Daily Crime Reports As on 22/01/2012 At 07:00 Hrs
ಆತ್ಮಹತ್ಯೆ ಪ್ರಕರಣ- ಅಜೆಕಾರು: ಸುಧಾಕರ ಶೆಟ್ಟಿ (36)ತಂದೆ : ಕೊರಗ ಶೆಟ್ಟಿ ವಾಸ: ನಲ್ಕೆದ ಬೆಟ್ಟು ಕೆರ್ವಾಶೆ ಎಂಬವರ ದಾಯಾದಿ ಸೋದರ ನಾಗೇಶ ಶೆಟ್ಟಿ ಕುಡಿತದ ಚಟ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು ಕುಡಿತದ ಚಟ ಬಿಡಲಾಗದೆ ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ 20/01/2012 ರಂದು 15-00 ಸುಮಾರಿಗೆ ಗಂಟೆಗೆ ಕೆರ್ವಾಸೆ ಗ್ರಾಮದ ಬೀಜದ ಹಾಡಿ ಎಂಬಲ್ಲಿ ಕುತ್ತಿಗೆಗೆ ನೇಣು ಬಿಗಿದುಆತ್ಮಹತ್ಯೆಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಸುಧಾಕರ ಶೆಟ್ಟಿ ರವರು ನೀಡಿದ ದೂರಿನಂತೆ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 01/2012 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣಗಳು- ಗಂಗೊಳ್ಳಿ: ದಿನಾಂಕ: 21/01/2012ರಂದು ನಾಗರಾಜ ಖಾರ್ವಿ (25)ತಂದೆ: ನಾರಾಯಣ ಖಾರ್ವಿ ವಾಸ: ಮೋಟ ಹೌಸ ಕಂಚುಗೋಡು ಗುಜ್ಜಾಡಿ ಅಂಚೆ ಹೊಸಾಡು ಗ್ರಾಮ, ಕುಂದಾಪುರ ತಾಲೂಕುರವರು ಮೀನುಗಾರಿಕೆಗೆ ಹೋದವರು ವಾಪಸ್ಸು ಮನೆಗೆ ಬರುವರೇ ಕಂಚುಗೋಡು ಬೀಚ್ ಬಳಿ ಮಧ್ಯಾಹ್ನ ಸಮಯ ಸುಮಾರು 13:00ಗಂಟೆಗೆ ಬರುತ್ತಿರುವಾಗ ಅವರ ಪರಿಚಯದ ಅಂಬರೀಷ್ ಖಾರ್ವಿ, ನಿತ್ಯಾದರ ಖಾರ್ವಿ ಮತ್ತು ಶಿವರಾಜ ಖಾರ್ವಿರವರು ಬಂದು ಅವರಿಂದ ಪಡೆದಿದ್ದ ಹಣವನ್ನು ವಾಪಸ್ಸು ಕೊಡುವಂತೆ ಕೇಳಿದಾಗ ಮನೆಗೆ ಹೋಗಿ ಬಂದು ಕೊಡುತ್ತೇನೆಂದು ಹೇಳಿದಾಗ ನಿತ್ಯಾಧರ ಖಾರ್ವಿರವರು ದೋಣೆಯ ಇಂಜಿನ ರಾಡ್ನಿಂದ ತಲೆಗೆ ಹೊಡೆದಿದ್ದು ಉಳಿದ ಇಬ್ಬರೂ ಕೈಗಳಿಂದ ಎದೆಗೆ ಬೆನ್ನಿಗೆ ಸೊಂಟಕ್ಕೆ ಹೊಡೆದರು ಆಗ ಅಲ್ಲಿ ಇದ್ದ ಪಿರ್ಯಾದಿದಾರರ ತಮ್ಮ ರಮೇಶ ಖಾರ್ವಿರವರು ನೋಡಿ ಓಡಿ ಬಂದಿದ್ದು ಅವನಿಗೆ ಕೂಡಾ ಅದೇ ರಾಡ್ ನಿಂದ ಅಂಬರೀಷ್ ಖಾರ್ವಿರವರು ತಲೆಗೆ ಮತ್ತು ಎದೆಗೆ ಹೊಡೆದರು. ಹೊಡೆದ ಎಟಿನಿಂದ ನಾಗರಾಜ ಖಾರ್ವಿ ಹಾಗೂ ರಮೇಶ ಖಾರ್ವಿರವರು ಕುಸಿದು ಬಿದ್ದಿದ್ದು ಅವರನ್ನು ಅವರ ತಮ್ಮ ಸತೀಶ ಖಾರ್ವಿರವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ನಾಗರಾಜ ಖಾರ್ವಿರವರು ಸುಮಾರು 5 ವರ್ಷಗಳ ಹಿಂದೆ ಒಂದು ಪಾತಿ ದೋಣಿಯನ್ನು ಆಪಾದಿತರಿಂದ ಖರಿದಿಸಿದ್ದು ಅದರಲ್ಲಿ ಸ್ವಲ್ಪ ಹಣ ಕೊಡಲು ಬಾಕಿಯಿದ್ದು ಆ ಹಣವನ್ನು ಆಪಾದಿತರು ಪಿರ್ಯಾದಿದಾರರಲ್ಲಿ ಕೇಳಿದಾಗ ಆಮೇಲೆ ಕೊಡುತ್ತೇನೆಂದು ಪಿರ್ಯಾದಿದಾರರು ಹೇಳಿದಾಗ ಅದೇ ಸಿಟ್ಟಿನಿಂದ ಹಲ್ಲೆ ಮಾಡಿರುವುದಾಗಿದೆ ಈ ಬಗ್ಗೆ ನಾಗರಾಜ ಖಾರ್ವಿರವರು ಆರೋಪಿಗಳ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 04/2012 ಕಲಂ 232, 324 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಗಂಗೊಳ್ಳಿ: ದಿನಾಂಕ: 21/01/2012ರಂದು 13:00ಗಂಟೆಗೆ ಅಂಬರೀಷ್ ಖಾರ್ವಿ (28)ತಂದೆ: ಶೀನಾ ಖಾರ್ವಿ ವಾಸ: ಶ್ರೀನಿವಾಸ ನಿಲಯ ಕಂಚುಗೋಡು ಗುಜ್ಜಾಡಿ ಅಂಚೆ ಹೊಸಾಡು ಗ್ರಾಮ, ಕುಂದಾಪುರ ತಾಲೂಕುರವರು ಮೀನುಗಾರಿಕೆಯ ಕೆಲಸ ಮುಗಿಸಿಕೊಂಡು ಕಂಚಗೋಡು ಬೀಚ್‌ನಲ್ಲಿ ನಡೆದುಕೊಂಡು ಬರುತ್ತಿರುವಾಗ ಅವರ ಪರಿಚಯದ ನಾಗರಾಜ ಖಾರ್ವಿ ಸತೀಶ ಖಾರ್ವಿ ರಮೇಶ ಖಾರ್ವಿ ಮತ್ತು ಹರೀಶ ಖಾರ್ವಿ ರವರುಗಳು ಅಲ್ಲಿಯೇ ಮರದ ಅಡಿಯಲ್ಲಿ ಕುಳಿತುಕೊಂಡಿದ್ದು ಫಿರ್ಯಾದಿದಾರರು ಅವರಲ್ಲಿ ಹೋಗಿ ನಾಗರಾಜ ಖಾರ್ವಿಯವರಲ್ಲಿ ಆತನಿಗೆ ಈ ಹಿಂದೆ ಮಾರಾಟ ಮಾಡಿದ ದೋಣಿಯ ಹಣವನ್ನು ಕೊಡುವಂತೆ ಕೇಳಿದ್ದಕ್ಕೆ ಆತನು ಕೊಡುವುದಿಲ್ಲವೆಂದು ಹೇಳಿದ್ದು ಆಗ ಫಿರ್ಯಾದಿದಾರರು ದೋಣಿಯನ್ನಾದರೂ ವಾಪಸ್ಸು ಕೊಡು ಎಂದು ಕೇಳಿದಾಗ ನಾಗರಾಜ ಖಾರ್ವಿಯವರು ಅಲ್ಲಿ ಇದ್ದ ಮರದ ದೊಣ್ನೆಯಿಂದ ಪಿರ್ಯಾದಿದಾರರ ಸೊಂಟಕ್ಕೆ ಹೊಡೆದರು ಉಳಿದವರು ಕೈಗಳಿಂದ ಬಲಕೈಗೆ ಬೆನ್ನಿಗೆ ಹೊಡೆದಿರುತ್ತಾರೆ. ಹೊಡೆದ ಎಟಿನಿಂದ ಪಿರ್ಯದಿದಾರರು ಅಲ್ಲಿಯೇ ಕುಸಿದು ಬಿದ್ದದ್ದು ಅವರನ್ನು ಅವರ ಅಣ್ಣ ನಿತ್ಯಾಧರ ಖಾರ್ವಿ ಚಿಕಿತ್ಸೆಗೆ ಕುಂದಾಪುರ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಸದ್ರಿ ಹಲ್ಲೆ ಗೆ ಪಿರ್ಯಾದಿದಾರರು ಸುಮಾರು 5 ವರ್ಷಗಳ ಹಿಂದೆ ಒಂದು ಪಾತಿ ದೋಣಿಯನ್ನು ನಾಗರಾಜ ಖಾರ್ವಿರವರಿಗೆ ನೀಡಿದ್ದು ಅದರ ಹಣವನ್ನು ಕೊಡದೇ ಇರುವುದರಿಂದ ಆ ಹಣವನ್ನು ಪಿರ್ಯಾದಿದಾರರು ಈ ದಿನ ಕೇಳಿದಾಗ ಆಪಾದಿತರು ಅದೇ ಸಿಟ್ಟಿನಿಂದ ಹಲ್ಲೆ ಮಾಡಿರುತ್ತಾರೆ ಈ ಬಗ್ಗೆ ಅಂಬರೀಷ್ ಖಾರ್ವಿ ರವರು ಆರೋಪಿಗಳ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 05/2012 ಕಲಂ 232, 324 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಮಣಿಪಾಲ: ದಿನಾಂಕ 21.01.2012 ರಂದು ಪಿಟ್ಟಿ ನಾಗೇಶ (42) ತಂದೆ: ದಿ ಬಸವ ಶೇರಿಗಾರ ವಾಸ: ಇಂದಿರನಗರ 1ನೇ ಕ್ರಾಸ್, “ಸುಮಂಗಲ”ಕುಕ್ಕಿಕಟ್ಟೆ, 76ಬಡಗಬೆಟ್ಟು,ಉಡುಪಿ ತಾಲೂಕು ಎಂಬವರು ಹೋಗುವ ರಿಕ್ಷಾವನ್ನು ಆರೋಪಿತರುಗಳಾದ ಗುರುಪ್ರಸಾದ ವಾಸ: ಕುಕ್ಕಿಕಟ್ಟೆ, ಅಲೆವೂರು ಗ್ರಾಮ, ಉಡುಪಿ ತಾಲೂಕು ಮತ್ತು ಇತರ 5 ಜನರುಗಳು ಓಮ್ನಿ ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಶನ್ ಬಳಿ ರಾತ್ರಿ ಸುಮಾರು 11.00 ಗಂಟೆಗೆ ಅಕ್ರಮ ಕೂಟ ಸೇರಿ ಸಮಾನ ಉದ್ದೇಶದಿಂದ ಕೈಯಲ್ಲಿ ತಲವಾರು ಹಿಡಿದು ರಿಕ್ಷಾದ ಬಳಿ ಬಂದು ಕೊಲ್ಲುವ ಉದ್ದೇಶದಿಂದ ತಲವಾರು ಬೀಸಿದ್ದು ತಲವಾರು ರಿಕ್ಷಾದ ಟಾಪಿಗೆ ತಾಗಿ ರಿಕ್ಷಾದ ರಾಡ್ ಕಳಚಿ ಗೆಳೆಯ ಅನ್ವರ್‌ಗೆ ಎಡ ತೊಡೆಗೆ ಹೆಪ್ಪು ಗಟ್ಟಿದ ಗಾಯವಾಗಿದ್ದು ಆರೋಪಿಗಳು ಕಳೆದ ವರ್ಷ ವಿನೋದ ಶೆಟ್ಟಿಗಾರನನ್ನು ಕೊಲೆ ಮಾಡಿಸಿದ್ದಾಗಿದೆ ಎಂಬ ಉದ್ದೇಶದಿಂದ ಈ ಕೃತ್ಯ ಮಾಡಿದ್ದಾಗಿದೆ.ಈ ಬಗ್ಗೆ ಪಿಟ್ಟಿ ನಾಗೇಶ ರವರು ಮಣಿಪಾಲ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 23/2012 ಕಲಂ 143, 147,148, 307 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment