ಹೆಂಗಸು ಕಾಣೆ ಪ್ರಕರಣ
- ಮಲ್ಪೆ:ಪಿರ್ಯಾದಿದಾರರಾದ ಮಂಜು ನಾಯ್ಕ (25) ತಂದೆ:ಸೀತಾ ನಾಯ್ಕ ವಾಸ:ಕೆರೆಕಾನಳ್ಳಿತಾಂಡ, ಹರಪ್ಪನಹಳ್ಳಿ, ದಾವಣಗೆರೆ ಜಿಲ್ಲೆ, ಹಾಲಿ ವಾಸ:ಕೊಳ ಮಲ್ಪೆರವರ ಹೆಂಡತಿಯಾದ ಶ್ರೀಮತಿ ಅನಿತಾ (23) ಎಂಬವರು ದಿನಾಂಕ:18/01/2015 ರಂದು ಮಧ್ಯಾಹ್ನ ಸುಮಾರು 13:00 ಗಂಟೆಗೆ ಮಂಜು ನಾಯ್ಕರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಸಣ್ಣ ಜಗಳವಾಡಿ, ಅದನ್ನೇ ಕಾರಣವಾಗಿಟ್ಟುಕೊಂಡು ದಿನಾಂಕ:22/01/2015 ರಂದು ಮದ್ಯಾಹ್ನ ಸುಮಾರು 03:00 ಗಂಟೆಗೆ ಮನೆ ಬಿಟ್ಟು ಹೋಗಿರುತ್ತಾರೆ, ನಂತರ ಎಲ್ಲಾ ಕಡೆ ಸಂಬಂಧಿಕರಲ್ಲಿ ಪೋನ್ ಮಾಡಿ ವಿಚಾರಿಸಿದಲ್ಲಿ ಶ್ರೀಮತಿ ಅನಿತಾ ಇದ್ದ ಬಗ್ಗೆ ಮಾಹಿತಿ ದೊರೆತಿರುವುದಿಲ್ಲ. ಶ್ರೀಮತಿ ಅನಿತಾರವರನ್ನು ಈವರೆಗೂ ಹುಡುಕಾಡಿದ್ದರಿಂದ ಠಾಣೆಗೆ ದೂರು ನೀಡಲು ತಡವಾಗಿರುತ್ತದೆ, ಆದುದರಿಂದ ಕಾಣೆಯಾದ ಶ್ರೀಮತಿ ಅನಿತಾರವರನ್ನು ಹುಡುಕಿಕೊಡುವರೇ ಎಂಬುದಾಗಿ ಮಂಜು ನಾಯ್ಕರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 15/2015 ಕಲಂ:ಹೆಂಗಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
- ಮಣಿಪಾಲ:ದಿನಾಂಕ:23/01/2015 ರಂದು ರಾತ್ರಿ ಸಮಯ ಯಾರೋ ಕಳ್ಳರು ಪಿರ್ಯಾದಿದಾರರಾದ ಸುಚಿತಾ ಮಂಜುನಾಥ, ತಂದೆ:ದಿವಂಗತ ಮಂಜುನಾಥ, ವಾಸ:ವಂದನಮ್, ಗುಡ್ಡೆಯಂಗಡಿ, ಅಲೆವೂರು, ಉಡುಪಿರವರ ಮನೆಯ ಎದುರಿನ ಬಾಗಿಲನ್ನು ಬಲತ್ಕಾರವಾಗಿ ಒಡೆದು ಒಳಪ್ರವೇಶಿಸಿ ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಕಪಾಟನ್ನು ಒಡೆದು ಅದರಲ್ಲಿಟ್ಟಿದ್ದ 1)ಮುತ್ತಿನ ಚಿನ್ನದ ಬೆಂಡೊಲೆ ಸುತ್ತ ಬಿಳಿ ಹರಳುಗಳು ಇದ್ದು ಅಂದಾಜು ತೂಕ 10 ಗ್ರಾಂ, 2)ಚಿನ್ನದ ಬೆಂಡೊಲೆ 7 ಸುತ್ತ ಕಲ್ಲಿನ ಬಿಳಿ ಹರಳು ಒಂದು ಜೊತೆ ಅಂದಾಜು ತೂಕ 4 ಗ್ರಾಂ, 3) ಬಿಳಿ ಹರಳಿನ ಚಿನ್ನದ ರಿಂಗ್ ಒಂದು ಜೊತೆ ಅಂದಾಜು ತೂಕ 6 ಗ್ರಾಂ ಇರುವ ಆಭರಣಗಳನ್ನು ಕಳವು ಮಾಡಿರುವುದಾಗಿದೆ.ಈ ಬಗ್ಗೆ ಸುಚಿತಾ ಮಂಜುನಾಥರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 11/15 ಕಲಂ:457,380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment