Thursday, April 11, 2013

Daily Crime Reported on 11/04/2013 at 19:30 Hrs

ವರದಕ್ಷಿಣೆ ಕಾಯ್ದೆ ಪ್ರಕರಣ
  • ಉಡುಪಿ   ಪಿರ್ಯಾದಿದಾರರಾದ ಲೈಲಾ ಮೆನೆಜಸ್‌ ಗಂಡ ಇಗ್ನೆಷಿಯಸ್‌ ಮನೆಜಸ್‌ ವಾಸ ಫೆಸಿಫಿಕ್‌,2ನೇ ಮುಖ್ಯ ರಸ್ತೆ, ಗೋಪಾಲಪುರ, ಸಂತೆಕಟ್ಟೆ, ಉಡುಪಿ ತಾಲೂಕು ಎಂಬವರು ದಿನಾಂಕ 30/07/1997 ರಂದು ನೇಜಾರು ಕೆಳಾರ್ಕಳಬೆಟ್ಟು ನಿವಾಸಿ ಆರೋಪಿ ಅಲ್ಬನ್‌ ಇಗ್ನೇಷಿಯಸ್‌‌ ಮೆನೆಜಸ್‌ ಎಂಬವರನ್ನು ಕಲ್ಯಾಣಪುರ ಮೌಂಟ್ ರೋಸಾರಿ ಚರ್ಚ್‌ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು, ಆರೋಪಿಗಳಾದ ಜಾಕೋಬ್‌ ಮೆನೆಜಸ್‌‌ ಮತ್ತು  ಸ್ಟೆಲ್ಲಾ ಮನೆಜಸ್‌ ರವರು ಅಲ್ಬನ್‌ ಇಗ್ನೇಷಿಯಸ್‌‌ ಮೆನೆಜಸ್‌ ರವರ ತಂದೆ-ತಾಯಿಯವರಾಗಿರುತ್ತಾರೆ. ಮದುವೆಯ ಸಮಯ ಪಿರ್ಯಾದಿದಾರರ ಮನೆಯವರು ಆರೋಪಿಗಳ ಬೇಡಿಕೆಯಂತೆ 50 ಪವನ್‌ ಚಿನ್ನವನ್ನು ನೀಡಿ ಮದುವೆಯ ಸಂಪೂರ್ಣ ಖರ್ಚನ್ನು ಭರಿಸಿರುತ್ತಾರೆ. ಮದುವೆಯಾದ ನಂತರ ಪಿರ್ಯಾದಿದಾರರನ್ನು ಆರೋಪಿ ಅಲ್ಬನ್‌ ಇಗ್ನೇಷಿಯಸ್‌‌ ಮೆನೆಜಸ್‌ ರವರು ತಾನು ಕೆಲಸ ಮಾಡಿಕೊಂಡಿದ್ದ ಕೋಲಾರ, ಕೆಜಿಎಫ್‌ಗೆ  ಕರೆದುಕೊಂಡು ಹೋಗಿ ಅಲ್ಲಿಯೇ ಸಂಸಾರ ಮಾಡಿಕೊಂಡಿದ್ದು, ಸ್ವಲ್ಪ ಸಮಯದ ಬಳಿಕ ವಿನಾ ಕಾರಣ ಹಲ್ಲೆ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ ಪರಿಣಾಮ ಶ್ರವಣ ಶಕ್ತಿ ಸಮಸ್ಯೆ ಉಂಟಾಗಿರುತ್ತದೆ. ಪಿರ್ಯಾದಿದಾರರು ಉಡುಪಿಗೆ ಬಂದು ದಿನಾಂಕ 20/01/2013 ರಂದು ಅವರ ಅಕ್ಕನ ಮನೆಯಲ್ಲಿರುವ ಸಮಯ ಅಲ್ಲಿಗೆ ಬಂದ ಮೇಲಿನ 3 ಜನ ಆರೋಪಿತರು ಪಿರ್ಯಾದಿದಾರರ ಅಕ್ಕನಿಗೆ ಕೈಯಿಂದ ಹಲ್ಲೆ ಮಾಡಿದಲ್ಲದೆ, ನಿಮ್ನನ್ನು ಒಂದು ವಾರದೊಳಗೆ ಕೊಂದು ಮುಗಿಸುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.ಪಿರ್ಯಾದಿದಾರರು ಆರೋಪಿಗಳಲ್ಲಿ ತನ್ನನ್ನು ಮನೆಗೆ ಸೇರಿಸುವಂತೆ ಕೇಳಿ ಕೊಂಡರೂ ಕೂಡಾ ಆಸ್ತಿಯಲ್ಲಿ ಪಾಲು ಮತ್ತು ಹಣ ತಂದರೆ ಮಾತ್ರ ಮನೆಗೆ ಬಾ, ನಮಗೆ ಕಿವಿ ಸರಿಯಾಗಿ ಕೇಳಿಸದ ಹುಡುಗಿ ಅಗತ್ಯವಿಲ್ಲ ಎಂದು ವಿಚ್ಚೇದನ ನೀಡುವಂತೆ ಬಲವಂತ ಪಡಿಸಿದ್ದಾಗಿರುತ್ತದೆ ಎಂಬುದಾಗಿ ಆರೋಪಿಸಿ ಲೈಲಾ ಮೆನೆಜಸ್‌ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 195/2013 ಕಲಂ 498 (ಎ), 323, 504, 506 ಐ.ಪಿ.ಸಿ ಮತ್ತು 3,4 ವರದಕ್ಷಿಣೆ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: