Sunday, January 25, 2015

Daily Crime Reports As on 25/01/2015 at 07:00 Hrs

ಬೆದರಿಕೆ  ಪ್ರಕರಣ
  • ಶಂಕರನಾರಾಯಣ: ಪಿರ್ಯಾದಿ ಮಂಜು ಪೂಜಾರಿ ಮತ್ತು ಪಿರ್ಯಾದಿದಾರರ ಅಕ್ಕ ಮುತ್ತು ಪೂಜಾರ್ತಿ ರವರಿಗೆ  ಜಾಗದ ವಿಚಾರದಲ್ಲಿ ತಕರಾರಿದ್ದು ಈ ಬಗ್ಗೆ  ಕುಂದಾಪುರ AC ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ದಿನಾಂಕ: 17/01/2015 ರಂದು ಮದ್ಯಾಹ್ನ 3.30 ಗಂಟೆ ಸಮಯಕ್ಕೆ ಆರೋಪಿತರಾದ ಪಿರ್ಯಾದಿದಾರರ ಅಕ್ಕ ಮುತ್ತು ಪೂಜಾರ್ತಿ ರವರ ಮಕ್ಕಳಾದ 1) ಶೇಖರ ಪೂಜಾರಿ 2) ಚಂದ್ರ ಪೂಜಾರಿ ಇವರು  ಕುಂದಾಫುರ ತಾಲೂಕು ವಂಡ್ಸೆ ಹೋಬಳಿಯ ಯಡಮೊಗ್ಗೆ ಗ್ರಾಮದ ಬೆಳಾರುಮಕ್ಕಿ ಎಂಬಲ್ಲಿರುವ  ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಬಂದು ಪಿರ್ಯಾದಿದಾರರು  ಬೆಳೆಸಿದ್ದರೆನ್ನಲಾದ ಅಡಿಕೆಯಲ್ಲಿ ತಮಗೂ ಪಾಲು ಇದೆ ಎಂಬುದಾಗಿ ಹೇಳಿ ಪಿರ್ಯಾದಿದಾರರ ಮನೆಯ ಅಂಗಳದಲ್ಲಿ 5 ಪ್ಲಾಸ್ಟಿಕ್  ಚೀಲದಲ್ಲಿ ತುಂಬಿಸಿಟ್ಟಿದ್ದ ಒಣ ಅಡಿಕೆಯನ್ನು,  ಪಿರ್ಯಾದಿದಾರರ ಮನೆಯವರ ಬಾಬ್ತು ಬೈಕಿನ ಕೀಯನ್ನು ಹಾಗೂ ಕತ್ತಿಯನ್ನು ತೆಗೆದುಕೊಂಡು ಹೋಗಿದ್ದು ಹೋಗುವಾಗ ತಡೆದರೆ ಪಿರ್ಯಾದಿದಾರರನ್ನು  ಹಾಗೂ ಪಿರ್ಯಾದಿದಾರರ 4 ಜನ ಮಕ್ಕಳನ್ನು ಕೊಲ್ಲುವುದಾಗಿ ಆರೋಪಿತರು ಬೆದರಿಕೆ ಹಾಕಿರುತ್ತಾರೆ ಹಾಗೂ ದಿನಾಂಕ 24/01/2015 ರಂದು ಸಂಜೆ 4:45 ಗಂಟೆಗೆ ಪಿರ್ಯಾದಿದಾರರು ತನ್ನ ಮಗ ಹಾಗೂ ಕೆಲಸದವರೊಂದಿಗೆ ಪಿರ್ಯಾದಿದಾರರದ್ದೆನ್ನಲಾದ ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದಾಗ 1 ನೇ ಆರೋಪಿಯು ಕತ್ತಿಯನ್ನು ಹಿಡಿದುಕೊಂಡು ಸ್ಥಳಕ್ಕೆ ಬಂದು ಕೆಲಸವನ್ನು ನಿಲ್ಲಿಸದಿದ್ದರೆ ಕತ್ತಿಯಿಂದ ಕಡಿದು ಹಾಕುವುದಾಗಿ ಪಿರ್ಯಾದಿದಾರರಿಗೆ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/15 ಕಲಂ: 447, 506(2) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಕೋಟ: ಪಿರ್ಯಾದಿ ಚೀಂಕ್ರ ಪೂಜಾರಿ ಇವರು ಉಡುಪಿ ತಾಲೂಕು ಪಾಂಡೇಶ್ವರ ಗ್ರಾಮದ ಸೂಳ್ಕುದ್ರು ಮನೆ ಎಂಬಲ್ಲಿ ವಾಸವಾಗಿದ್ದು ದಿನಾಂಕ:24/01/2015 ರಂದು ಬೆಳಿಗ್ಗೆ 05:15  ಗಂಟೆಗೆ ತನ್ನ ಮನೆಯ ಶೌಚಾಲಯಕ್ಕೆ ಹೋಗಿ ವಾಪಾಸು ಬರುವಾಗ ತೋಟದ ಮನೆಯ ಶ್ರೀಧರ ಪೂಜಾರಿ ಎಂಬವರು ಏಕಾಏಕಿ ಬಂದು ಚೂರಿಯಿಂದ ಪಿರ್ಯಾದಿದಾರರ  ಎಡ ಕೈಯ ಗಂಟಿನ ಕೆಳಗೆ ಇರಿದು ಓಡಿ ಹೋಗಿರುತ್ತಾನೆ. ಪರಿಣಾಮ ರಕ್ತಗಾಯಗೊಂಡ ಪಿರ್ಯಾದಿದಾರರನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/2015 ಕಲಂ 324 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

No comments: