Tuesday, April 30, 2013

Daily Crime Reported As On 30/04/2013 At 07:00 Hrsಅಪಘಾತ ಪ್ರಕರಣಗಳು
  • ಬೈಂದೂರು: ದಿನಾಂಕ 29/04/2013 ರಂದು ಪಿರ್ಯಾದಿದಾರರಾದ ಎನ್ ಪಿ ನಾಯಕ್ (43) ತಂದೆ ಎನ್ ಪಿ ನಾಯಕ್ ವಾಸ ತ್ರಾಸಿ ಕುಂದಾಪುರ ತಾಲೂಕು ಇವರ ಅಣ್ಣ, ಅಣ್ಣನ ಮಗಳು ರಾಧಿಕಾ ಹಾಗೂ ರಾಧಿಕಾಳ ಗಂಡ ಪ್ರಸಾದರವರೊಂದಿಗೆ ಕೆಎ 20ಪಿ 8997ನೇ ನಂಬ್ರದ ಕಾರಿನಲ್ಲಿ ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದು, ಕುಂದಾಪುರ ತಾಲೂಕು ಪಡುವರಿ ಗ್ರಾಮದ ಒತ್ತಿನೆಣೆ ಇಳಿಜಾರಿನಲ್ಲಿ ಬರುತ್ತಿರುವಾಗ ಸಮಯ 15:00 ಗಂಟೆಗೆ ಎನ್ ಪಿ ನಾಯಕ್ ರವರ ಕಾರಿನ ಎದುರುಗಡೆಯಿಂದ ಅಂದರೆ, ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಕೆಎ 31ಎಮ್ 5252 ನೇ ನಂಬ್ರದ ಕಾರಿನ ಚಾಲಕನು ತನ್ನ ಬಾಬ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ಎನ್ ಪಿ ನಾಯಕ್ ರವರ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಎನ್ ಪಿ ನಾಯಕ್‌ರವರ ಕಾರಿನಲ್ಲಿದ್ದ ರಾಧಿಕಾ ಎಂಬವರ ಮುಖಕ್ಕೆ ತೀವ್ರ ತರಹದ  ರಕ್ತಗಾಯವಾಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಎನ್ ಪಿ ನಾಯಕ್ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 140/13  ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕಗೊಳ್ಳಲಾಗಿದೆ.
  •  ಕಾಪು: ದಿನಾಂಕ 29/4/2013 ರಂದು 01:00 ಗಂಟೆಗೆ ಉಡುಪಿ ತಾಲೂಕು ಮೂಳುರು ಗ್ರಾಮದ ನಾರಾಯಣ ಗುರು ಮಂದಿರ ಬಳಿ ಎನ್ ಹೆಚ್ 66 ರಲ್ಲಿ ಇನೋವಾ ಕಾರು ನಂಬ್ರ ಕೆಎ 03ಸಿ 2466 ನೇದನ್ನು ಅದರ ಚಾಲಕ ಕಿಶನ್ ಎಂಬವರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮಲೆ ಬಲಕ್ಕೆ ತಿರುಗಿಸಿ ಎದುರಿನಿಂದ ಬರುತ್ತಿದ್ದ ಆಲ್ಟೋ ಕಾರು  ನಂಬ್ರ ಕೆಎ20ಪಿ 5298 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಲ್ಟೋ ಕಾರಿನ ಚಾಲಕ ಹರೀಶ್ ಶೆಟ್ಟಿ ಹಾಗೂ ಪಿರ್ಯಾದಿದಾರರಾದ ಶ್ರೀಮತಿ ಪ್ರತಿಬಾ (28) ಗಂಡ ಹರೀಶ್ ಶೆಟ್ಟಿ ವಾಸ ತೆಂಕರಗುತ್ತು ಹೌಸ್ ಶಿರ್ವಾ ಗ್ರಾಮ ಶಿರ್ವ ಹಾಗೂ ಅವರ ಮಗು ಪ್ರಾಪ್ತಿ ಶ್ರೀಮತಿ ಪ್ರತಿಬಾರವರ ಅಕ್ಕನ ಮಗಳು ನಿಧಿ ರವರು ಸಾಮಾನ್ಯ ಸ್ವರೂಪದ ಗಾಯಗೊಂಡು ಚಿಕಿತ್ಸ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಅಲ್ಲದೇ ಸದ್ರಿ ಕಾರಿನಲ್ಲಿದ್ದ ಶ್ರೀಮತಿ ಪ್ರತಿಬಾರವರ ಭಾವನ ಮಗ ಶಮಿತ್ ಗಾಯಗೊಂಡು ಚಿಕಿತ್ಸ ಬಗ್ಗೆ ಉಡುಪಿ ಅದರ್ಶ ಅಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಅಲ್ಲದೇ ಇನೋವಾ ಕಾರಿನಲ್ಲಿದ್ದವರು ಕೂಡಾ ಗಾಯಗೊಂಡಿರುತ್ತಾರೆ ಎಂಬುದಾಗಿ ಶ್ರೀಮತಿ ಪ್ರತಿಬಾ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 129 /13 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕಗೊಳ್ಳಲಾಗಿದೆ.
  •  ಹೆಬ್ರಿ: ದಿನಾಂಕ 29/04/13 ರಂದು ಪಿರ್ಯಾದಿದಾರರಾದ ಸುಂದರ ಎಸ್ ತಂದೆ ರಾಮ ನಾಯ್ಕ್ ವಾಸ ಜನನಿ, ವರಾಹಿ ರಸ್ತೆ, ಸಿದ್ದಾಪುರ ಗ್ರಾಮ, ಕುಂದಾಪುರ ತಾಲೂಕು ಇವರು ತಮ್ಮ ಬಾಬ್ತು ಕೆಎ 20ಇಎ 5527ನೇ ಮೋಟಾರ್‌ ಸೈಕಲ್‌ನಲ್ಲಿ ಸೋಮೇಶ್ವರ ಕಡೆಯಿಂದ ಹೆಬ್ರಿ ಕಡೆಗೆ ಬರುತ್ತಿರುವಾಗ ಸಮಯ 15:00 ಗಂಟೆಗೆ ಕಾರ್ಕಳ ತಾಲೂಕು ಹೆಬ್ರಿ ಗ್ರಾಮದ ಬಡ್ಕಿಲಾಯ ಹೋಟೆಲ್‌ ಎದುರು ತಲುಪುವಾಗ ಹಿಂದಿನಿಂದ ಅಂದರೆ ಸೋಮೇಶ್ವರ ಕಡೆಯಿಂದ ಕೆಎ 20ಇಎ 6783ನೇ ಮೋಟಾರ್ ಸೈಕಲ್‌ ಸವಾರ ರಾಮಚಂದ್ರ ಉಡುಪ ಎಂಬವರು ತನ್ನ ಬಾಬ್ತು ಮೋಟಾರ್ ಸೈಕಲ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಂದರ ಎಸ್ ರವರ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸುಂದರ ಎಸ್ ಇವರ ಹಣೆ ಹಾಗೂ ಕಣ್ಣಿನ ಬಳಿ ಗಾಯವಾಗಿರುತ್ತದೆ ಅಲ್ಲದೇ ಮೇಲಿನ ಹಲ್ಲುಗಳು ಮುರಿದಿರುತ್ತದೆ ಎಂಬುದಾಗಿ ಸುಂದರ ಎಸ್ ಇವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 33/13, ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕಗೊಳ್ಳಲಾಗಿದೆ.
  • ಶಂಕರನಾರಾಯಣ: ದಿನಾಂಕ 29/04/2013 ರಂದು 19:00 ಗಂಟೆಗೆ ಆಪಾದಿತ ಕೆಎ 205269ನೇ ನಂಬ್ರದ 407 ಲಾರಿಯನ್ನು ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಶಂಕರನಾರಾಯಣ-ಹಾಲಾಡಿ ಮುಖ್ಯರಸ್ತೆಯ ಕಟ್ಟೆಮಕ್ಕಿ ಎಂಬಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರಿನಿಂದ ಹೋಗುತ್ತಿದ್ದ ಒಂದು ಕಾರನ್ನು ಓವರ್‌ಟೇಕ್‌ಮಾಡುವ ಬರದಲ್ಲಿ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರಾದ ಶ್ರೀ ರಮಾನಂದ ನಾಯ್ಕ, ತಂದೆ ನಾಗು ನಾಯ್ಕ ವಾಸ ಯಡಮೊಗ್ಗೆ ಸೊಸೈಟಿ ಬಳಿ, ಯಡಮೊಗ್ಗೆ ಗ್ರಾಮ ಇವರ ಎಡಕೈ, ತಲೆಗೆ, ಎಡಬದಿ ತೋಳಿಗೆ ರಕ್ತಗಾಯ ಹಾಗೂ ಚಾಲಕ ಸಂತೋಷ ಕುಲಾಲ್‌  ರವರ ತಲೆಗೆ ಮತ್ತು ಮೂಗಿಗೆ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ರಮಾನಂದ ನಾಯ್ಕ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 56/13 ಕಲಂ 279. 337ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕಗೊಳ್ಳಲಾಗಿದೆ.

No comments: