ಅಪಘಾತ
ಪ್ರಕರಣ
- ಬೈಂದೂರು: ದಿನಾಂಕ 22/01/2015 ರಂದು ಮದ್ಯಾಹ್ನ 12:10 ಗಂಟೆಯ ವೇಳೆಗೆ ಪಿರ್ಯಾದಿ ಅಣ್ಣಪ್ಪ ಶೇರಿಗಾರ ಇವರು ಅವರ ಬಾಬ್ತು KA 20 EB 7197 ನೇ ಹೊಂಡಾ ಏವಿಯೇಟರ್ ಸ್ಕೂಟರ್‌ನ್ನು ಸವಾರಿ ಮಾಡಿಕೊಂಡು ಕುಂದಾಪುರದ ಕಡೆಗೆ ರಾಹೆ 66 ರಲ್ಲಿ ಹೋಗುತ್ತಾ ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ ನಾಗೂರು ಮಸೀದಿ ಹತ್ತಿರ ತಲುಪುತ್ತಿರುವಾಗ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ KA 20 C 1012 ನೇ ಆಟೋ ರಿಕ್ಷಾವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದಿನಿಂದ ಹೋಗುತ್ತಿದ್ದ ಒಂದು ಆಟೋ ರಿಕ್ಷಾವನ್ನು ಓವರ್ ಟೇಕ್ ಮಾಡಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್‌ಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾಧಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲ ಕೈ ಮೂಳೆ ಮುರಿತ ಹಾಗೂ ಬಲಕಾಲಿನ ಮೊಣಗಂಟಿಗೆ ರಕ್ತಗಾಯಗೊಂಡವರನ್ನು ಕುಂದಾಪುರ ಚಿನ್ಮಯಿ ಆಸ್ಪತ್ತೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2015 ಕಲಂ 279 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಉಡುಪಿ: ಪಿರ್ಯಾದಿ ಶ್ರೀಕಾಂತ ಆಚಾರ್ಯ ಇವರು ದಿನಾಂಕ:23/01/2015 ರಂದು ರಾತ್ರಿ 08:20 ಗಂಟೆಗೆ ಕೆಲಸ ಮುಗಿಸಿ ತನ್ನ ಮೋಟಾರ್ ಸೈಕಲ್ ನಂಬ್ರ ಕೆಎ-20 ವೈ-1701 ನೇದರಲ್ಲಿ ಬಲಾಯಿಪಾದೆ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಎದುರಿನಿಂದ ಅಂದರೆ ಉಡುಪಿ ಕಡೆಯಿಂದ ಕೆಎ-20 ಝಡ್-9039 ನೇ ಕಾರು ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಕೊಂಡು ಬಂದು ಪಿರ್ಯಾದುದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಕಾಲಿಗೆ ರಕ್ತಗಾಯವಾಗಿದ್ದು, ಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2015 ಕಲಂ 279 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಶಂಕರನಾರಾಯಣ: ಆರೋಪಿ ಕೆಎ 14 ಪಿ 1626 ನೇ ನಂಬರಿನ ಕಾರು ಚಾಲಕ ತನ್ನ KA 14 P 1626 ನಂಬ್ರದ ಹೋಂಡಾ ಸಿಟಿ ಕಾರನ್ನು ದಿನಾಂಕ 23/01/2015 ರಂದು ರಾತ್ರಿ 8.30 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಸಿದ್ದಾಪುರ ಮೇಲ್ಜಡ್ಡು ಎಂಬಲ್ಲಿ ಸಿದ್ದಾಪುರ ಕುಂದಾಪುರ ಮುಖ್ಯ ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೊಂಢು ಬಂದು ಸಿದ್ದಾಪುರ ಕಡೆಯಿಂದ ಕುಂದಾಪುರ ಕಡೆಗೆ ರಾಜು ಮಡಿವಾಳ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ KA 20 C 5811 ನಂಬ್ರದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ನಂತರ ಪಿರ್ಯಾದಿ ಎಸ್. ವೆಂಕಟೇಶ್‌ಭಂಡಾರಿ ಇವರು ಸವಾರಿ ಮಾಡಿಕೊಂಡು ಬರುತ್ತಿದ್ದ KA 05 EN 7135 ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನಗಳು ಜಖಂ ಗೊಂಡು ಪಿರ್ಯಾದಿದಾರರು ಮತ್ತು ಸಹಸವಾರ ಮಾಧವ ನಾಯಕ್ ಮತ್ತು ರಿಕ್ಷಾ ಚಾಲಕ ರಾಜು ಮಡಿವಾಳ ಎಂಬವರಿಗೆ ಪೆಟ್ಟಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2015 ಕಲಂ 279 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು
ಪ್ರಕರಣ
- ಮಣಿಪಾಲ: ತಾರೀಕು 20.01.2015 ರಂದು ರಾತ್ರಿ 09:30 ಗಂಟೆಗೆ ಫಿರ್ಯಾದಿ ಧೀರಜ್ ಎಮ್ ಇವರು ಯಮಹಾ ಮೋಟಾರು ಸೈಕಲ್ ಕೆಎ 27 ಆರ್ 0567 ನೇದನ್ನು ಶಿವಳ್ಳಿ ಗ್ರಾಮದ ಬ್ಯಾಕಸ್ ಇನ್ ಬಾರ್ ಬಳಿ ನಿಲ್ಲಿಸಿ ಬಾರ್‌ಗೆ ಹೋಗಿ ಊಟಮಾಡಿ ವಾಪಾಸು ಬರುವಾಗ ರಾತ್ರಿ 10:15 ಗಂಟೆ ಮಧ್ಯಾವದಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಅದರ ಅಂದಾಜು ಮೌಲ್ಯ 35,000/- ಆಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2015 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರೇ
ಪ್ರಕರಣ
- ಬೈಂದೂರು: ಆರೋಪಿತ 1 ಶ್ರೀಮತಿ ಬಿಜಿಮಾಲಾ (38) ಗಂಡ: ನಂದಯ್ಯ ಪೂಜಾರಿ ವಾಸ: ಕಲ್ಮಕ್ಕಿ ಗಂಗನಾಡು ರಸ್ತೆ ಬೈಂದೂರು ಇವರು ದಿನಾಂಕ 01/1/2013 ರಿಂದ ಕಲ್ಮಕ್ಕಿ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ಇದರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಸದ್ರಿ ಸಂಘದಲ್ಲಿ ಹಣವನ್ನು ದುರುಪಯೋಗ ಎಸಗಿದ್ದಲ್ಲದೇ ಇತರ ದುರ್ವರ್ತನೆ ತೋರಿದ್ದರಿಂದ ದಿನಾಂಕ 02/12/2014 ರಂದು ಅಮಾನತುಗೊಂಡು ದಿನಾಂಕ 24/12/2014 ರಂದು ವಜಾಗೊಂಡಿರುತ್ತಾರೆ. ವಜಾಗೊಂಡ ಮೇಲೂ ಸಂಘದ ದಾಖಲೆಗಳನ್ನು ಮತ್ತು ಕಪಾಟಿನ ಕೀಲಿಕೈಗಳನ್ನು ಸಂಘದ ಸುಪರ್ದಿಗೆ ಹಸ್ತಾಂತರಿಸದೇ 2 ನೇ ಆರೋಪಿ ಶ್ರೀಮತಿ ಎಲ್ಲಮ್ಮ ಡೇವಿಡ್ ( 45) ಗಂಡ: ಡೇವಿಡ್ ವಾಸ: ಕಲ್ಮಕ್ಕಿ ಗಂಗನಾಡು ರಸ್ತೆ ಬೈಂದೂರು ಇವರ ಸಕ್ರೀಯ ಸಹಕಾರದಿಂದ ಹಾಗೂ ತನ್ನ ಗಂಡ ನಂದಯ್ಯ ಪೂಜಾರಿ ಮತ್ತು ಇತರರೊಂದಿಗೆ ಸೇರಿ ಸಂಘದ ಕೆಲವು ದಾಖಲೆಗಳನ್ನು ತನ್ನ ಮನೆಗೆ ಕೊಂಡು ಹೋಗಿದ್ದರಿಂದ 1 ನೇ ಆರೋಪಿಯಲ್ಲಿ ದಾಖಲೆಗಳನ್ನು ಹಸ್ತಾಂತರಿಸುವಂತೆ ಕೇಳಿಕೊಂಡಾಗಲೂ ಅವರು ಹಾಗೆ ಮಾಡದೇ ಇದ್ದುದರಿಂದ ದಿನಾಂಕ 08/01/2015 ರಂದು ಬೈಂದೂರು ಪೊಲೀಸ್ ಠಾಣೆಯ ಠಾಣಾಧಿಕಾರಿಯವರ ರಕ್ಷಣೆಯಲ್ಲಿ ಸಂಘದ ಕಛೇರಿಯಲ್ಲಿದ್ದ ಕಪಾಟಿನ ಬಾಗಿಲನ್ನು ಒಡೆದು ದಾಖಲೆಗಳನ್ನು ಪಟ್ಟಿ ಮಾಡಿದ್ದು 1) ನಗದು ಪುಸ್ತಕ 2014-15, 2) ಲೆಡ್ಜರ್ ಪುಸ್ತಕ 2014-15, 3) ಪಶು ಆಹಾರ ರಿಜಿಸ್ಟ್ರರ್ 4) ಸಭೆಯ ನಡಾವಳಿ ಪುಸ್ತಕ ಅಕ್ಟೋಬರ್ 2009 ರಿಂದ ಫೆಬ್ರವರಿ 2014 ವರೆಗೆ, 5) ಸದಸ್ಯರ ಪ್ರವೇಶ ಪುಸ್ತಕ 6) ಕಟ್ಟಡ ಸಂಬಂಧಪಟ್ಟ ಮೂಲ ದಾಖಲಾತಿಗಳು 7) ಬ್ಯಾಂಕ್ ಚೆಕ್ ಬುಕ್ 8) ಬ್ಯಾಂಕ್ ಪಾಸ್ ಬುಕ್ ದಾಖಲೆಗಲು ಇಲ್ಲದೇ ಇದ್ದು ಸದ್ರಿ ದಾಖಲೆಗಳನ್ನು ಹಾಗೂ ಸಂಘದ ಕೀಲಿಕೈ ಯನ್ನು 1 ನೆ ಆರೋಪಿಯು 2 ನೇ ಆರೋಪಿಯ ಸಹಕಾರದಿಂದ ಸಂಘದ ಕಛೇರಿಯಿಂದ ಅಪಹರಿಸಿ ಅನಧಿಕೃತವಾಗಿ ತಮ್ಮ ಸುರ್ದಿಯಲ್ಲಿ ಇರಿಸಿಕೊಂಡು ಕಳ್ಳತನ ಮತ್ತು ವಿಶ್ವಾಸ ದ್ರೋಹದ ಅಪರಾಧ ಎಸಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2015 ಕಲಂ: 379, 406, 408, 409, 109, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment