Tuesday, April 30, 2013

Daily Crime Reported As On 30/04/2013 At 17:00 Hrs


ಅಪಘಾತ ಪ್ರಕರಣಗಳು
  • ಮಣಿಪಾಲ: ದಿನಾಂಕ 13/04/2013 ರಂದು 17:05 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪೆರಂಪಳ್ಳಿ ರಸ್ತೆಯ ಡಯಾನ ಸ್ಟೋರ್‌ ಬಳಿ ರಸ್ತೆ ಬದಿಯಲ್ಲಿ ಇರುವ ವಿದ್ಯುತ್‌ ಕಂಬಕ್ಕೆ ಲಾರಿ ನಂ ಕೆಎ 20 ಬಿ 9109 ನೇದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದು ವಿದ್ಯುತ್‌ ಕಂಬ ಜಖಂ ಆಗಿ ಸುಮಾರು 25 ರಿಂದ 30 ಸಾವಿರ ರೂಪಾಯಿ ನಷ್ಟವುಂಟಾಗಿರುತ್ತದೆ, ಅಲ್ಲದೆ ಅಪಘಾತದ ಬಳಿಕ ಅಪಘಾತವನ್ನುಂಟುಮಾಡಿದ ವಾಹನವನ್ನು ಚಾಲಕನು ವಾಹನ ಸಮೇತ ಸ್ಥಳದಿಂದ ಪರಾರಿಯಾಗಿರುತ್ತಾನೆ ಎಂಬುದಾಗಿ ಸುರೇಶ್‌ ಬಾಬು, ಶಾಖಾಧಿಕಾರಿ ಮೆಸ್ಕಾಂ, ಪುತ್ತೂರು ಶಾಖೆ, ಉಡುಪಿರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2013 ಕಲಂ: 279 ಐ.ಪಿ.ಸಿ,&134(ಬಿ) ಜೊತೆಗೆ 187 ಐ.ಎಂ.ವಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾಪು: ದಿನಾಂಕ 29/4/2013 ರಂದು ಸಂಜೆ 5.30 ಗಂಟೆಗೆ ಕೃಷ್ಣ ಶೆಟ್ಟಿ ತಂದೆ ಕರಿಯ ಶೆಟ್ಟಿ ವಾಸ ಬೈದರ್ಕಳ ಭಜನಾ ಮಂದಿರ ಬಳಿ ಸುಬಾಸ್ ನಗರ ರವರ ಕಾರು ನಂಬ್ರ ಎಂ.ಹೆಚ್.12.ಹೆಚ್.ವಿ.8513 ನೇದನ್ನು ಬಾಗಣ್ಣ ಎಂಬವರು ಚಲಾಯಿಸಿಕೊಂಡು ಉದ್ಯಾವರ ಗ್ರಾಮದ ಗುಡ್ಡೆ ಅಂಗಡಿ ಬಳಿ ತಲುಪುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಟೆಂಪೂ ನಂಬ್ರ ಕೆಎ.20.ಸಿ 3055 ನೇದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಯಾವುದೇ ಸೂಚನೆ ನೀಡದೆ ಪೂರ್ವ ದಿಕ್ಕಿಗೆ ತಿರುಗಿಸಿ ಕೃಷ್ಣ ಶೆಟ್ಟಿ ರವರ ಕಾರಿಗೆ ಢಿಕ್ಕಿ ಹೊಡೆದಿರುವುದಾಗಿದೆ.ಇದರಿಂದ ಕಾರು ಜಖಂಗೊಂಡು ಟೆಂಪೋದಲ್ಲಿದ್ದ ವ್ಯಕ್ತಿ ಗಾಯಗೊಂಡಿರುತ್ತಾರೆ ಎಂಬುದಾಗಿ ಕೃಷ್ಣ ಶೆಟ್ಟಿರವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 130/13 ಕಲಂ 279,337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ: ದಿನಾಂಕ 30/04/13 ರಂದು ಮಧ್ಯಾಹ್ನ 12:40 ಗಂಟೆಗೆ ಕುಂದಾಪುರ ತಾಲೂಕಿನ  ಕಸಬಾ ಗ್ರಾಮದ  ಹಳೇ ಬಸ್ ನಿಲ್ದಾಣದ ಬಳಿ ಪುರಸಭೆ ರಸ್ತೆಯಲ್ಲಿ, ಆಪಾದಿತ ರಾಘವೇಂದ್ರ ಎಂಬವರು KA-20-C-5800ನೇ ಬಸ್‌ನ್ನು  ಉಡುಪಿ  ಕಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು  ಬಂದು ಪ್ರಯಾಣಿಕರಿಗೆ  ಇಳಿಯಲು ಬಸ್  ನ್ನು ನಿಲ್ಲಿಸಿದ್ದು ಶ್ರೀಮತಿ ಬೇಬಿ (48) ಗಂಡ ಸದಾನಂದ ಶೆಟ್ಟಿ ವಾಸ:ದೊಡ್ಡಮನೆ, ಚೋರಬೆಟ್ಟು,ಗುಲ್ವಾಡಿ ಗ್ರಾಮ ಇವರು ಬಸ್ ನಿಂದ ಇಳಿಯುತ್ತಿರುವಾಗಲೇ  ಆಪಾದಿತನು ಒಮ್ಮೇಲೆ ವೇಗ ಹಾಗೂ ನಿರ್ಲಕ್ಷತನದಿಂದ ಮುಂದಕ್ಕೆ  ಚಲಾಯಿಸಿದ ಪರಿಣಾಮ ಅವರು  ಬಸ್ಸಿನಿಂದ  ಕೆಳಗೆ  ಬಿದ್ದು ಗಾಯಗೊಂಡಿರುತ್ತಾರೆ. ಈ ಬಗ್ಗೆ ಶ್ರೀಮತಿ ಬೇಬಿ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 33/13  ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: