Tuesday, April 23, 2013

Daily Crime Reported on 23/04/2013 at 19:30 Hrs


ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಪಡುಬಿದ್ರಿ: ದಿನಾಂಕ 23/04/2013 ಬೆಳಿಗ್ಗೆ 03.45 ಗಂಟೆಗೆ ಮಹಾದೇವ ಶೆಟ್ಟಿ, ಪೊಲೀಸ್ ಉಪನಿರೀಕ್ಷಕರು, ಪಡುಬಿದ್ರಿ ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ಹೆಜಮಾಡಿಯಲ್ಲಿ ಗಸ್ತು ಕರ್ತವ್ಯದಲ್ಲಿರುವ ಸಮಯ ಹೆಜಮಾಡಿ ಗ್ರಾಮದ  ಹೆಜಮಾಡಿ ಪೇಟೆಯಲ್ಲಿ ಬಸ್ ನಿಲ್ದಾಣದ ಹಿಂಬದಿ ಒಬ್ಬಾತನು ತನ್ನ ಇರುವಿಕೆಯನ್ನು ಮರೆ ಮಾಚಿಕೊಂಡಿರುವುದನ್ನು ಕಂಡು ಕೂಡಲೇ ಜೀಪ್ ನ್ನು  ನಿಲ್ಲಿಸಿ  ಅವನ ಬಳಿ ಹೋದಾಗ ಓಡಲೆತ್ನಿಸಿದ್ದು, ಅವನನ್ನು ಹಿಡಿದು ವಿಚಾರಿಸಲಾಗಿ ಅವರ ಹೆಸರು 1) ಮಹಮ್ಮದ್ ರಿಯಾಜ್, (26) ತಂದೆ ದಿವಂಗತ ಇಸುಬು, ವಾಸ ಸೈಟ್ ನಂಬ್ರ 421, ಮನೆ ನಂಬ್ರ 199, 7 ನೇ ಬ್ಲಾಕ್ ಕೃಷ್ಣಾಪುರ, ಸುರತ್ಕಲ್ ಎಂಬುದಾಗಿ ತಿಳಿಸಿದ್ದು ತನ್ನ ಇರುವಿಕೆಯ ಬಗ್ಗೆ ಸಮರ್ಪಕವಾಗ ಉತ್ತರ ನೀಡದೇ ಇರುವುದರಿಂದ ಯಾವುದೋ ಬೇವಾರಂಟು ತಕ್ಷೀರು ಎಸಗಲು ಬಂದಿರ ಬೇಕೆಂಬ ಅನುಮಾನದಿಂದ ವಶಕ್ಕೆ ಪಡೆದು ಅದರಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 69/13 ಕಲಂ; 109 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಂಚನೆ ಪ್ರಕರಣಗಳು
  • ಮಲ್ಪೆ: ಖಾಸಗಿ ದೂರಿನ ಸಾರಾಂಶವೇನೆಂದರೆ, ದಿನಾಂಕ 10/11/2012 ರಂದು ಸಂಜೆ 6:00 ಗಂಟೆಯ ಸಮಯಕ್ಕೆ ಶ್ರೀಮತಿ ಸರಿತಾ ಸ್ಯಂಡ್ರ ಗಂಡ ವಿವಿನ್ ಕುಮಾರ್ ಪಂಗ್ಲನ್ನ ವಾಸ ಅರುಣ ವಿಲ್ಲಾ ಸುಭಾಶ್ ನಗರ ಕುರ್ಕಾಲುರವರು ತನ್ನ ಗಂಡನ ಮನೆಯಾದ ಬೇತಲ್ ಹೌಸ್ ನಲ್ಲಿ ಸ್ನಾನಕ್ಕೆ ಹೋಗುವಾಗ ಕರಿಮಣಿ  ಸರ ಮತ್ತು ಕಿವಿಯೋಲೆಯನ್ನು ಕಿಟಕಿಯಲ್ಲಿ ಇರಿಸಿ ಹೋಗಿದ್ದು, ಸ್ನಾನ ಮಾಡಿ ಬಂದು ನೋಡುವಾಗ ಸದ್ರಿ ಆಭರಣಗಳು ಇಟ್ಟ ಸ್ಥಳದಿಂದ ಕಾಣೆಯಾಗಿರುತ್ತದೆ. ಆ ಸಮಯದಲ್ಲಿ ಮನೆಯಲ್ಲಿ ಆರೋಪಿ ರುಬಿನಾ ಜಾಕಿನ್ ಗಂಡ: ನಿಕ್ಸನ್ ದೇವ ಪ್ರಸಾದ್ ಪಂಗ್ಲನ್ನ ವಾಸ: ಬೇತಲ್ ಹೌಸ್ ಯಶಸ್ವಿನಿ ಐಸ್ ಪ್ಲಾಂಟ್ ಬಳಿ ಮಲ್ಪೆ ಕೊಳರವರು ಹಾಗೂ ಶ್ರೀಮತಿ ಸರಿತಾ ಸ್ಯಂಡ್ರ ಇಬ್ಬರೇ ಇದ್ದು, ಅವರಲ್ಲಿ ಈ ಬಗ್ಗೆ ವಿಚಾರಿಸಿ ಇಬ್ಬರೂ ಸೇರಿ ಹುಡುಕುವಾಗ ಪುನ: ಶ್ರೀಮತಿ ಸರಿತಾ ಸ್ಯಂಡ್ರರವರು ಅವರ ಕಪಾಟಿನಿಂದ ಹೊರಗೆ ತೆಗೆದಿರಿಸಿದ ಮಗುವಿನ 2 ಬಂಗಾರದ ಚೈನ್, ಗಂಡನ ಹಾಗೂ ಆಕೆಯ 2 ಬಂಗಾರದ ಚೈನ್ ಗಳು, 5 ಉಂಗುರ ಒಟ್ಟು 15 ಪವನ್ ಚಿನ್ನ  ಕಾಣೆಯಾಗಿರುತ್ತದೆ. ನಂತರ ರುಬಿನಾ ಜಾಕಿನ್ ರವರೇ ಸದ್ರಿ ಚಿನ್ನವನ್ನು ತೆಗೆದಿದ್ದಾಗಿ ಖಚಿತವಾದ್ದರಿಂದ ಮನೆಯವರೆಲ್ಲರೂ ಅವರಲ್ಲಿ ಚಿನ್ನದ ಬಗ್ಗೆ ವಿಚಾರಿಸಿದಾಗ ಅವರೇ ಚಿನ್ನ ಕದ್ದ ಬಗ್ಗೆ ಒಪ್ಪಿಕೊಂಡು ಒಂದು ವಾರದೊಳಗೆ ಹಿಂತಿರುಗಿಸುವುದಾಗಿ ಹೇಳಿ 3,00,000/- ರೂಪಾಯಿಗೆ ಆಭರಣಗಳನ್ನು ಮಾರಿರುವುದಾಗಿ ಹೇಳಿ ಇದುವರೆಗೂ ರೂ. 90,000/- ಮಾತ್ರ ಹಿಂದುರುಗಿಸಿ 2,10,000/ ರೂ.ವನ್ನು ಯಾವಾಗ ಕೇಳಿದರೂ ಕೊಡುವುದಿಲ್ಲ ಏನು ಬೇಕಾದರೂ ಮಾಡಿಕೊಳ್ಳಿ, ಎಂದು ಹೇಳಿ ಚಿನ್ನವನ್ನು ಕದ್ದು,  ಮೋಸ, ವಂಚನೆ, ನಂಬಿಕೆ ದ್ರೋಹ ಮಾಡಿರುವುದಾಗಿದೆ ಎಂಬುದಾಗಿ ಶ್ರೀಮತಿ ಸರಿತಾ ಸ್ಯಂಡ್ರರವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/2013 ಕಲಂ 380, 406, 417, 420 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಮಲ್ಪೆ: ಖಾಸಗಿ ದೂರಿನ ಸಾರಾಂಶವೇನೆಂದರೆ, ದಿನಾಂಕ 16/09/2010 ರಂದು ರಾತ್ರಿ ಶ್ರೀಮತಿ ಸುಶೀಲ ಜಗನ್ನಾಥ ಗಂಡ: ಜಗನ್ನಾಥ ವಾಸ: ಸೌಜನ್ಯ ಶ್ರೀ ಮನೆ ಟಿ.ಎ ಪೈ  ಕಡೆಕಾರು ಗ್ರಾಮರವರ ಮನೆಯಾದ ಕಡೆಕಾರು ಗ್ರಾಮದ ಸೌಜನ್ಯ ಶ್ರೀ ಮನೆಯಲ್ಲಿ ಬೆಳ್ಳಿ, ಹಣ, ಶ್ರೀಮತಿ ಸುಶೀಲ ಜಗನ್ನಾಥರವರಿಗೆ ಸೇರಿದ ಚೆಕ್ಕುಗಳನ್ನು ಆರೋಪಿ ಪುಷ್ಪರಾಜ್ ತಂದೆ: ದಿ. ಆರ್.ಪಿ ಕೋಟ್ಯಾನ್ ವಾಸ: ಧನರಾಜ್ ಪಿತ್ರೋಡಿ ಉದ್ಯಾವರರವರು ಕಳ್ಳತನ ಮಾಡಿ ತನ್ನ ಬಳಿ ಇಟ್ಟುಕೊಂಡಿದ್ದು, ಶ್ರೀಮತಿ ಸುಶೀಲ ಜಗನ್ನಾಥರವರು  ಆರೋಪಿ ಪುಷ್ಪರಾಜ್ ರವರನ್ನು ಕೆಲಸದಿಂದ ತೆಗೆದು ಹಾಕಿದ್ದರಿಂದ ಕೋಪಗೊಂಡು ದ್ವೇಷದಿಂದ ಕಳ್ಳತನ ಮಾಡಿದ ಚೆಕ್ಕು ಪುಸ್ತಕದ ಒಂದು ಚೆಕ್ಕನ್ನು ರೂ 6,50,000/- ಎಂದು ಸುಳ್ಳು ಬರೆದು ಅಕ್ರಮ ಲಾಭ ಪಡೆಯುವರೇ ಚೆಕ್ಕನ್ನು ನಿಜ ದಾಖಲೆಯೆಂದು ನಂಬಿಸಿ ಬ್ಯಾಂಕಿಗೆ ಹಾಜರುಪಡಿಸಿದ್ದಾನೆ. ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅವರಿಗೆ ಮೋಸ ಮಾಡಿರುವುದಾಗಿದೆ ಎಂಬುದಾಗಿ ಶ್ರೀಮತಿ ಸುಶೀಲ ಜಗನ್ನಾಥ ರವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/2013 457, 380, 406, 420, 468, 471 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಬ್ರಹ್ಮಾವರ: ದಿನಾಂಕ 23/04/2013 ರಂದು 10:30 ಗಂಟೆಗೆ ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ದೇವಿ ಕ್ಲಿನಿಕ್ ಎದುರು ಆರೋಪಿ ಮೊಟಾರು ಸೈಕಲ್ ಕೆಎ-20-ಇಸಿ-672 ನ್ನು ಹೆಬ್ರಿ ಕಡೆಯಿಂದ ಕೊಕ್ಕರ್ಣೆ ಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಾ ರಸ್ತೆಯ ಬದಿ ಮಗುವನ್ನು ಎತ್ತಿಕೊಂಡು ನಿಂತಿದ್ದ ರೇವತಿಗೆ ಡಿಕ್ಕಿ ಹೊಡೆದ ಪರಿಣಾಮ ರೇವತಿರವರ ಕಾಲಿನ ಮೂಳೆ ಮುರಿದ ಗಾಯವಾಗಿ ಮಗು ಸುಪ್ರಜ್ಷಳಿಗೆ ಒಳ ಜಖಂ ಆಗಿ ಪ್ರಜ್ಞೆ ಇರುವುದಿಲ್ಲ ಎಂಬುದಾಗಿ ಸಂತೋಷ್ ನಾಯ್ಕ, ತಂದೆ; ಶ್ರೀನಿವಾಸ ನಾಯ್ಕ, ವಾಸ: ದರ್ಖಾಸು ಮನೆ, ಬಳಾರು, 38 ನೇ ಕಳ್ತೂರು ಗ್ರಾಮ , ಸಂತೆಕಟ್ಟೆ ಅಂಚೆ ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 166/13 ಕಲಂ; 279.338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: