ಪತ್ರಿಕಾ ಪ್ರಕಟಣೆ
- ಉಡುಪಿ ಜಿಲ್ಲೆಯಲ್ಲಿ ಒಟ್ಟು 1,044 ಪಾಸ್ ಪೋರ್ಟ್ ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದು, ದಿನಾಂಕ 01-01-2015 ರಂದು ಉಡುಪಿ ಜಿಲ್ಲೆಗೆ ಎ.ಎಸ್.ಪಿ. ಹುದ್ದೆಯಿಂದ ಪದೋನ್ನತಿ ಹೊಂದಿ ಹೊಸದಾಗಿ ಎಸ್.ಪಿ.ಯವರು ಉಡುಪಿ ಜಿಲ್ಲೆಯ ಪ್ರಭಾರ ವಹಿಸಿಕೊಂಡಿರುತ್ತಾರೆ. ಕಾರಣ ಪಾಸ್ ಪೋರ್ಟ್ ಅರ್ಜಿಗಳ ಪರಿಶೀಲನೆ ನಂತರ ಅದನ್ನು ಪಾಸ್ ಪೋರ್ಟ್ ಪೋರ್ಟಲ್ ಗೆ ಅಪ್ ಲೋಡ್ ಮಾಡಲು ಅವಶ್ಯವಿರುವ ಡಿಜಿಟಲ್ ಸಹಿಯ ಡೋಂಗಲನ್ನು ಹೊಸದಾಗಿ ಫ್ರಬಾರ ವಹಿಸಿಕೊಂಡಿರುವ ಎಸ್.ಪಿ.ಯವರು ಪಡೆಯಬೇಕಾಗಿದ್ದು ಅದಕ್ಕಾಗಿ ಈಗಾಗಲೇ ಮೇಲಾಧಿಕಾರಿಯವರ ಮುಖಾಂತರ ಅರ್ಜಿ ಸಲ್ಲಿಸಲಾಗಿದ್ದು ಅದನ್ನು ಇನ್ನೊಂದು ವಾರದಲ್ಲಿ ಪೂರೈಸುವ ಬಗ್ಗೆ ಮಾಹಿತಿ ಇರುತ್ತದೆ. ಅದನ್ನು ಕೂಡಲೆ ಪಡೆದು ಬಾಕಿ ಇರುವ ಪಾಸ್ ಪೋರ್ಟ್ ಅರ್ಜಿ ಗಳನ್ನು ವಿಲೇವಾರಿಗೊಳಿಸಲಾಗುವುದಾಗಿ ಶ್ರೀ ಕೆ. ಅಣ್ಣಮಲೈ ಎಸ್.ಪಿ. ಉಡುಪಿ ರವರು ಸಾರ್ವಜನಿಕರಿಗೆ ಮಾಹಿತಿ ನೀಡಿರುತ್ತಾರೆ.
No comments:
Post a Comment