ಮನೆ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ ಮಲ್ಪೆ ಪೊಲೀಸು ಠಾಣಾ ಅ.ಕ್ರ. 37/2014 ಕಲಂ 457, 380 ಐಪಿಸಿ ಪ್ರಕರಣಕ್ಕೆ ಸಂಬಂದಿಸಿ ಆರೋಪಿ ಗಿರೀಶ್ ಪ್ರಾಯ:22, ತಂದೆ:ಚಂದ್ರ ಶೇಖರ, ವಾಸ: ರಾಘವೇಂದ್ರ ಭಜನಾ ಮಂದಿರದ ಹತ್ತಿರ ಗುಜ್ಜರಬೆಟ್ಟು ಪಡುತೋನ್ಸೆ ಗ್ರಾಮ ಉಡುಪಿ ತಾಲೂಕು ಎಂಬಾತನನ್ನು ದಸ್ತಗಿರ ಮಾಡಿ ಸ್ವಾ ಇಚ್ಚಾ ಹೇಳಿಕೆಯಲ್ಲಿ ತಿಳಿಸಿದಂತೆ ವಿವಿಧ ಪ್ರಕರಣಗಳಿಗೆ ಸಂಬಂದಿಸಿದಂತೆ ಚಿನ್ನಾಭರಣಗಳಾದ ಕರಿಮಣಿ ಸರ-1 ,ಹಾಗೂ ಚಿನ್ನದ ಚೈನ್-1 ಹಾಗೂ ಬ್ರೇಸ್ಲೈಟ್-1 ಮತ್ತು ಲ್ಯಾಪ್ ಟ್ಯಾಪ್-1 ಸ್ಯಾಮ್ಸಾಂಗ್ ಮೊಬೈಲ್ ಪೋನು-1 ಹಾಗೂ ಕೃತ್ಯಕ್ಕೆ ಬಳಸಿರುವ ಮೋಟಾರು ಸೈಕಲ್ ಕೆ.ಎ.20.ಡಬ್ಲ್ಯೂ.2345 ಹೊಂಡ ಕಂಪನಿಯ ಮೋಟಾರು ಸೈಕಲ್-1 ಒಟ್ಟು ರೂ 2,60,000/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿರುವುದಾಗಿದೆ.
ಈ ಕಾರ್ಯಚರಣೆಯನ್ನು ಶ್ರೀ ಅಣ್ಣಾಮಲೈ ಐ.ಪಿ.ಎಸ್ ಪೊಲೀಸು ಅಧೀಕ್ಷಕರು ಉಡುಪಿ ಜಿಲ್ಲೆ ಹಾಗೂ ಶ್ರೀ ಸಂತೋಷ್ ಕುಮಾರ್, ಹೆಚ್ಚುವರಿ ಪೊಲೀಸು ಅಧೀಕ್ಷಕರು ಉಡುಪಿ ಜಿಲ್ಲೆರವರ ಮಾರ್ಗದರ್ಶನದಲ್ಲಿ, ಕೆ.ಎಮ್. ಚಂದ್ರ ಶೇಖರ್ ಪೊಲೀಸು ಉಪಾಧೀಕ್ಷಕರು ಉಡುಪಿ ಉಪ ವಿಭಾಗರವರ ನಿರ್ದೆಶನದಲ್ಲಿ ಶ್ರೀಕಾಂತ್ ಕೆ. ಪೊಲೀಸು ವೃತ್ತ ನಿರೀಕ್ಷಕರು ಉಡುಪಿ ವೃತ್ತ ಮತ್ತು ಪಿ.ಎಸ್.ಐ ಮಲ್ಪೆ ರವಿಕುಮಾರ್ ರವರ ಜಂಟಿ ಕಾರ್ಯಚರಣೆಯಲ್ಲಿ ಸಿಬ್ಬಂದಿಯವರಾದ ಯು.ವೆಂಕಟೇಶ್, ಗೌರಿಶಂಕರ್, ಜಗದೀಶ್, ಸಂತೋಷ್ ಕುಂದರ್, ಲೊಕೇಶ್, ಇಮ್ರಾನ್, ದಿನೇಶ್, ಕೃಷ್ಣ, ಮಂಜು, ಸಂತೋಷ್, ಸತೀಶ್, ಪ್ರಕಾಶ್ ಪಾಲ್ಗೊಂಡಿರುತ್ತಾರೆ.
No comments:
Post a Comment