Friday, April 12, 2013

Daily Crime Reported on 12/04/2013 at 07:00 Hrs

ಅಪಘಾತ ಪ್ರಕರಣಗಳು
  • ಬ್ರಹ್ಮಾವರ: ದಿನಾಂಕ 11/04/2013 ರಂದು 11:30 ಗಂಟೆಗೆ  ಉಡುಪಿ ತಾಲೂಕು ಹೊಸೂರು ಗ್ರಾಮದ ಕುರ್ಪಾಡಿ ಜಂಕ್ಷನ್ ಬಳಿ ಆರೋಪಿ ಬಸ್ಸು ನಂಬ್ರ ಕೆಎ-20-ಬಿ-5699 ನೇ ಯದರ ಚಾಲಕ ಪ್ರಶಾಂತ ಎಂಬಾತನು ಬಸ್ಸನ್ನು ಹೆಬ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಶೇಖರ ಎನ್ (23) ತಂದೆ ಸಿದ್ದಿ ನಾಗಯ್ಯ ವಾಸ ಇಂದಿರಾನಗರ, ವಾರಂಬಳ್ಳಿ ಗ್ರಾಮ ಉಡುಪಿ ತಾಲೂಕು.ಎಂಬವರು ಬ್ರಹ್ಮಾವರ ದಿಂದ ಹೆಬ್ರಿ ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದ ಟೆಂಪೋ ನಂಬ್ರ ಕೆಎ 20-ಸಿ-3618 ನೇಯದಕ್ಕೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿರುವುದಾಗಿದೆ ಎಂಬುದಾಗಿ ಶೇಖರ ಎನ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 157/2013 ಕಲಂ 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬ್ರಹ್ಮಾವರ: ದಿನಾಂಕ 11/04/2013 ರಂದು 12:30 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಸಾಧನ ಹೊಟೇಲಿನ ಎದುರು ರಾ.ಹೆ. 66ರ ಬದಿಯಲ್ಲಿ ನಿಲ್ಲಿಸಿದ ಪಿರ್ಯಾದಿದಾರರಾದ ಶಾಸಿಮ್ ಸಾಹೇಬ್ (65) ತಂದೆ: ಯಾಕೂಬ್ ಸಾಹೇಬ್ ವಾಸ: ಕೊಳಂಬೆ 52 ನೇ ಹೇರೂರು ಗ್ರಾಮ ಉಡುಪಿ ತಾಲೂಕು ಎಂಬವರ ವ್ಯಾಗನರ್ ಕಾರು ನಂಬ್ರ ಕೆ-19-ಜೆಡ್-2751 ನೇಯದಕ್ಕೆ ಆರೋಪಿ ಟಿಪ್ಪರ್ ನಂಬ್ರ ಎಪಿ-25-ಡಬ್ಲೂ -5048 ನೇ ಯದರ ಚಾಲಕ ರಾಮಚಂದ್ರ ಎಂಬಾತನು ಹಿಂಭಾಗದಲ್ಲಿದ್ದ ಪಿರ್ಯಾದಿದಾರ ಕಾರನ್ನು ಗಮನಿಸದೇ ನಿರ್ಲಕ್ಷತನದಿಂದ ಹಿಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ಕಾರು ಜಖಂಗೊಂಡಿರುವುದಾಗಿದೆ ಎಂಬುದಾಗಿ ಶಾಸಿಮ್ ಸಾಹೇಬ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 158/2013 ಕಲಂ 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ದಿನಾಂಕ 11/04/2013 ರಂದು ರಾತ್ರಿ 9:00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಬಲಿರಾಜ್  ಶೆಟ್ಟಿ ತಂದೆ ಲಕ್ಷಣ ಶೆಟ್ಟಿ ವಾಸ ಕನ್ನರಪಾಡಿ, ಕಡೆಕಾರ್ ಅಂಚೆ, ಉಡುಪಿ ತಾಲೂಕು ಎಂಬವರು ಕೆ ಎ 20 ಸಿ 4632ನೇ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಬರುವಾಗ ಶಾರದ ಕಲ್ಯಾಣ ಮಂಟಪ ಕ್ರಾಸ್ ಬಳಿ ಉಡುಪಿ ಕಡೆಯಿಂದ ಆರೋಪಿ ಕೆಎ 20 ಬಿ 7706 ಅಪೆ ಗೂಡ್ಸ್ ಟೆಂಪೊ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಶಾರದ ಕಲ್ಯಾಣ ಮಂಟಪದ ಕಡೆ ಹೋಗಲು ಒಮ್ಮೆಲೇ ವಾಹನವನ್ನು ಬಲಬದಿಗೆ ತಿರುಗಿಸಿ ಪಿರ್ಯಾಧಿಯವರ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರ ಆಟೋರಿಕ್ಷಾ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಪಿರ್ಯಾದಿದಾರರಿಗೆ ಮೂಗಿಗೆ ಮತ್ತು ಬಲ ಕೈಗೆ ನೋವುಂಟಾಗಿದ್ದು ಅಲ್ಲದೆ ಗೂಡ್ಸ್ ಟೇಂಪೋದಲ್ಲಿದ್ದ 5-6 ಜನರಿಗೂ  ಗಾಯಗಳಾಗಿರುತ್ತದೆ ಎಂಬುದಾಗಿ ಬಲಿರಾಜ್  ಶೆಟ್ಟಿರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 197/2013 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: