ಕಳವು ಪ್ರಕರಣ
- ಶಂಕರನಾರಾಯಣ: ಪಿರ್ಯಾದಿದಾರರಾದ ಎಸ್. ವೆಂಕಟೇಶ್ ಭಂಡಾರಿ (49) ತಂದೆ ದಿ. ಹೆಚ್. ನರಸಿಂಹ ಭಂಡಾರಿ ವಾಸ. ಸೌಡ ಹೊಳೆ ಹತ್ತಿರ, ಶಂಕರನಾರಾಯಣ ಗ್ರಾಮ ಕುಂದಾಪುರ ತಾಲೂಕು ಎಂಬವರು ತನ್ನ ಅಡಿಕೆ ತೋಟದಲ್ಲಿ ಬೆಳೆದ ಅಡಿಕೆ ಫಸಲನ್ನು ಒಣಗಿಸಿ ಸಿಪ್ಪೆ ಸಮೇತವಾಗಿ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಪ್ರತಿಯೊಂದರಲ್ಲಿ ತಲಾ 35 K.G. ರಂತೆ ಒಟ್ಟು 46 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ತನ್ನ ಮನೆಯಿಂದ ಸುಮಾರು 100 ಅಡಿ ದೂರದಲ್ಲಿರುವ ತನ್ನ ಹಳೆಯ ಅಂಗಡಿ ಕಟ್ಟಡದಲ್ಲಿ ದಾಸ್ತಾನು ಇಟ್ಟು ದಿನಾಂಕ 22/01/2015 ರಂದು ರಾತ್ರಿ 20.15 ಗಂಟೆಗೆ ಪಿರ್ಯಾದಿದಾರರು ಅಲ್ಲಿಗೆ ಹೋಗಿ ದೀಪ ಹಚ್ಚಿ ಬಾಗಿಲಿಗೆ ಬೀಗ ಭದ್ರಪಡಿಸಿ ವಾಪಾಸು ತನ್ನ ಮನೆಗೆ ಬಂದಿದ್ದು ದಿನಾಂಕ 23/01/2015 ರಂದು ಬೆಳಿಗ್ಗೆ 08.30 ಗಂಟೆ ಸಮಯಕ್ಕೆ ಪಿರ್ಯಾಧಿದಾರರು ತನ್ನ ಮಕ್ಕಳನ್ನು ಶಾಲೆಯ ಬಸ್ಸ್ ಗೆ ಕಳುಹಿಸಲು ಅಂಗಡಿಯ ಬಳಿಗೆ ಬಂದಾಗ ಅಂಗಡಿಯ ಬಾಗಿಲು ತೆರೆದುಕೊಂಡಿದ್ದು ಪಿರ್ಯಾದಿದಾರರು ಒಳಕ್ಕೆ ಹೋಗಿ ನೋಡಿದಾಗ ಅಡಿಕೆ ತುಂಬಿದ್ದ ಚೀಲದ ಅಟ್ಟಿಯಲ್ಲಿ ಎಣಿಸಲಾಗಿ 46 ಚೀಲಗಳ ಪೈಕಿ 25 ಚೀಲಗಳು ಇಲ್ಲದೇ ಇದ್ದು ಅವುಗಳನ್ನು ದಿನಾಂಕ 22/01/2015 ರಂದು ರಾತ್ರಿ 20.15 ಗಂಟೆಯಿಂದ ದಿನಾಂಕ: 23/01/2015 ರಂದು ಬೆಳಿಗ್ಗೆ 08.30 ಗಂಟೆಯ ಮದ್ಯಾವದಿಯಲ್ಲಿ ಯಾರೋ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಅಡಿಕೆಯ ಅಂದಾಜು ಮೌಲ್ಯ ರೂಪಾಯಿ 1,00,000/- ಆಗಿರುತ್ತದೆ ಎಂಬುದಾಗಿ ಎಸ್. ವೆಂಕಟೇಶ್ ಭಂಡಾರಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೋಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2015 ಕಲಂ 454, 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment