Wednesday, April 17, 2013

Daily Crime Reported on 17/04/2013 at 07:00 Hrs

ಅಪಘಾತ ಪ್ರಕರಣಗಳು
  • ಉಡುಪಿ: ದಿನಾಂಕ 16/04/2013 ರಂದು ಪಿರ್ಯಾದುದಾರರಾದ ಸೀತಾರಾಮ ಕೆಕುಡ (50) ತಂದೆ ಪಾಂಡುರಂಗ ಕೆಕುಡ ವಾಸ:ಶ್ರೀ ಪಾಂಡುರಂಗ, ಕೊಡಂಕೂರು,ನಿಟ್ಟೂರು, ಉಡುಪಿ ಅಂಚೆರವರ ತಾಯಿ ವೈಭವ್ ಮೋಟಾರ್ಸ್ ಕಡೆಯಿಂದ ಕೊಡಂಕೂರು ಜಂಕ್ಷನ್ ನ ಅವರ ಮನೆಯ ಕಡೆಗೆ ರಸ್ತೆ ದಾಟಿ ಫುಟ್ ಬಾತ್ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವ ಸಮಯ 18:30 ಗಂಟೆಗೆ ಉಡುಪಿ ಕಡೆಯಿಂದ  ಬ್ರಹ್ಮವರದ ಕಡೆಗೆ  ಅತಿ ವೇಗ ಮತ್ತು ಅಜಾಗರೂಕತಯಿಂದ ಬೈಕ್ ಸವಾರ ಶ್ರೀನಿವಾಸ ಎಂಬುವರು ತನ್ನ KA 20 EB 4424 ನೇ ವಾಹನವನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿಯವರ ತಾಯಾದ ಬಾಗೀರಥಿಯವರಿಗೆ ಡಕ್ಕಿ ಹೊಡೆದ ಪರಿಣಾಮ  ಬಾಗೀರಥಿಯವರು ರಸ್ತೆಗೆ ಬಿದ್ದು ಅವರ ತಲೆಗೆ ತೀವ್ರ ತರಹದ ಗಾಯ ಉಂಟಾಗಿ ಚಿಕಿತ್ಸೆಯ ಬಗ್ಗೆ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 22:40 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಸೀತಾರಾಮ ಕೆಕುಡರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 203/2013 ಕಲಂ 279, 304 (ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ15/04/2013 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಜಲಜಮ್ಮ ಶೆಟ್ತಿ (65) ಗಂಡ: ನಾರಾಯಣ ಶೆಟ್ಟಿ, ವಾಸ: ದಾಸನಮಕ್ಕಿ, ಅಂಪಾರು ಅಂಚೆ, ಕುಂದಾಪುರ ತಾಲೂಕು ಎಂಬವರು ಕಂಡ್ಲೂರು ಸರಕಾರಿ ಆಸ್ಪತ್ರೆಗೆ ಬಂದು ವಾಪಾಸ್ಸು ಮನೆಗೆ ಹೋಗಲು ಕಂಡ್ಲೂರು ಸರಕಾರಿ ಆಸ್ಪತ್ರೆಯ ಬಳಿ ರಸ್ತೆ ದಾಟಲು ರಸ್ತೆಯ ಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿರುವಾಗ ಅಂಪಾರು ಕಡೆಯಿಂದ ಮೋಟಾರು ಸೈಕಲ್ ನಂಬ್ರ ಕೆಎ 20 ಇಸಿ 4115ನೇದನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ತೀರಾ ಎಡ ಭಾಗಕ್ಕೆ ಬಂದು ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರಿಗೆ ಬಲಕೈಗೆ, ತಲೆಯ ಹಿಂಭಾಗಕ್ಕೆ, ಬೆನ್ನಿಗೆ  ಒಳ ಜಖಂ ಆಗಿದ್ದು, ಅವರು ಚಿಕಿತ್ಸೆಯ ಬಗ್ಗೆ ಕುಂದಾಫುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದಾಗಿದೆ ಎಂಬುದಾಗಿ ಜಲಜಮ್ಮ ಶೆಟ್ತಿರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 160/2013 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಹೆಬ್ರಿ: ದಿನಾಂಕ 13/04/13 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿದಾರರಾದ ಸುಂದರಿ ಶೇಟ್‌ (43), ಗಂಡ: ವೆಂಕಟೇಶ್‌ ಯಾದವ್‌, ವಾಸ: ಹೊಯಿಗೆ ಬೇಳಾರ್, ಸಂತೆಕಟ್ಟೆ, ಕಳ್ತೂರು ಗ್ರಾಮ ಎಂಬವರು ಅವರ ಮನೆಯ ಬದಿಯಲ್ಲಿದ್ದ ನಳ್ಳಿಯಿಂದ ನೀರು ತರಲು ಹೋದಾಗ ಅವರ ಬದಿಯ ಬಿಡಾರದಲ್ಲಿದ್ದ ಆರೋಪಿಗಳಾದ ಭವಾನಿ, ಸುರೇಂದ್ರ, ಹಾಗೂ ಸುರೇಂದ್ರನ ಹೆಂಡತಿ ಮತ್ತು ಅವರ ಮಗ ರವರು ಅಲ್ಲಿಗೆ ಬಂದು ನಳ್ಳಿ ನೀರಿನ ವಿಚಾರದಲ್ಲಿ ತಗಾದೆ ತೆಗೆದು ಅವಾಚ್ಯ ಶಬ್ದದಿಂದ ಬೈದ್ದು ಭವಾನಿ ಎಂಬವರು ಕೈಗಳಿಂದ ಪಿರ್ಯಾದಿದಾರರ ಮುಖಕ್ಕೆ, ಮೂಗಿಗೆ, ಬೆನ್ನಿಗೂ ಹೊಡೆದು ದೂಡಿ ಹಾಕಿ ಹಲ್ಲೆ ನಡೆಸಿರುವುದಾಗಿದೆ ಎಂಬುದಾಗಿ ಸುಂದರಿ ಶೇಟ್‌ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 26/2013 ಕಲಂ 504, 323 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬೈಂದೂರು: ಮೃತೆ ಕುಮಾರಿ ರಿನಾಜ್ (4) ರವರಿಗೆ ಹುಟ್ಟಿನಿಂದಲೇ ಹಿಮೋಫೀಲೀಯಾ ಕಾಯಿಲೆ ಇದ್ದು ಈ ಬಗ್ಗೆ ಚಿಕಿತ್ಸೆ ನೀಡಿದ ವೈದ್ಯರು ರಿನಾಜ್ ಳು ಬೀಳಬಾರದಾಗಿ ಜಾಗೃತೆ ವಹಿಸಿಕೊಳ್ಳಲು ಸೂಚನೆ ನೀಡಿಧ್ದು ಆದರೆ ದಿನಾಂಕ 15/04/2013 ರಂದು 13:00 ಗಂಟೆಗೆ ಕುಂದಾಪುರ ತಾಲೂಕು ಶೀರೂರು ಗ್ರಾಮದ ಆಕೆಯ ದೊಡ್ಡಮ್ಮನ ಮನೆಯಲ್ಲಿ ಆಟ ಆಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ನಂತರ ವಾಂತಿ ಮಾಡಿಕೊಂಡಿದ್ದು ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 16/04/2013 ರಂದು ಮಧ್ಯಾಹ್ನ 12:10 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಮೊಹಮ್ಮದ್ ರಫೀಕ್ (42) ತಂದೆ: ಬಿ. ಮೊಹಮ್ಮದ್ ಸಾಹೇಬ್ ವಾಸ: ಮಾರ್ಕೆಟ್ ಹ್ತತಿರ, ಶೀರೂರು  ಗ್ರಾಮ ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಬೈಂದೂರು  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 12/2013 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: