ಮಟ್ಕಾ ಜುಗಾರಿ ಪ್ರಕರಣ
- ಕುಂದಾಪುರ : ದಿನಾಂಕ 22/01/2015 ಉಡುಪಿ ಜಿಲ್ಲಾ ಅಬಕಾರಿ ಜಾರಿ ಮತ್ತು ಲಾಟರಿ ನಿಷೇದ ದಳದ ಪಿ.ಎ. ಎಸ್.ವಿ. ಗಿರೀಶ್ ಸಿಬ್ಬಂದಿಯವರಾದ ಹೆಚ್.ಸಿ. 2111 ನೇಯವರು ಮತ್ತು ಜೀಪು ಚಾಲಕ ಎ.ಸಿ.ಸಿ. 251 ನೇ ನವೀನ್ ಚಂದ್ರರವರೊಂದಿಗೆ ಇಲಾಖಾ ಜೀಪು ನಂಬ್ರ KA-20-G-251 ನೇಯದರಲ್ಲಿ ಕಚೇರಿಯಿಂದ ಹೊರಟು ಕುಂದಾಪುರ ಪೇಟೆ ಪರಿಸರದಲ್ಲಿ ಸಂಚರಿಸಿಕೊಂಡಿರುವಾಗ ಕುಂದಾಪುರ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದುದ್ದನ್ನು ಖಚಿತಪಡಿಸಿಕೊಂಡು. 19-30 ಗಂಟೆಯ ಸಮಯಕ್ಕೆ ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿದಾಗ ಅಲ್ಲಿ ಸೇರಿದ ಸಾರ್ವಜನಿಕರು ಓಡಿ ಹೋಗಿದ್ದು, ಅವರೊಂದಿಗೆ ಮಟ್ಕಾಜುಗಾರಿ ಆಟ ನಡೆಸುತ್ತಿದ್ದವರಲ್ಲಿ ಓರ್ವ ವ್ಯೆಕ್ತಿ ಓಡಿ ಹೋಗಿದ್ದು, ಇನ್ನೊಬ್ಬ ವ್ಯೆಕ್ತಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು 1) ನಾಗರಾಜ ಪೂಜಾರಿ ಪ್ರಾಯ 43 ವರ್ಷ ತಂದೆ: ಕೊರಗ ಪೂಜಾರಿ ವಾಸ: ಹೊಸ ಬಡಾಕೇರಿ ಹಳವಳ್ಳಿ ಕೊಟೇಶ್ವರ ಗ್ರಾಮ ಕುಂದಾಪುರ ತಾಲೂಕು ಎಂದು ತಿಳಿಸಿದ್ದು, ಮಟ್ಕಾ ಜುಗಾರಿ ಆಟವನ್ನು ಆಡಿಸುವ ಬಿಡ್ಡರ್‌ನ ಹೆಸರು 2] ಶೇಖರ ಹಳವಳ್ಳಿ ಎಂದು ತಿಳಿಸಿದ್ದು, ತಾವುಗಳು ಸಾರ್ವಜನಿಕರಿಂದ ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಪಣವಾಗಿ ಸ್ವೀಕರಿಸಿ, ಮಟ್ಕಾ ನಂಬ್ರದ ಬರೆದ ಚೀಟಿಯನ್ನು ಬರೆದು ಕೊಟ್ಟು ನಂತರ ಹಣವನ್ನು ಬಿಡ್ಡರ್‌ರವರಿಗೆ ನೀಡುವುದಾಗಿ ಹೇಳಿದವರನ್ನು ದಸ್ತಗಿರಿ ಮಾಡಿ, ಆತನಿಂದ ಮಟ್ಕಾ ಆಟಕ್ಕೆ ಬಳಸಿದ ನಗದು ರೂಪಾಯಿ 520 ಬಾಲ್ ಪೆನ್ -1 ಮತ್ತು ಮಟ್ಕಾ ನಂಬರ್ ಬರೆದ ಚೀಟಿ-1ನ್ನು ಮುಂದಿನ ಕ್ರಮದ ಬಗ್ಗೆ ಸ್ವಾದೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 16/2015 ಕಲಂ 78(1) (111) ಕೆ.ಪಿ ಆ್ಯಕ್ಟ್ ಯಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ.
- ಬೈಂದೂರು : ದಿನಾಂಕ 22/01/2015 ರಂದು ಮದ್ಯಾಹ್ನ 12:10 ಗಂಟೆಯ ವೇಳೆಗೆ ಅಣ್ಣಪ್ಪ ಶೇರಿಗಾರ (53) ತಂದೆ: ರಾಮಕೃಷ್ಣ ಶೇರಿಗಾರ ವಾಸ: ತೆಗ್ಗರ್ಸೆ ಗ್ರಾಮ ಕುಂದಾಪುರ ಇವರು ತನ್ನ ಬಾಬ್ತು KA 20 EB 7197 ನೇ ಹೊಂಡಾ ಏವಿಯೇಟರ್ ಸ್ಕೂಟರ್‌ನ್ನು ಸವಾರಿ ಮಾಡಿಕೊಂಡು ಕುಂದಾಪುರದ ಕಡೆಗೆ ರಾಹೆ 66 ರಲ್ಲಿ ಹೋಗುತ್ತಾ ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ ನಾಗೂರು ಮಸೀದಿ ಹತ್ತಿರ ತಲುಪುತ್ತಿರುವಾಗ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ KA 20 C 1012 ನೇ ಆಟೋ ರಿಕ್ಷಾವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದಿನಿಂದ ಹೋಗುತ್ತಿದ್ದ ಒಂದು ಆಟೋ ರಿಕ್ಷಾವನ್ನು ಓವರ್ ಟೇಕ್ ಮಾಡಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಇವರು ಸವಾರಿ ಮಾಡುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಣ್ಣಪ್ಪ ಶೇರಿಗಾರ ಇವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲ ಕೈ ಮೂಳೆ ಮುರಿತ ಹಾಗೂ ಬಲಕಾಲಿನ ಮೊಣಗಂಟಿಗೆ ರಕ್ತಗಾಯಗೊಂಡವರನ್ನು ಕುಂದಾಪುರ ಚಿನ್ಮಯಿ ಆಸ್ಪತ್ತೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಅಣ್ಣಪ್ಪ ಶೇರಿಗಾರರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 11/2015 ಕಲಂ: 279, 338,ಐಪಿಸಿ ಯಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ.
- ಉಡುಪಿ ನಗರ : ಬಿ ಪ್ರದೀಪ್ ಕುಮಾರ್ ತಂದೆ: ಬಿ ಚಕ್ರಪಾಣಿ ರಾವ್ ವಾಸ: ಮನೆ ನಂ 7-5-95 ಶಾಲಿಗ್ರಾಮ ನಿಲಯ ಪಿಲಿಚಂಡಿ ಮಾರ್ಗ ಬೀಡನಗುಡ್ಡೆ, ಉಡುಪಿ ಇವರು ದಿನಾಂಕ 20/01/2015 ರಂದು ಮನೆಗೆ ಬೀಗ ಹಾಕಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದು, ದಿನಾಂಕ 23/01/2015 ರಂದು ಬೆಳಗ್ಗೆ 06:00 ಗಂಟೆಗೆ ವಾಪಾಸು ಬಂದು ನೋಡುವಾಗ ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಹೊಡೆದಿದ್ದು ಮನೆಯ ಒಳಗೆ ಹೋಗಿ ನೋಡಲಾಗಿ ಗಾಡ್ರೇಜ್ ನಲ್ಲಿ ಇಟ್ಟಿದ್ದ 50 ರೂನ 400 ಹೊಸ ನೋಟುಗಳು, 20 ರೂ ನ 300 ಹೊಸ ನೋಟುಗಳು, 10 ರೂ 800 ಹೊಸ ನೋಟುಗಳು, 5 ರೂ 600 ಹೊಸ ನಾಣ್ಯಗಳು, 1 ರೂ 2000 ನಾಣ್ಯಗಳು, 500 ರೂ 100 ನೋಟುಗಳು ಮತ್ತು 13 ಗ್ರಾಂನ ಚಿನ್ನದ ಚೈನ್, ಚಿನ್ನದ ಕಿವಿಯ ಓಲೆ ಒಂದು ಜೊತೆ, ಬೆಳ್ಳಿಯ ಕಾಲು ಚೈನು 1 ಜೊತೆ, 4 ಬೆಳ್ಳಿಯ ಕಿವಿಯ ಓಲೆಗಳು, ಬೆಳ್ಳಿಯ ಪೆಂಡೆಂಟ್ ಇರುವ ಚೈನ್, ಒಟ್ಟು 34,000/- ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಬಿ ಪ್ರದೀಪ್ ಕುಮಾರ್ ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 15/15 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment