Sunday, January 22, 2012

Daily Crime Reports As on 22/01/2012 At 17:00 Hrs

ಅಪಘಾತ ಪ್ರಕರಣಗಳು
  • ಕೋಟ: ದಿನಾಂಕ 14/01/2012 ರಂದು ಪಿರ್ಯಾದಿ ಮಂಜುನಾಥ ಜಿ.ಮೆಂಡನ್ ತಂದೆ:ಗಣಪ ಬಂಗೇರ ವಾಸ: ಹನಬೆಟ್ಟು ಮನೆ ಮರವಂತೆ ಕುಂದಾಪುರ ತಾಲೂಕುರವರು ತನ್ನ ತಾಯಿಯನ್ನು ಚಿಕಿತ್ಸೆಯ ಬಗ್ಗೆ ಕೆ..-20 ಬಿ-188 ನೇ ಆಂಬುಲೆನ್ಸ್ ನಲ್ಲಿ ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ಮಧ್ಯಾಹ್ನ ಸಮಯ 15:20 ಗಂಟೆಗೆ ರಾ.ಹೆ.66 ರಲ್ಲಿ ಹೋಗುತ್ತಾ ಗುಂಡ್ಮಿ ಗ್ರಾಮದ ಸಾಸ್ತಾನ ಸಮೀಪ ತಲುಪುವಾಗ್ಯೆ ಎದುರುಗಡೆಯಿಂದ ಬರುತ್ತಿದ್ದ ಒಂದು ವಾಹನವನ್ನು ನೋಡಿ ಗಲಿಬಿಲಿಗೊಂಡು ಆಂಬುಲೆನ್ಸನ್ನು ಚಲಾಯಿಸುತ್ತಿದ್ದ ಅದರ ಚಾಲಕ ದಿನೇಶ ಎಂಬವರು ರಾ.ಹೆ.66 ತೀರ ಎಡ ಬದಿಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಆಂಬುಲೆನ್ಸ್ ಅಲ್ಲಿಯೇ ಪಕ್ಕದಲ್ಲಿರುವ ಹೊಂಡಕ್ಕೆ ಬಿದ್ದ ಪರಿಣಾಮ ಆಂಬುಲೆನ್ಸ ನಲ್ಲಿ ಪ್ರಯಾಣಿಸುತ್ತಿದ್ದ ಮಂಜುನಾಥ ಜಿ.ಮೆಂಡನ್ ರವರಿಗೆ, ಅವರ ಪತ್ನಿ ಶ್ರೀಮತಿ ಇಂದಿರಾ, ಹಾಗೂ ಮಂಜುನಾಥ ಜಿ.ಮೆಂಡನ್ ರವರ ಅಣ್ಣ ಕುಷ್ಟ ಮೊಗೇರ ಎಂಬವರಿಗೆ ಬೆನ್ನಿಗೆ ಗುದ್ದಿದ ಒಳ ನೋವು ಉಂಟಾಗಿದ್ದು ಮಂಜುನಾಥ ಜಿ.ಮೆಂಡನ್ ರವರಿಗೆ ಹಾಗೂ ಅವರ ಪತ್ನಿಗೆ ಸಾಧಾರಣ ಪ್ರಮಾಣದ ನೋವು ಉಂಟಾಗಿದ್ದರಿಂದ ಯಾವುದೇ ಚಿಕಿತ್ಸೆ ಪಡೆಯದೇ ಇದ್ದು ಮಂಜುನಾಥ ಜಿ.ಮೆಂಡನ್ ರವರ ಅಣ್ಣ ಕುಷ್ಟ ಮೊಗೇರರವರಿಗೆ ತೀವ್ರ ತರನಾದ ಪೆಟ್ಟಾದ್ದರಿಂದ ಅವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ವಿನಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಗೆ ದಾಖಲಿಸಿದ್ದಾಗಿದೆ ಎಂಬುದಾಗಿ ಮಂಜುನಾಥ ಜಿ.ಮೆಂಡನ್ ರವರು ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2012 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಹೆಬ್ರಿ: ಪಿರ್ಯಾದಿ ಜೋಜಿ.ಕೆ. ಜೋಸೆಫ್‌ (34), ತಂದೆ: ಜೋಸೆಫ್ಥಾಮಸ್‌, ವಾಸ: ಕೆರೆಬೈಲು ಮನೆ, ಅರಸಿನಕಾನ್‌, ಶೇಡಿಮನೆ ಗ್ರಾಮ, ಕುಂದಾಪುರ ತಾಲೂಕುರವರು ದಿನಾಂಕ 22/01/12 ರಂದು ತನ್ನ ಕೆಎ.20.ವಿ.527 ನೇ ಮೋಟಾರ್ ಸೈಕಲ್ನಲ್ಲಿ ತನ್ನ ಮನೆಯಿಂದ ಹೊರಟು ಮಾಂಡಿ ಮುರ್ಕೈ ಮುಖಾಂತರ ಹೆಬ್ರಿ ಕಡೆಗೆ ಬರುತ್ತಿರುವಾಗ ಸಮಯ ಮದ್ಯಾಹ್ನ 12:30 ಗಂಟೆಗೆ ಕಾರ್ಕಳ ತಾಲೂಕು ಹೆಬ್ರಿ ಗ್ರಾಮದ ಹೆಬ್ರಿ ರಾಘವೇಂದ್ರ ಮಠದ ಬಳಿ ತಿರುವಿನಲ್ಲಿ ತಲುಪುವಾಗ್ಗೆ ಎದುರಿನಿಂದ ಅಂದರೆ ಹೆಬ್ರಿ ಕಡೆಯಿಂದ ಕೆಎ.19.2856 ನೇ ಟ್ಯಾಂಕರ್‌‌ ಚಾಲಕನು ತನ್ನ ಟ್ಯಾಂಕರ್ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜೋಜಿ.ಕೆ. ಜೋಸೆಫ್ರವರ ಮೋಟಾರ್ ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಕೆಳಗೆ ಬಿದ್ದು ಗಾಯಗೊಂಡಿರುತ್ತಾರೆ. ಅಲ್ಲದೇ ಆರೋಪಿ ಟ್ಯಾಂಕರ್ ಚಾಲಕನು ವಾಹನವನ್ನು ನಿಲ್ಲಿಸದೇ ಹೋಗಿರುತ್ತಾನೆ ಎಂಬುದಾಗಿ ಜೋಜಿ.ಕೆ. ಜೋಸೆಫ್ರವರು ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅಪರಾಧ ಕ್ರಮಾಂಕ 03/12 ಕಲಂ: 279, 337 ಐಪಿಸಿ & 134()(ಬಿ) ಜೊತೆಗೆ 189 ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: