Wednesday, April 17, 2013

Daily Crime Reported As On 17/04/2013 At 17:00 Hrs


ಮನುಷ್ಯ ಕಾಣೆ ಪ್ರಕರಣ
  • ಮಲ್ಪೆ: ಪಿರ್ಯಾದಿದಾರರಾದ ರಮಾ ಬಿ ಪೂಜಾರ್ತಿ (34) ಗಂಡ ಭಾಸ್ಕರ ಸೂರ್ಯ ಪೂಜಾರಿ ಎಸ್‌. ಎಸ್‌ ಸಾಗರಹೇಟ್ ವಿಷ್ಣುಮೂರ್ತಿ ನಗರ ಕೆಳರ್ಕಳಬೆಟ್ಟ ಗ್ರಾಮ  ಇವರ ಗಂಡ ಭಾಸ್ಕರ ಸೂರ್ಯ ಪೂಜಾರಿ (49)  ಇವರು ದಿನಾಂಕ 16/04/2013 ರಂದು ಬೆಳಿಗ್ಗೆ 09:30 ಗಂಟೆಗೆ ಮನೆಗೆ ಬೀಗ ಹಾಕಿ ಹೊರಟಾಗ ರಮಾ ಬಿ ಪೂಜಾರ್ತಿ ಇವರ ಅಕ್ಕ ವಸಂತಿಯವರು ಅಲ್ಲಿಗೆ ಬಂದು ನಾನು ಈಗ ಬರುತ್ತೇನೆ ಎಂದು ಹೇಳಿ ಹೋಗಿದ್ದು ಈ ಬಗ್ಗೆ ವಸಂತಿಯವರು ರಮಾ ಬಿ ಪೂಜಾರ್ತಿ ಇವರ ಅಣ್ಣನ ಮನೆಯಲ್ಲಿರುವಾಗ ಪೋನ್ ಕರೆ ಮಾಡಿ ನಿನ್ನ ಗಂಡ ಮನೆಗೆ ಬೀಗ ಹಾಕಿ ಈಗ ಬರುತ್ತೇನೆ ಎಂದು ಹೇಳಿ ಹೋಗಿದ್ದಾರೆ ಎಂದು ತಿಳಿಸಿದ್ದು ನಾನು ಕೂಡಲೆ ಮನೆಗೆ ಬಂದು ಬೀಗ ತೆಗೆದು ಪರಿಶೀಲಿಸಿದಾಗ ಮನೆಯಲ್ಲಿ  ನನ್ನ ಗಂಡನವರ ಮೊಬೈಲ್‌ ಪೋನ್‌, ಪಾನ್‌ ಕಾರ್ಡ, ಆಧಾರ್‌ಕಾರ್ಡ ಒಂದು ಬಾಕ್ಸ್ ನಲ್ಲಿ ಇಟ್ಟಿರುವುದು ಕಂಡು ಬಂತು. ರಮಾ ಬಿ ಪೂಜಾರ್ತಿ ಇವರು  ಕೂಡಲೇ ತನ್ನ ಅಣ್ಣನವರಿಗೆ ವಿಷಯ ತಿಳಿಸಿ ಅವರು ಸಂತೆಕಟ್ಟೆ ಕಲ್ಯಾಣಪುರ ಉಡುಪಿ ಮಣಿಪಾಲ ಮುಂತಾದ ಕಡೆ ಸಂಬಂದಿಕರ ಮನೆಗಳನ್ನು ಸಂಪರ್ಕಿಸಿದಲ್ಲಿ ತನ್ನ ಗಂಡ ಪತ್ತೆಯಾಗಿರುವುದಿಲ್ಲ. ಎಂಬುದಾಗಿ ರಮಾ ಬಿ ಪೂಜಾರ್ತಿ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 67/13 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಜೀವ ಬೆದರಿಕೆ ಪ್ರಕರಣ
  • ಬ್ರಹ್ಮಾವರ: ದಿನಾಂಕ 16/04/2013 ರಂದು 13:15 ಗಂಟೆಗೆ ಯೆಡ್ತಾಡಿ ಗ್ರಾಮದ ಜಂಬೂರು ಕ್ರಾಸ್ ಎಂಬಲ್ಲಿ ಆರೋಪಿಗಳಾದ 1). ಪ್ರಶಾಂತ  ಪೂಜಾರಿ, 2). ಶಿವರಾಮ ಶೆಟ್ಟಿ, 3). ರತ್ನಾಕರ ಪೂಜಾರಿ, 4). ತಿಮ್ಮ ಮೊಗವೀರ, ಇವರುಗಳು ತಮ್ಮ ಮೋಟಾರು ಸೈಕಲ್ ನಲ್ಲಿ ಬಂದು ಪಿರ್ಯಾದಿದಾರರಾದ ಆನಂದ ಬೋವಿ (28) ತಂದೆ ದೊರೆಸ್ವಾಮಿ ವಾಸ ಮಂಜರಬೆಟ್ಟು ಯಡ್ತಾಡಿ ಗ್ರಾಮ ಇವರನ್ನು ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಪಿರ್ಯಾದಿ ಆನಂದ ಬೋವಿ ಇವರು ಪಂಚಾಯತ್ ವತಿಯಿಂದ ಕುಡಿಯುವ ನೀರು ಕೊಡದ ಬಗ್ಗೆ ಗ್ರಾಮಸ್ಥರು ಮತ್ತು ಜಯ ಕರ್ನಾಟಕ ಸಂಘಟನೆ ನೆಡೆಸಿದ ಧರಣೆ ಹಾಗೂ ಪ್ರತಿಭಟನೆಗೆ ಭಾಗವಹಿಸಿದರು ಎಂಬ ಕಾರಣಕ್ಕೆ ತಕ್ಷೀರು ಮಾಡಿದ್ದಾಗಿದೆ ಎಂಬುದಾಗಿ ಆನಂದ ಬೋವಿ  ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 164/13 ಕಲಂ 341, 323, 504, 506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
 ಆತ್ಮಹತ್ಯೆ ಪ್ರಕರಣ
  • ಕಾರ್ಕಳ: ದಿನಾಂಕ 17/04/2013 ರಂದು ಪಿರ್ಯಾದಿದಾರರಾದ ವಿನೋದ್ ಕಾಮತ್ (25) ವಾಸ ರಾಮಮಂದಿರದ ಬಳಿ, ಸಾಣೂರು ಅಂಚೆ, ಇವರು ಕಾರ್ಕಳ ಠಾಣೆಗೆ ಬಂದು ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶವೇನೆಂದರೆ, ಪಿರ್ಯಾದಿ ವಿನೋದ್ ಕಾಮತ್ ಇವರ ತಂದೆ 55 ವರ್ಷ ಪ್ರಾಯದ ವಿವೇಕಾನಂದ ಕಾಮತ್ ಇವರು ದಿನಾಂಕ 16/04/2013 ರಂದು ಸಂಜೆ 5:00 ಗಂಟೆ ಸುಮಾರಿಗೆ ಕಾರ್ಕಳ ತಾಲೂಕು ಸಾಣೂರಿನ ರಾಮ ಮಂದರಿದ ಬಳಿಯಿರುವ ತನ್ನ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ  ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಸದ್ರಿಯವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 16/04/2013 ರಂದು ರಾತ್ರಿ 08:00 ಗಂಟೆಗೆ ಮೃತಪಟ್ಟಿರುವುದಾಗಿದೆ. ಇವರು ಈ ಹಿಂದೆ ಅತೀಯಾಗಿ ಮದ್ಯಪಾನ ಮಾಡುತ್ತಿದ್ದು, ಒಂದು ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದವರು ಮನೆಯಲ್ಲೆ ಇದ್ದವರು ತನಗಿರುವ ಮಾನಸಿಕ ಖಾಯಿಲೆ ಬಗ್ಗೆ ನೊಂದುಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ ಎಂಬುದಾಗಿ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 10/13 ಕಲಂ 174 ಸಿ.ಆರ್.ಪಿ.ಸಿ ಯಂತೆ  ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕೋಟ: ಕೇರಳದ ಪಾಲಕಾಡ್ ನಿವಾಸಿ 75 ವರ್ಷ ಪ್ರಾಯದ ಮೋಹನ ಎಂಬವರು ಕೋಟೇಶ್ವರ ಪರಿಸರದಲ್ಲಿ ಭಿಕ್ಷೆ ಬೇಡಿ ತಿರುಗಾಡುತ್ತಿದ್ದವರನ್ನು ಪರಿಸರದ ಜನರು ಮಾನವೀಯ ನೆಲೆಯಲ್ಲಿ ಕುಂದಾಪುರ ತಾಲೂಕು ಕೆದೂರು ಗ್ರಾಮದ ಸ್ಪೂರ್ತಿ ವೃದ್ದಾಶ್ರಮಕ್ಕೆ ದಾಖಲಿಸಿದ್ದು, ಅನಾರೋಗ್ಯ ಪೀಡಿತ ಮೋಹನರವರು ಕಳೆದ 4 ದಿನಗಳಿಂದ ಹಾಸಿಗೆ ಹಿಡಿದಿದ್ದು, ತೀವ್ರವಾದ ಉಬ್ಬಸ ರೋಗದಿಂದ ಬಳಲುತ್ತಿದ್ದವರು ದಿನಾಂಕ 17/04/2013 ರಂದು ಮಧ್ಯಾಹ್ನ 2:30 ಗಂಟೆಗೆ ಮೃತಪಟ್ಟಿರುವುದಾಗಿ ಎಂಬುದಾಗಿ ಪಿರ್ಯಾದಿದಾರಾದ ಕೇಶವ ಕೋಟೇಶ್ವರ ಮುಖ್ಯ ಕಾರ್ಯನಿರ್ವಾಹಕರು ಸ್ಪೂರ್ತಿಧಾಮ ಕೆದೂರು ಗ್ರಾಮ ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 12/2013 ಕಲಂ 174 ಸಿ.ಆರ್.ಪಿ.ಸಿ ಯಂತೆ  ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: