Thursday, April 11, 2013

Daily Crime Reported on 11/04/2013 at 17:00 Hrs

ಅಪಘಾತ ಪ್ರಕರಣಗಳು
  • ಬೈಂದೂರು: ದಿನಾಂಕ 08/04/2013 ರಂದು ಸಂಜೆ 05:30 ಗಂಟೆಗೆ ಫಿರ್ಯಾದಿದಾರರಾದ ಅಶೋಕ್ ಖಾರ್ವಿ (25) ತಂದೆ: ರಾಮ ಖಾರ್ವಿ  ವಾಸ: ಕೊಜಲನಮನೆ ನಾಗಬನದ ಹತ್ತಿರ, ತಾರಾಪತಿ, ಪಡುವರಿ ಗ್ರಾಮ ಎಂಬವರು ಪಡುವರಿ ಗ್ರಾಮದ ತಾರಾಪತಿ  ಕಡೆಯಿಂದ ಉಪ್ಪುಂದ ಕಡೆಗೆ ಹೊರಟು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ರಸ್ತೆಯ ತೀರಾ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಎದುರಿನಿಂದ ಅಂದರೆ ಉಪ್ಪುಂದ ಕಡೆಯಿಂದ ತಾರಾಪತಿ ಕಡೆಗೆ KA20W4464 ನೇ ಮೋಟಾರು ಸೈಕಲ್ ಸವಾರನು ತನ್ನ  ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ, ಫಿರ್ಯಾದಿದಾರರ ಎಡಕಾಲಿನ ಪಾದಕ್ಕೆ, ಎಡಕಾಲಿನ ಮಣಿಗಂಟು ಮುರಿತಕ್ಕೊಳಗಾಗಿ ಹಾಗೂ ತೊಡೆಯ ಮೇಲ್ಭಾಗ ತರಚಿದ ಗಾಯವಾಗಿದ್ದು, ಅಪಘಾತ ನಡೆಸಿದ ಮೋಟಾರು ಸೈಕಲ್ ಸವಾರನು ಫಿರ್ಯಾದಿದಾರರಿಗೆ ಉಪಚರಿಸದೇ ಅಪಘಾತ ಸ್ಥಳದಿಂದ ಹೊರಟು ಹೋಗಿರುವುದಾಗಿದೆ ಎಂಬುದಾಗಿ  ಅಶೋಕ್ ಖಾರ್ವಿರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 118/2013 ಕಲಂ 279,337 ಐ.ಪಿ.ಸಿ ಮತ್ತು 134 (ಎ)(ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ 11/04/2013 ರಂದು ಪಿರ್ಯಾದಿದಾರರಾದ ಓಸ್ವಾಲ್ಡ್ ರೋಷನ್ ಡಿಸೋಜ ತಂದೆ ಹೆನ್ರಿ ರಿಚರ್ಡ್‌ ಡಿಸೋಜ ವಾಸ: ನೆಲ್ಲಿಗುಡ್ಡೆ ಹೌಸ್, ಮಿಯಾರು ಗ್ರಾಮ ಕಾರ್ಕಳ ತಾಲೂಕು ಎಂಬವರು ತನ್ನ ಅಟೋರಿಕ್ಷಾ ನಂಬ್ರ ಕೆಎ-20 -125 ನೇದರಲ್ಲಿ ಮಿಯಾರು ಕಡೆಯಿಂದ ಬಾಡಿಗೆಗಾಗಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ರಿಕ್ಷಾ ಚಲಾಯಿಸಿಕೊಂಡು ಮಿಯಾರು-ಗೋಮಟಬೆಟ್ಟ ಮಾರ್ಗವಾಗಿ ಕಾರ್ಕಳ ಕಡೆಗೆ ಬರುತ್ತಿರುವಾಗ ಗೋಮಟಬೆಟ್ಟು ತಿರುವಿನ ಬಳಿ ಓರ್ವ ನೀಲಿ  ಬಣ್ಣದ ಮಾರುತಿ ಓಮಿನಿ ಕಾರು ನಂಬ್ರ ಕೆಎ-15 ಎಂ. -4521 ನೇದರ ಚಾಲಕನು ಮಾರುತಿ ಓಮಿನಿ ಕಾರನ್ನು ದಾನಶಾಲೆ ಕಡೆಯಿಂದ ಗೋಮಟಬೆಟ್ಟ ಮಾರ್ಗವಾಗಿ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ ಅಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು ಪಿರ್ಯಾದಿ ರಿಕ್ಷಾ ಚಾಲಕ ಹಾಗೂ ರಿಕ್ಷಾದಲ್ಲಿದ್ದ ಪ್ರಯಾಣಿಕರಾದ ಶ್ರೀ ಬಾಲೇಗೌಡರವರಿಗೆ ಸಾಮಾನ್ಯ ಸ್ವರೂಪದ ರಕ್ತ ಗಾಯವುಂಟಾಗಿರುವುದಾಗಿದೆ ಎಂಬುದಾಗಿ  ಓಸ್ವಾಲ್ಡ್ ರೋಷನ್ ಡಿಸೋಜರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/2013 ಕಲಂ 279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ದಿನಾಂಕ 11/04/2013 ರಂದು ಪಿರ್ಯಾದಿದಾರರಾದ ಆನಂದ ಕುಂದರ್ ತಂದೆ ಗೋಪಾಲ ಸಾಲಿಯಾನ್‌, ವಾಸ: ಶ್ರೀ ಶಬರಿ ಹೊಸಕಟ್ಟಡ, ಕಲ್ಮಾಡಿ, ಮಲ್ಪೆ ಅಂಚೆ, ಉಡುಪಿ ತಾಲೂಕು ಎಂಬವರು ತನ್ನ ಆಟೋ ರಿಕ್ಷಾ ನಂಬ್ರ ಕೆಎ 20 2275ನ್ನು ಚಲಾಯಿಸಿಕೊಂಡು ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ 09:30 ಗಂಟೆಗೆ ಕುಂಜಿಬೆಟ್ಟು ಜಂಕ್ಷನ್‌ ತಲುಪುವಾಗ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಕೆಎ 20 ಸಿ 4221ನೇ ಟಿಪ್ಪರ್‌‌ನ್ನು ಅದರ ಚಾಲಕ ಸಿದ್ದಣ್ಣ ಎಂಬವರು ಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಕೆಇಬಿ ಕ್ವಾಟ್ರಾಸ್‌ ಕಡೆಗೆ ತಿರುಗಿಸಿದ ಪರಿಣಾಮ ಟಿಪ್ಪರ್‌, ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದು, ಆಟೋ ರಿಕ್ಷಾದ ಬಲಬದಿ ಸಂಪೂರ್ಣ ಜಖಂ ಆಗಿರುತ್ತದೆ ಎಂಬುದಾಗಿ ಆನಂದ ಕುಂದರ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 196/2013 ಕಲಂ 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಕಾಪು: ದಿನಾಂಕ 10/04/2013 ರಂದು ಮದ್ಯಾಹ್ನ 1:15 ಗಂಟೆಗೆ  ಉಡುಪಿ ತಾಲೂಕು ಕೊಟ ಗ್ರಾಮದ ತೌಡಬೆಟ್ಟು ಬಳಿ  ಒಂದು  ಹುಡುಗಿ ಹಾಗೂ ಇಬ್ಬರು  ಹುಡುಗರು ನಿಂತುಕೊಂಡಿದ್ದು ಇದನ್ನು  ಕಂಡು  ಪಿರ್ಯಾದಿದಾರರಾದ ಹರೀಶ ದೇವಾಡಿಗ 53)  ತಂದೆ ದಿವಂಗತ ಅಪಯ್ಯ ದೇವಾಡಿಗ ವಾಸ ಏಣಗುಡ್ಡೆ ಗ್ರಾಮ ಕಟಪಾಡಿ ಎಂಬವರು   ಯಾಕಾಗಿ ಇಲ್ಲಿ ನಿಂತಿದ್ದೀರಿ ಎಂದು ಕೇಳಿದಕ್ಕೆ ಆಪಾದಿತ ಗೌರಿಶ ಎಂಬಾತನು ಪಿರ್ಯಾದಿದಾರ ಎಡ ಕೆನ್ನೆಗೆ  ಕೈಯಿಂದ ಹೊಡೆದನು. ಸಲ್ಪ ಸಮಯದ ಬಳಿಕ  ಪಿರ್ಯಾದಿದಾರರು  ಕೆಲಸ ಮಾಡುತ್ತಿರುವ  ಸ್ಥಳಕ್ಕೆ  ಗೌರೀಶ ಮತ್ತು  ರಾಜೇಶ  ಎಂಬವರು ಇತರ  6 ಜನ ಆರೋಪಿತರ ಜೊತೆ  ಬಂದು ಪಿರ್ಯಾದಿದಾರರಿಗೆ  ಕಬ್ಬಿಣದ ಲಿವರ್ ನಿಂದ  ಮತ್ತು  ಕೈಗಳಿಂದ ಹಲ್ಲೆ ನಡೆಸಿರುವುದಾಗಿದೆ ಎಂಬುದಾಗಿ ಹರೀಶ ದೇವಾಡಿಗರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/2013 ಕಲಂ 143, 147, 148, 323, 324 ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ದಿನಾಂಕ 10/04/2013 ರಂದು 19:00 ಗಂಟೆಗೆ ಉಡುಪಿ ತಾಲೂಕು ಕೆಂಜೂರು ಗ್ರಾಮದ ಅಮ್ಮುಂಜೆ  ಎಂಬಲ್ಲಿ ಪಿರ್ಯಾದಿದಾರರಾದ ಕೋಟಿ ಕುಲಾಲ (32) ತಂದೆ ಧೂಮ ಹಾಂಡ: ವಾಸ: ಪುಚ್ಚಾಲು ಮನೆ ಅಮುಜಿ ಕೆಂಜೂರು ಗ್ರಾಮ ಉಡುಪಿ ತಾಲೂಕು ಎಂಬವರ ತಂದೆಯವರಾದ 60 ವರ್ಷ ಪ್ರಾಯದ ಧೂಮ ಹಾಂಡ ಎಂಬವರು ಕುಡಿಯುವ ಚಟದವರಾಗಿದ್ದು, ಇತ್ತಿಚೆಗೆ ಸರಿಯಾದ ಕೆಲಸವಿಲ್ಲದೆ ಹಣದ ಅಡಚಣೆಯಿಂದ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ  ಎಂಬುದಾಗಿ ಕೋಟಿ ಕುಲಾಲರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 22/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: