Tuesday, April 16, 2013

Daily Crime Reported on 16/04/2013 at 19:30 Hrs



ವಂಚನೆ ಪ್ರಕರಣ
  • ಮಣಿಪಾಲ: ದಿನಾಂಕ 09/04/2013 ರಂದು ಪಿರ್ಯಾದಿದಾರರಾದ ಡಾ| ಕಾನಿಷ್ಕ್‌‌ ಗುಪ್ತಾ, ಅಸೋಸಿಯೆಟ್ ಪ್ರೋಫೆಸರ್‌, ಕಾಲೇಜ್ ಆಫ್‌ ಡೆಂಟಲ್ ಸಾಯನ್ಸ್‌, ಮಣಿಪಾಲ ಎಂಬವರು ಸ್ಯಾಮ್‌ಸಂಗ್ ಮೊಬೈಲನ್ನು ರೂಪಾಯಿ 5,788 ಕ್ಕೆ e-bay ಬ್ಯಾಂಕಿಂಗ್‌ ಮೂಲಕ ಖರೀದಿಸಿದ್ದು, ನಂತರ ದಿನಾಂಕ 10/04/2013 ರಂದು ಪಿರ್ಯಾದಿದಾರರು ಅಕೌಂಟನ್ನು ನೋಡಿದಾಗ ಪಿರ್ಯಾದಿದಾರರ ಎಸ್‌‌‌.ಬಿ.ಐ ಡೆಬಿಟ್‌ ಖಾತೆಯಿಂದ ಇಮೇಲ್ ಮುಖಾಂತರ  ಕ್ರಮವಾಗಿ ರೂಪಾಯಿ 20,999/-, 5,000/-, 1,002/- ಮತ್ತು 1,002/- ನ್ನು ಒಟ್ಟು ರೂಪಾಯಿ 28,004/- ಹಣವನ್ನು ಯಾರೋ ಕಳ್ಳರು ತೆಗೆದು ಪಿರ್ಯಾದಿದಾರರ ಎಕೌಂಟನ್ನು ದುರ್ಬಳಕೆ ಮಾಡಿ ಪಿರ್ಯಾದಿದಾರರಿಗೆ ವಂಚನೆ ಮಾಡಿರುತ್ತಾರೆ ಎಂಬುದಾಗಿ ಡಾ| ಕಾನಿಷ್ಕ್‌‌ ಗುಪ್ತಾರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2013 ಕಲಂ 66(ಎ)(ಡಿ) INFORMATION TECHNOLOGY ACT ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ

  • ಬೈಂದೂರು: ದಿನಾಂಕ 15/04/2013 ರಂದು ಸಂಜೆ 6:00 ಗಂಟೆಯಿಂದ ದಿನಾಂಕ:16/04/13 ರಂದು ಬೆಳಿಗ್ಗೆ 06:30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರಾದ ಟಿ ನಾರಾಯಣ ಖಾರ್ವಿ (43) ತಂದೆ:ವೆಂಕಟ ಖಾರ್ವಿ ವಾಸ: ಕಂಬದಕೋಣೆ ಜ್ಯೂನಿಯರ್ ಕಾಲೇಜಿನ ಎದುರು, ಕೆರ್ಗಾಲ್ ಗ್ರಾಮ ಕುಂದಾಪುರ ತಾಲೂಕು ರವರು ಮತ್ತು ಅವರ ಹೆಂಡತಿ ಮಕ್ಕಳು ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರು ವಾಸವಾಗಿರುವ ಮನೆಯ ಎದುರಿನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ, ಬಾಗಿಲನ್ನು ತೆರೆದು ಒಳಪ್ರವೇಶಿಸಿ, ಮನೆಯ ಒಳಗಡೆಯ ಗೋದ್ರೇಜ್ ಕಪಾಟನ್ನು ಯಾವುದೋ ಆಯುಧದಿಂದ ತೆರೆದು ಕಪಾಟಿನಲ್ಲಿದ್ದ ಸುಮಾರು 8 ಗ್ರಾಂ ತೂಕದ 3 ಚಿನ್ನದ ಉಂಗುರಗಳು ಹಾಗೂ ನಗದು ಹಣ ರೂ 7,000/- ವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವಾದ ಒಟ್ಟು ಸೊತ್ತಿನ ಅಂದಾಜು ಮೌಲ್ಯ 23,000/- ಆಗಿರುತ್ತದೆ ಎಂಬುದಾಗಿ ಟಿ ನಾರಾಯಣ ಖಾರ್ವಿರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2013 ಕಲಂ 457, 380  ಐ.ಪಿ.ಸಿ ಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಬ್ರಹ್ಮಾವರ: ದಿನಾಂಕ 16/04/2013 ರಂದು 12:30 ಗಂಟೆಗೆ ಉಡುಪಿ ತಾಲೂಕು  ಯಡ್ತಾಡಿ ಗ್ರಾಮದ ಅಲ್ತಾರು ಹುಣ್ಸೆಮಕ್ಕಿ  ಡ್ಯಾಮಿನ ಹತ್ತಿರ ಪಿರ್ಯಾದಿದಾರರಾದ ಪ್ರಶಾಂತ ಪೂಜಾರಿ (31) ತಂದೆ: ಗುಂಡು ಪೂಜಾರಿ ವಾಸ: ಸಣಗಲ್ಲು ಯಡ್ತಾಡಿ, ಅಂಚೆ ಮತ್ತು ಗ್ರಾಮ ಉಡುಪಿ ತಾಲೂಕು ಎಂಬವರು ಯಡ್ತಾಡಿ ಗ್ರಾಮ ಪಂಚಾಯತಿನ ವಾಟರ್ ಪಂಪ್ ಹೌಸ್ ಗೆ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಿರುವಾಗ ಆರೋಪಿತರಾದ 1) ಜನನಿ ದಿವಾಕರ ಶೆಟ್ಟಿ, 2) ಲೋಕೇಶ್ ಹೆಗ್ಡೆ, 3) ಆನಂದ ಬೋವಿ, 4) ಸ್ವಾಮಿನಾಥ ಬೋವಿ, 5) ಲೋಹಿತ್ ಬೋವಿ, 6) ವಸಂತ ಭಂಢಾರಿ, 7) ಹರೀಶ್ರ ಶೆಟ್ಟಿ, 8) ಸಂತೋಷ್ ಕುಂದರ್ ಮತ್ತು ಇತರರು ತಕ್ಷೀರು ನಡೆಸುವ ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ಸೇರಿಕೊಂಡು ನೀರು ಬಿಡುವ ವಿಚಾರದಲ್ಲಿ ತಗಾದೆ ತೆಗೆದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಪ್ರಶಾಂತ ಪೂಜಾರಿರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 163/2013 ಕಲಂ 143, 147, 323, 504, 506 ಜೊತೆಗೆ 149 ಐ.ಪಿ.ಸಿ ಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ದಿನಾಂಕ 14/04/2013 ರಂದು ಪಿರ್ಯಾದಿದಾರರಾದ ರಂಗಪ್ಪ (18) ತಂದೆ ಪಾರಪ್ಪ ಕವಳಿ ವಾಸ: ಕುಟುಕನ ಕೆರೆ ಬಾದಾಮಿ ತಾ ಬಾಗಲ್‌ಕೋಟೆ ಜಿಲ್ಲೆ ಎಂಬವರು ಹಾಗೂ ಅವರ ಮಾವ ಸುಮಾರು 45 ವರ್ಷ ಪ್ರಾಯದ ಪರಸಪ್ಪ ಇವರು ಮಣಿಪುರ ಗ್ರಾಮದ ಮಣಿಪುರ ಮಸೀದಿಯ ಬಳಿ ಇರುವ ಸದಾಶಿವ ಆಚಾರ್ಯ ಇವರ ಮನೆಯ ಹಳೆ ಬಾವಿ ರಿಪೇರಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ 4:00 ಗಂಟೆಗೆ ಪರಸಪ್ಪನವರು ಬಾವಿಯ ಮೇಲಿನಿಂದ ಬಾವಿಯ ದಂಡೆಯ ಕಲ್ಲನ್ನು ಹಿಡಿದುಕೊಂಡು ಬಗ್ಗಿ ಬಾವಿಯೊಳಗೆ ನೋಡುತ್ತಿದ್ದಾಗ ಆಕಸ್ಮಿಕವಾಗಿ ಕಲ್ಲು ಕಿತ್ತು ಬಂದ ಕಾರಣ ಪರಸಪ್ಪನವರು ಆಯಾ ತಪ್ಪಿ ಬಾವಿಯೊಳಗೆ ಬಿದ್ದು, ತಲೆಗೆ ಮುಖಕ್ಕೆ ತೀವ್ರ ರಕ್ತಗಾಯ ಉಂಟಾಗಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 16/04/2013 ರಂದು ಮಧ್ಯಾಹ್ನ 12:30 ಗಂಟೆಗೆ ಮೃತಪಟ್ಟಿದ್ದಾಗಿದೆ ಎಂಬುದಾಗಿ ರಂಗಪ್ಪನವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 08/2013 174 ಸಿ.ಆರ್.ಪಿ.ಸಿ ಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಅಮಿತ್‌ ಪೈ(20), ತಂದೆ: ಗೋಪಿನಾಥ ಪೈ, ವಾಸ: ಬಾಲಾಜಿ ನಿಲಯ, 1ನೇ ಮಹಡಿ, ನಿವೇದಿತಾ, ಮೊದಲನೇ ಅಡ್ಡ ರಸ್ತೆ, ಒಳಕಾಡು ಉಡುಪಿ ತಾಲೂಕು ಎಂಬವರು ದಿನಾಂಕ 13/04/2013 ರಂದು ತನ್ನ ಅಣ್ಣನ Activa Honda ನಂಬ್ರ ಕೆಎ 20 ಈಡಿ 1199ನೇದನ್ನು ಬುಡ್ನಾರ್‌ ಕಡೆಯಿಂದ ಇಂದ್ರಾಳಿ ಕಡೆಗೆ ಸವಾರಿ ಮಾಡಿಕೊಂಡು ಇಂದ್ರಾಳಿ ಸರ್ವಿಸ್‌ ಸ್ಟೇಷನ್‌ಗೆ ಹೋಗುತ್ತಿರುವಾಗ ಮಧ್ಯಾಹ್ನ 1:20 ಗಂಟೆಗೆ ಉಡುಪಿ ಮಣಿಪಾಲ ಮುಖ್ಯ ರಸ್ತೆಯ ಎಮ್‌ ಜಿ ಎಮ್‌ ಕಾಲೇಜು ಎದುರು ಉಡುಪಿಯಿಂದ ಮಣಿಪಾಲ ಕಡೆಗೆ ಎಪಿ 09 ಸಿಜೆ 6110ನೇದರ ಮೋಟಾರ್‌ ಸೈಕಲ್‌ ಸವಾರ ಕಾರ್ತಿಕ್‌ ಎಂಬಾತನು ತಾನು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್‌ ಸೈಕಲ್‌ನ್ನು ಅತೀ ವೇಗ ಮತ್ತು ಅಜಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ Activa Honda ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ವಾಹನ ಸಮೇತ ರಸ್ತೆಗೆ ಬಿದ್ದು ಅವರ ದ್ವಿಚಕ್ರ ವಾಹನದ ಎಡಭಾಗ ಮತ್ತು ಮುಂಭಾಗ ಜಖಂ ಉಂಟಾಗಿರುತ್ತದೆ. ಈ ಅಪಘಾತದಿಂದ ಪಿರ್ಯಾದಿದಾರರಿಗೆ ಯಾವುದೇ ಗಾಯ ಉಂಟಾಗಿರುವುದಿಲ್ಲ. ಅಪಘಾತವಾದ ಬಳಿಕ ಅಪಾದಿತ ಮೋಟಾರ್‌ ಸೈಕ್‌ಲ್‌ ಸವಾರ ತನ್ನ ಮೋಟಾರ್‌ ಸೈಕಲ್‌ನ್ನು ನಿಲ್ಲಿಸದೇ ಪರಾರಿಯಾಗಿದ್ದು, ಬಳಿಕ ಆತನ ವಿಳಾಸವನ್ನು ವಿಚಾರಿಸಲಾಗಿ ಮಣಿಪಾಲ ಎಮ್‌ಐಟಿ ಕಾಲೇಜಿನ ವಿದ್ಯಾರ್ಧಿ ಕಾರ್ತಿಕ್‌ ಎಂಬುವುದಾಗಿ ತಿಳಿದು ಬಂದ ಬಳಿಕ ಆತನು ಪಿರ್ಯಾದಿದಾರರ ವಾಹನಕ್ಕೆ ಆದ ನಷ್ಟವನ್ನು ಭರಿಸುವುದಾಗಿ ಹೇಳಿ ನಂತರ ನಷ್ಟವನ್ನು ಕೊಡಲು ನಿರಾಕರಿಸಿರುತ್ತಾನೆ ಎಂಬುದಾಗಿ ಅಮಿತ್‌ ಪೈ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 202/2013 ಕಲಂ 279 ಐಪಿಸಿ & 134 (ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: