Wednesday, April 24, 2013

Daily Crime Reported on 24/04/2013 at 07:00 Hrs


ಹೆಂಗಸು ಕಾಣೆ ಪ್ರಕರಣ

  • ಪಡುಬಿದ್ರಿ: ದಿನಾಂಕ 19/04/2013 ರಂದು ಮಧ್ಯಾಹ್ನ 12:30 ಗಂಟೆಗೆ ವಿಜಯ ಶೆಟ್ಟಿ ತಂದೆ ದಿವಂಗತ ಸಾದು ಶೆಟ್ಟಿ.ವಾಸ ತಡಾಯಿ ಬಿತ್ಲು ಮನೆ, ನಡ್ಸಾಲು ಗ್ರಾಮ, ಪಡುಬಿದ್ರಿ ಉಡುಪಿ ತಾಲೂಕು ಮತ್ತು ಜಿಲ್ಲೆರವರ ತಾಯಿಯಾದ ಜಲಜ ಸೆಡ್ತಿ, 65 ವರ್ಷ, ಎಂಬವರು ಅವರ ಮನೆಯಾದ ತಡಾಯಿ ಬಿತ್ಲು ಮನೆ, ನಡ್ಸಾಲು ಗ್ರಾಮ ಎಂಬಲ್ಲಿಂದ ಹೊರಗೆ ಹೋದವರು ಈವರೆಗೆ ಮನೆಗೆ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾರೆ ಎಂಬುದಾಗಿ ವಿಜಯ ಶೆಟ್ಟಿ ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 70/2013 ಕಲಂ. ಹೆಂಗಸು ಕಾಣೆಯಂತೆ  ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಕಾಣೆಯಾಗಿರುವ ಹೆಂಗಸಿನ ಚಹರೆ ಈ ಕೆಳಗಿನಂತಿದೆ.
ಹೆಸರು: ಜಲಜ ಶೆಡ್ತಿ
ವಯಸ್ಸು: 65 ವರ್ಷ
ಮೈಕಟ್ಟು: ಸಪೂರ ಶರೀರ, ಎಣ್ಣೆಕಪ್ಪು  ಮೈ ಬಣ್ಣ, ತಲೆಯಲ್ಲಿ ಬಿಳಿ ಕಪ್ಪು ಮಿಶ್ರಣ ಕೂದಲು ಇರುತ್ತದೆ
ಎತ್ತರ: ಸಾಧಾರಣ 5 ಅಡಿ ಉದ್ದ
ಉಡುಪು: ನೀಲಿ ಹಾಗೂ ಹಸಿರು ಬಣ್ಣದ ಸೀರೆ, ಹಸಿರು ಬಣ್ಣದ ರವಿಕೆ ಧರಿಸಿರುತ್ತಾರೆ. ಕುತ್ತಿಗೆಯಲ್ಲಿ  ಕಪ್ಪು ಬಣ್ಣದ ನೂಲು ಇರುತ್ತದೆ
ಭಾಷೆ: ಕನ್ನಡ, ತುಳು, ಬ್ಯಾರಿ ಭಾಷೆ ಮಾತನಾಡುತ್ತಾರೆ,

ಅಪಘಾತ ಪ್ರಕರಣ

  • ಶಿರ್ವಾ: ದಿನಾಂಕ 23/04/2013 ರಂದು ರೋಯಲ್ ರಾಕೇಶ್ ಕುಂದರ್ ಎಂಬವರು ತನ್ನ ಮೋಟಾರು ಸೈಕಲ್ ಕೆಎ 20 ವೈ 6634 ನ್ನು ಚಲಾಯಿಸಿಕೊಂಡು ಶಂಕರಪುರಕ್ಕೆ ಹೋಗುತ್ತಾ ಸಂಜೆ 4:10 ಗಂಟೆಗೆ ಶಿರ್ವ ಗ್ರಾಮದ ಪಂಜಿಮಾರು ಪಲ್ಕೆ ಎಂಬಲ್ಲಿ ತಲುಪುವಾಗ ಎದುರಿನಿಂದ ಅಂದರೆ ಕಟಪಾಡಿ ಕಡೆಯಿಂದ ಬೆಳ್ಮಣ್ ಕಡೆಗೆ ಕಾರು ನಂಬ್ರ ಕೆಎ 30 ಎಮ್  1981 ನೇದರ ಚಾಲಕ ಸುರೇಶ್ ಎಂಬಾತನು ಯಾವುದೇ ಸೂಚನೆ ನೀಡದೇ ನಿರ್ಲಕ್ಷ್ಯತನದಿಂದ ಬಲಕ್ಕೆ ತಿರುಗಿಸಿ ರೋಯಲ್ ರಾಕೇಶ್ ಕುಂದರ್ ರವರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ಬಲಕಾಲಿನ ಪಾದದ ಹತ್ತಿರ ಮೂಳೆ ಮುರಿತದ ಗಾಯವುಂಟಾಗಿರುತ್ತದೆ.ಎಂಬುದಾಗಿ ಕೃಷ್ಣ  ತಂದೆ ಬಾಬುರಾಯ ಆಚಾರ್ ವಾಸ ಶ್ರೀ ದುರ್ಗಾ ನೆಲ್ಲಿಕಟ್ಟೆ, ಬೆಳ್ಳೆ ಗ್ರಾಮ , ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಶಿರ್ವಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 45/13 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ

No comments: