Monday, April 29, 2013

Daily Crime Reported As On 29/04/2013 At 19:30 Hrs

ಕಳವು ಪ್ರಕರಣ
  • ಮಣಿಪಾಲ: ದಿನಾಂಕ 25/04/2013 ರಂದು 13:25 ಗಂಟೆಯಿಂದ 20:00 ಗಂಟೆಯ ನಡುವಿನ ಸಮಯ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕಸ್ತೂರ್ಬಾ ಆಸ್ಪತ್ರೆಯ ಹಳೆ ಟ್ರಾಮಾ ಸೆಂಟರ್ ಮತ್ತು MCOHAS ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಪಿರ್ಯಾದಿದಾರರಾದ ನೊಯೆಲ್ ಡ್ಯಾನಿಯಲ್‌ (23) ತಂದೆ ಎಂ.ಡಿ ಡ್ಯಾನಿಯಲ್‌ ವಾಸ ಕ್ವಾಟ್ರಸ್‌ ನಂ 241 ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಯುನಿವರ್ಸಿಟಿ, ಮಣಿಪಾಲ ಇವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ 20ಕೆ 9564ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಸೈಕಲಿನ ಮೌಲ್ಯ ರೂಪಾಯಿ 23,000 ಆಗಿರುತ್ತದೆ ಎಂಬುದಾಗಿ ನೊಯೆಲ್ ಡ್ಯಾನಿಯಲ್‌ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 89/2013 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಮಣಿಪಾಲ: ದಿನಾಂಕ 29/04/2013 ರಂದು 02:00 ಗಂಟೆಗೆ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಶಾಂತಿ ನಗರದಲ್ಲಿರುವ ನಿರ್ಮಾಣ ಹಂತದಲ್ಲಿರುವ ಶರನ್ಯ ಅಪಾರ್ಟ್‌ಮೆಂಟ್‌‌ ಕಟ್ಟಡದ 4ನೇ ಮಹಡಿಯ ಮೇಲೆ ಮಲಗಿದ್ದವರು ಮಳೆ ಬಂದಾಗ ಒಂದನೇ ಮಹಡಿಗೆ ಇಳಿದು ಬರುವ ವೇಳೆ ಮಹಮ್ಮದ್ ರೆಹಮತ್ ಶೇಖ್‌ (22) ತಂದೆ ಸಾಯಿದುಲ್ ಶೇಖ್‌‌, ವಾಸ ಪಾರಾ, ಕೃಷ್ಣಾಪುರ, ಸಗರ್‌ದಿಗಿ, ಮುರ್ಷಿದಾಬಾದ್‌‌, ಪಶ್ಚಿಮ ಬಂಗಾಲ ಎಂಬವರು ಆಕಸ್ಮಾತಾಗಿ ಲಿಪ್ಟ್‌ನ ಹೊಂಡಕ್ಕೆ ಬಿದ್ದು ಮೃತಪಟ್ಟಿರ ಬಹುದಾಗಿದೆ ಎಂಬುದಾಗಿ ಪಿರ್ಯಾದಿದಾರರಾದ ಎಸ್‌ ಹರಿಶ್ವಂದ್ರ ಕೋತ್ವಾಲ್ (40) ತಂದೆ ಭಾಸ್ಕರ ಕೋತ್ವಾಲ್‌ ವಾಸ ಕೋತ್ವಾಲ್ ಕಂಪೌಂಡ್‌, ಮಾರ್ಕೊಡ್‌‌, ಕೋಟೇಶ್ವರ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 21/2013 ಕಲಂ 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
 ವರಧಕ್ಷಣೆ ಕಿರುಕುಳ ಮತ್ತು ಜೀವ ಬೆದರಿಕೆ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಸಿ.ಸಿ (29) ವಾಸ ಸರ್ಕಾರಿ ಆಸ್ಪತ್ರೆ ಹಿಂದುಗಡೆ, ಕೋಡಿ, ಕಸಬ, ಕುಂದಾಫುರ ತಾಲೂಕು ಇವರು ಸುಮಾರು ಒಂದುವರೆ ವರ್ಷಗಳ ಹಿಂದೆ ಉಮೇಶ ಕೆಎಂ ಎಂಬವರೊಂದಿಗೆ ಮದುವೆಯಾಗಿದ್ದು. ದಿನಾಂಕ 29/04/2013 ರಂದು ಸುಮಾರು 11:30 ಗಂಟೆಗೆ ಆರೋಪಿ ಉಮೇಶ್ ರವರು ಶ್ರೀಮತಿ ಸಿ.ಸಿ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಕಾಲಿನಿಂದ ತುಳಿದು ನಿನ್ನನ್ನು ಕೊಂದು ಸಮುದ್ರಕ್ಕೆ ಬಿಸಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಕುತ್ತಿಗೆ ಹಿಚುಕಿರುತ್ತಾರೆ. ಅಲ್ಲದೇ ನಾನು ಬೇರೆಯವರನ್ನು ಮದುವೆ ಆಗಿದ್ದರೆ 4-5 ಲಕ್ಷ ರೂಪಾಯಿ ಹಣ ಸಿಗುತ್ತಿತ್ತು, ನಿನ್ನನ್ನು ಮದುವೆಯಾಗಿ ನನಗೆ ಏನೂ ಸಿಗಲಿಲ್ಲ ಎಂದು ಬೈದು ಹೊಡೆದು ಹಲ್ಲೆ ಮಾಡಿರುತ್ತಾರೆ. ಅಲ್ಲದೇ ದಿನಂಪ್ರತಿ ಇದೇ ರೀತಿ ಬೈದಿರುತ್ತಾರೆ ಎಂಬುದಾಗಿ ಶ್ರೀಮತಿ ಸಿ.ಸಿ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 184/13 ಕಲಂ 498(ಎ), 323, 504, 506 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: