸ್ಕೂಲ್‌ ಬಳಿ, ನೀರೆ ಗ್ರಾಮ, ಕಾರ್ಕಳ ತಾಲೂಕು. ಇವರು ತನ್ನ ಸಂಸಾರದೊಂದಿಗೆ ತನ್ನ ಬಾಬ್ತು ಮಾರುತಿ ಓಮಿನಿ ಕಾರು ನಂಬ್ರ ಕೆಎ 20ಪಿ 0289 ನೇಯದರಲ್ಲಿ ಉಡುಪಿಯಿಂದ ಕಾರ್ಕಳದ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಕೆಎ 34 4429 ನಂಬ್ರದ ಟಿಪ್ಪರ್‌ ಲಾರಿಯನ್ನು ಅದರ ಚಾಲಕ ರಫೀಕ್‌ ಎಂಬಾತನು ಅಮಲು ಪದಾರ್ಥವನ್ನು ಸೇವಿಸಿಕೊಂಡು ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ತನ್ನ ತೀರಾ ಬಲ ಬದಿಯಲ್ಲಿ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿ, ಬಿ ಮೊಹಮ್ಮದ್‌ ಇವರ ಮಾರುತಿ ಓಮಿನಿ ಕಾರಿನ ಬಲ ಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಬಳಿಕ, ಅಪಘಾತದ ಮಾಹಿತಿಯನ್ನು ಪೊಲೀಸರಿಗೆ ತಿಳಿಸದೇ ಸ್ಥಳದಿಂದ ತನ್ನ ಟಿಪ್ಪರ್‌ ಲಾರಿಯನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬುದಾಗಿ ಬಿ ಮೊಹಮ್ಮದ್‌ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 53/2013 ಕಲಂ 279 ಐಪಿಸಿ ಮತ್ತು ಕಲಂ 185, 134 (ಬಿ) ಮೋಟಾರು ವಾಹನ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: