ಅಪಘಾತ
ಪ್ರಕರಣ
- ಉಡುಪಿ: ಪಿರ್ಯಾದಿ ಮೊಹಮ್ಮದ್ ಅಬ್ದುಲ್ ಮಜಿದ್ ಇವರು ದಿನಾಂಕ: 23/01/2015 ರಂದು ಕೆಎ 02 ಎಮ್‌ಎ 9492 ನೇ ಓಮ್ನಿ ಕಾರಿನಲ್ಲಿ ಮಣಿಪಾಲದಿಂದ ಸಾಸ್ತಾನಕ್ಕೆ ಹೋಗುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ 02:30 ಗಂಟೆಗೆ ರಾ.ಹೆ 66 ರಲ್ಲಿ ಉಡುಪಿಯ ಮಾಸ್ತಿಯಮ್ಮ ದೇವಸ್ತಾನದ ಬಳಿ ತಲುಪುವಾಗ್ಗೆ ಪಿರ್ಯಾದುದಾರರ ಕಾರಿನ ಎದುರು ಒಂದು ಬೊಲೆರೊ ಕಾರು ಮತ್ತು ಇತರ ವಾಹನಗಳು ನಿಂತುಕೊಂಡಿದ್ದು ಪಿರ್ಯಾದುದಾರರೂ ಬೊಲೆರೊ ಕಾರಿನ ಹಿಂದೆ ನಿಲ್ಲಿಸಿದ್ದು, ಉಡುಪಿ ಕರಾವಳಿ ಕಡೆಯಿಂದ ಕೆಎ-19 ಬಿ8208 ನೇ ಲಾರಿ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಂತಿದ್ದ ಪಿರ್ಯಾದುದಾರರ ಓಮ್ನಿ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಓಮ್ನಿ ಕಾರು ಮುಂದಕ್ಕೆ ಚಲಿಸಿ ಮುಂದೆ ನಿಂತಿದ್ದ ಬೊಲೆರೊ ಕಾರಿಗೆ ತಾಗಿ ಓಮ್ನಿ ಕಾರಿನ ಮುಂಭಾಗ ಮತ್ತು ಹಿಂಭಾಗ ಜಖಂಗೊಡಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಅಮಾಸೆಬೈಲು: ದಿನಾಂಕ 23/01/2015 ರಂದು ಸಂಜೆ ಸುಮಾರು 5:45 ಗಂಟೆ ಸಮಯಕ್ಕೆ ನರಸಿಂಹ @ ತಮ್ಮಯ್ಯ ನಾಯ್ಕರವರು ವಿಪರೀತ ಕುಡಿದು ಹಕ್ಲಮನೆ ಬಚ್ಚ ಶೆಟ್ಟಿರವರ ಬಾಬ್ತು ಗದ್ದೆಯಲ್ಲಿ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 02/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment