ಜೀವ ಬೆದರಿಕೆ
ನೀಡಿದ ಪ್ರಕರಣ
- ಶಂಕರನಾರಾಯಣ: ಪಿರ್ಯಾದಿದಾರರಾದ ಮಂಜು ಪೂಜಾರಿ (53) ತಂದೆ: ದಿ. ಅಂತ ಪೂಜಾರಿ, ಬೆಳಾರ್ ಮಕ್ಕಿ ಎಡಮೊಗ್ಗೆ ಗ್ರಾಮ ಎಂಬವರಿಗೆ ಮತ್ತು ಪಿರ್ಯಾದಿದಾರರ ಅಕ್ಕ ಮುತ್ತು ಪೂಜಾರ್ತಿ ರವರಿಗೆ ಜಾಗದ ವಿಚಾರದಲ್ಲಿ ತಕರಾರಿದ್ದು ಈ ಬಗ್ಗೆ ಕುಂದಾಪುರ AC ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ದಿನಾಂಕ 17/01/2015 ರಂದು ಮದ್ಯಾಹ್ನ 3.30 ಗಂಟೆ ಸಮಯಕ್ಕೆ ಆರೋಪಿತರಾದ ಪಿರ್ಯಾದಿದಾರರ ಅಕ್ಕ ಮುತ್ತು ಪೂಜಾರ್ತಿ ರವರ ಮಕ್ಕಳಾದ 1. ಶೇಖರ ಪೂಜಾರಿ, 2. ಮಂಜು ಪೂಜಾರಿ ರವರು ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಯಡಮೊಗ್ಗೆ ಗ್ರಾಮದ ಬೆಳಾರುಮಕ್ಕಿ ಎಂಬಲ್ಲಿರುವ ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಬಂದು ಪಿರ್ಯಾದಿದಾರರು ಬೆಳೆಸಿದ್ದರೆನ್ನಲಾದ ಅಡಿಕೆಯಲ್ಲಿ ತಮಗೂ ಪಾಲು ಇದೆ ಎಂಬುದಾಗಿ ಹೇಳಿ ಪಿರ್ಯಾದಿದಾರರ ಮನೆಯ ಅಂಗಳದಲ್ಲಿ 5 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟಿದ್ದ ಒಣ ಅಡಿಕೆಯನ್ನು, ಪಿರ್ಯಾದಿದಾರರ ಮನೆಯವರ ಬಾಬ್ತು ಬೈಕಿನ ಕೀಯನ್ನು ಹಾಗೂ ಕತ್ತಿಯನ್ನು ತೆಗೆದುಕೊಂಡು ಹೋಗಿದ್ದು ಹೋಗುವಾಗ ತಡೆದರೆ ಪಿರ್ಯಾದಿದಾರರನ್ನು ಹಾಗೂ ಪಿರ್ಯಾದಿದಾರರ 4 ಜನ ಮಕ್ಕಳನ್ನು ಕೊಲ್ಲುವುದಾಗಿ ಆರೋಪಿತರು ಬೆದರಿಕೆ ಹಾಕಿರುತ್ತಾರೆ ಹಾಗೂ ದಿನಾಂಕ 24/01/2015 ರಂದು ಸಂಜೆ 4:45 ಗಂಟೆಗೆ ಪಿರ್ಯಾದಿದಾರರು ತನ್ನ ಮಗ ಹಾಗೂ ಕೆಲಸದವರೊಂದಿಗೆ ಪಿರ್ಯಾದಿದಾರರು ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದಾಗ 1 ನೇ ಆರೋಪಿಯು ಕತ್ತಿಯನ್ನು ಹಿಡಿದುಕೊಂಡು ಸ್ಥಳಕ್ಕೆ ಬಂದು ಕೆಲಸವನ್ನು ನಿಲ್ಲಿಸದಿದ್ದರೆ ಕತ್ತಿಯಿಂದ ಕಡಿದು ಹಾಕುವುದಾಗಿ ಪಿರ್ಯಾದಿದಾರರಿಗೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಮಂಜು ಪೂಜಾರಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2015 ಕಲಂ 447, 506(2) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು
- ಹಿರಿಯಡ್ಕ:ದಿನಾಂಕ:24/01/2015 ರಂದು ಸಂಜೆ 5 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನೆಲ್ಸನ್ ನಜರತ್ (41) ತಂದೆ:ದಿವಂಗತ ಜಾನ್ ಬಿ.ನಜರತ್ ವಾಸ:ಸೇಮೆ ಗುರಿ, ಕಣಂಜಾರು ಗ್ರಾಮ, ಕಾರ್ಕಳ ತಾಲೂಕುರವರು ತನ್ನ ಬಜಾಜ್ ಡಿಸ್ಕವರಿ ಮೋಟಾರು ಸೈಕಲ್ ನಂಬ್ರ ಕೆಎ-20 ಇಡಿ-0712ನೇ ದನ್ನು ಸವಾರಿ ಮಾಡಿಕೊಂಡು ಸೇಮೆಗುರಿ ತನ್ನ ಮನೆಯಿಂದ ಕಣಂಜಾರು ಪೇಟೆಗೆ ಹೋಗುವರೇ ಚಂದ್ರಶೇಖರ್ ಅಜಾದ್ ರಸ್ತೆಯ ಅಣ್ಣಪ್ಪ ಮೂಲ್ಯರವರ ಮನೆಯ ಬಳಿ ಹೋಗುತ್ತಿದ್ದಂತೆ ಕಣಂಜಾರು ಕಡಯಿಂದ ಸೇಮೆ ಗುರಿ ಕಡೆಗೆ ಆರೋಪಿ ಕೆಎ-19 ಟಿ- 2115ನೇ ಕಾರು ಚಾಲಕ ಪ್ರಾನ್ಸಿಸ್ ಲೋಬೋ ಎಂಬವರು ಅವರ ಟಾಟಾ ಇಂಡಿಕಾ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನೆಲ್ಸನ್ ನಜರತ್‌ರವರ ಬಜಾಜ್ ಡಿಸ್ಕವರ್ ಮೋಟಾರು ಸೈಕಲ್ ನಂಬ್ರ ಕೆಎ-20 ಇಡಿ-0712 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ನೆಲ್ಸನ್ ನಜರತ್‌ರವರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದುದರ ಪರಿಣಾಮ ರಕ್ತ ಸ್ವರೂಪದ ಗಾಯವಾಗಿರುವುದಾಗಿದೆ.ಈ ಬಗ್ಗೆ ನೆಲ್ಸನ್ ನಜರತ್‌ರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 05/2015 ಕಲಂ:279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಬ್ರಹ್ಮಾವರ:ದಿನಾಂಕ:21/01/2015 ರಂದು ರಾತ್ರಿ ಸುಮಾರು 8:45 ಗಂಟೆಗೆ ಪಿರ್ಯಾದಿದಾರರಾದ ನರಸಿಂಹ ಶೇರ್ವೆಗಾರ್ (62), ತಂದೆ:ದಿವಂಗತ ಅಪ್ಪು ಶೇರ್ವೆಗಾರ್, ವಾಸ:ಉಜಂಗರು ಮನೆ, ಹಾವಂಜೆ ಗ್ರಾಮ, ಉಡುಪಿ ತಾಲೂಕು ಮತ್ತು ಶಿವರಾಮ ಶೆಟ್ಟಿ ಎಂಬುವರು ನಾಗೇಶ ಎಂಬವರ ಆಟೋ ರಿಕ್ಷಾ ನಂಬ್ರ ಕೆಎ-20ಸಿ-586ರಲ್ಲಿ ಕೊಳಲಗಿರಿ ಕಡೆಯಿಂದ ಹಾವಂಜೆ ಮುಗ್ಗೇರಿ ಮಠದ ಕಡೆಗೆ ಹೋಗುವ ಕ್ರಾಸ್ ಬಳಿ ಪ್ರಯಾಣಿಸುತ್ತಿರುವಾಗ ಚಾಲಕ ನಾಗೇಶ ರಿಕ್ಷಾವನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ರಿಕ್ಷಾ ಮಗುಚಿ ಬಿದ್ದು ನರಸಿಂಹ ಶೇರ್ವೆಗಾರ್‌ರವರ ಹಣೆ, ಮುಖ, ಭುಜಕ್ಕೆ, ಅಂಗೈ ಹಿಂಬದಿ ಸಾದಾ ಹಾಗೂ ತೀವ್ರ ಗಾಯ ಹಾಗೂ ಶಿವರಾಮ ಶೆಟ್ಟಿಗೆ ಬಲಕೈ ಕೋಲು ಕೈಗೆ ತೀವ್ರ ಗಾಯವಾಗಿರುತ್ತದೆ. ಈ ಬಗ್ಗೆ ನರಸಿಂಹ ಶೇರ್ವೆಗಾರ್‌ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 19/2015 ಕಲಂ ಕಲಂ:279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಮಣಿಪಾಲ:ಪಿರ್ಯಾದಿದಾರರಾದ ಪೂರ್ವಿ ಗೌತಮ್ ತಂದೆ:ಸುಬಾಸ್ ಗೌತಮ್ ವೆರಿಡಿಯನ್ ವಲ್ಡ್, ಈಶ್ವರನಗರ ಮಣಿಪಾಲರವರ ತಮ್ಮ ಅನಿರುದ್ದ ಗೌತಮ್ (21) ರವರು ಮಣಿಪಾಲ ಎಮ್.ಐ.ಟಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ದಿನಾಂಕ:24/01/15 ರಂದು ರಾತ್ರಿ ಪಾರ್ಟಿ ಸಮಯ ಮದ್ಯಪಾನ ಸೇವಿಸಿ ಬಳಿಕ ಆತನ ಸ್ನೇಹಿತನಾದ ಧೀರ್ ಆಡ್ವಾಣಿಯ ಮನೆಗೆ ರಾತ್ರಿ 12:00 ಗಂಟೆಗೆ ಹೋಗಿರುತ್ತಾನೆ. ಈ ದಿನ ಬೆಳಿಗ್ಗೆ ಸುಮಾರು 03:00 ಗಂಟೆಗೆ ಬಾತ್‌ರೂಮ್‌ಗೆ ಹೋಗಿ ಬಂದು ಮಲಗಿದ್ದು, ಬೆಳಿಗ್ಗೆ 10:00 ಗಂಟೆಗೆ ಧೀರ್ ಆಡ್ವಾಣಿ ಎಬ್ಬಿಸಿದಾಗ ಏಳದೇ ಇದ್ದುದರಿಂದ ಕೂಡಲೇ ಅನಿರುದ್ದನನ್ನು ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ಅನಿರುದ್ದನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಪೂರ್ವಿ ಗೌತಮ್‌ರವರು ನೀಡಿದ ದೂರಿನಂತೆಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 04/2015 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment