Saturday, January 21, 2012

Daily Crime Reports As on 21/01/2012 At 17:00 Hrs

ಅಪಹರಣ ಪ್ರಕರಣ
  • ಮಲ್ಪೆ: ಭಾಸ್ಕರ ಬಂಗೇರ (47) ತಂದೆ: ದಿ: ಕಾಪಿರ ಸಾಲಿಯಾನ್ ವಾಸ: ದುರ್ಗ ಪರಮೇಶ್ವರಿ ದೇವಸ್ಥಾನ ಕೋಡಿಬೇಂಗ್ರೆ ಎಂಬವರ ಮಗಳಾದ ಕು:ಸೌಜನ್ಯ (17) ಉಡುಪಿಯ ಗಲ್ರ್ಸ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಭ್ಯಾಸ ಮಾಡುತ್ತಿದ್ದು, ದಿನಾಂಕ 13-01-2012 ರಂದು ಕಾಲೇಜಿಗೆಂದು ಬೆಳಿಗ್ಗೆ 08.15 ಗಂಟೆಗೆ ಹೋದವಳು ಸಂಜೆಯಾದರೂ ಮನೆಗೆ ಬಾರದಿದ್ದಾಗ ಕಾಲೇಜಿಗೆ ದೂರವಾಣಿ ಕರೆ ಮಾಡಿ ವಿಚಾರಿಸಲಾಗಿ ಅವಳು ಆ ದಿನ ಕಾಲೇಜಿಗೆ ಹೋಗಲೇ ಇಲ್ಲವೆಂದು ತಿಳಿದು ಬಂದಿದ್ದರಿಂದ ಅವರ ಸಂಬಂಧಿಕರ ಮನೆಗಳಲ್ಲೆಲ್ಲಾ ಹುಡುಕಾಡಿದರು ಅವಳ ಪತ್ತೆಯಾಗಲಿಲ್ಲ. ನಂತರ ಅವಳಿಗೆ ಯಾವಾಗಲೂ ಮೊಬೈಲ್ ಕರೆ ಮಾಡುತ್ತಿದ್ದ ಮಲ್ಪೆ ಕಲ್ಮಾಡಿಯ ದೀಕ್ಷಿತ್ ಎಂಬುವನ ಮನೆಗೆ ಹೋಗಿ ವಿಚಾರಿಸಿದಲ್ಲಿ ಅವನೂ ಅದೇ ದಿನ ಕಾಣೆಯಾಗಿರುವುದಾಗಿ ತಿಳಿದು ಬಂತು. ನಂತರ ಅವನ ಸಂಬಂಧಿಕರ ಮನೆಗಳಲ್ಲಿಯೂ ಇದುವರೆಗೂ ಹುಡುಕಾಡಿದರೂ ಅವಳ ಪತ್ತೆಯಾಗದೇ ಇದ್ದು, ಅವಳನ್ನು ದೀಕ್ಷಿತ್‌ನು ಪುಸಲಾಯಿಸಿ ಅಪಹರಣ ಮಾಡಿ ಎಲ್ಲಿಯೋ ಅಡಗಿಸಿಟ್ಟಿರಬಹುದು ಈ ಬಗ್ಗೆ ಭಾಸ್ಕರ ಬಂಗೇರರವರು ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 10/2012 ಕಲಂ 365, 363 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಮಲ್ಪೆ: ಉಡುಪಿ ತಾಲೂಕು ತೆಂಕನಿಡಿಯೂರು ಗ್ರಾಮದ ತೊಟ್ಟಂ ಬೈಲಕೆರೆ ಕೂಡು ರಸ್ತೆಯು ತೆಂಕನಿಡಿಯೂರು ಗ್ರಾಮ ಪಂಚಾಯತಗೆ ಸೇರಿದ್ದಾಗಿದ್ದು ಈ ರಸ್ತೆಯನ್ನು ಅಬಿವ್ರದ್ದಿ ಪಡಿಸಲು ಸರಕಾರದ ಪ್ರಕ್ರತಿ ವಿಕೋಪ ನಿಧಿಯಿಂದ ಉಡುಪಿ ವಿದಾನ ಪರಿಷತ್ ಸದಸ್ಯರಾದ ಮಾನ್ಯ ಪ್ರತಾಪ ಚಂದ್ರ ಶೆಟ್ಟಿಯವರ ಅನುದಾನದಲ್ಲಿ ಭರಿಸಿದ ಫಂಡಿನಿಂದ ಕಂಟ್ರಾಕ್ಟದಾರರಾದ ಶ್ರೀಯುತ ಜೀವನ್ ಶೆಟ್ಟಿಯವರು ರಸ್ತೆ ಅಬಿವ್ರದ್ದಿ ಕಾಮಗಾರಿಯನ್ನು ವಹಿಸಿಕೊಂಡು ತಮ್ಮ ಕೆಲಸದಾಳುಗಳ ಮುಖಾಂತರ ತೊಟ್ಟಂ ಬೈಲಕೆರೆ ಕೂಡುರಸ್ತೆಯಲ್ಲಿ ಅಬಿವ್ರದ್ದಿಯ ಕಾಮಗಾರಿ ನಡೆಸುತ್ತಿರುವ ಸಂದರ್ಬದಲ್ಲಿ ದಿನಾಂಕ 13/01/2012 ರಂದು ತೆಂಕನಿಡಿಯೂರು ಗ್ರಾಮದ ತೊಟ್ಟಂ ನಿವಾಸಿಯಾದ ಶ್ರೀಯುತ ಕೆಲ್ವೀನ್ ಡಿ ಸೋಜಾ (47) ತಂದೆ: ದಿ ಚಾರ್ಲ್ಸ್ ಡಿ ಸೋಜಾ ಇವರು ರಸ್ತೆ ಕಾಮಗಾರಿಯ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಅಡ್ಡಿ ಪಡಿಸಿ ಕೆಲಸ ನಿಲ್ಲಿಸಲು ಹೇಳಿದಾಗ ಕಾರ್ಮಿಕರು ನಿರಾಕರಿಸಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿರುತ್ತಾರೆ ಅಲ್ಲದೆರೋಲರ್ ಯಂತ್ರದ ಚಾಲಕನಿಗೆ ಮತ್ತು ಕಂಟ್ರಾಕ್ಟದಾರರ ಸೂಪರವೈಸರ್ ವಾಸುರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಮಾಡಿರುತ್ತಾರೆ ಇದರಿಂದ ವಾಸುರವರು ಮಾನಸಿಕವಾಗಿ ನೊಂದು ಕೆಲಸ ನಿಲ್ಲಿಸಿದ್ದರು ಅಲ್ಲದೆ ಕೆಲ್ವಿನ್ ರವರು ಪಂಚಾಯತಿನ ರಸ್ತೆಯನ್ನು ಅಗೆದು ಹೊಂಡಮಾಡಿ ನಷ್ಟ ಉಂಟು ಮಾಡಿರುತ್ತಾರೆ ಈ ಬಗ್ಗೆ ಯತೀಶ್‌ ಕರ್ಕೆರ ಅಧ್ಯಕ್ಷರು ತೆಂಕನಿಡಿಯೂರು ಗ್ರಾಮ ಪಂಚಾಯತ್‌‌ರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 11/2012 ಕಲಂ 323, 341, 431, 504, 506 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮೋಸ ಪ್ರಕರಣ- ಖಾಸಗಿ ದೂರು ದಾಖಲು
  • ಕುಂದಾಪುರ: ಕುಮಾರಿ ದಿವ್ಯ (21) ತಂದೆ; ಸಂಜೀವ ಶೆಟ್ಟಿಗಾರ ವಾಸ: ಮೈನ್ ರೋಡ್ ಕೊಟೇಶ್ವರ ಕುಂದಾಪುರ ಎಂಬವರಿಗೆ ಆರೋಪಿ ಮಂಜುನಾಥ ಗಾಣೀಗ (26) ತಂದೆ: ಅಣ್ಣಪ್ಪ ಗಾಣಿಗ ವಾಸ: ದೋಡ್ಡೊಣಿ ರಸ್ತೆ, ಕೊಟೇಶ್ವರ ಗ್ರಾಮ ಕುಂದಾಪುರ ಎಂಬಾತನ ತಂದೆಯ ಪರಿಚಯವಿದ್ದು, ಇದೇ ಕಾರಣಕ್ಕಾಗಿ ಮನೆಗೆ ಬಂದು ಹೋಗುತ್ತಿದ್ದು ನಂತರ ತನಗೂ ಆರೋಪಿಗೂ ಪರಿಚಯವಾಗಿ, ನಂತರ ಇಬ್ಬರೂ ಪ್ರೇಮಿಸಿರುತ್ತಾರೆ. ಹೀಗಿರುತ್ತಾ ದಿನಾಂಕ 25-12-11 ರಂದು ಆರೋಪಿಯು ಮನೆಗೆ ಬಂದು ಮಧುವೆಯಾಗುವುದಾಗಿ ನಂಬಿಸಿ, ದೈಹಿಕ ಸಂರ್ಪಕ ಮಾಡಿ ಮದುವೆಯಾಗದೇ ಮೋಸಮಾಡಿರುವುದಾಗಿದೆ ಎಂಬುದಾಗಿ ಕುಮಾರಿ ದಿವ್ಯರವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದು ಅದರಂತೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/2012 ಕಲಂ 376 417 420 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: