Friday, January 23, 2015

Daily Crime Reports As on 23/01/2015 at 07:00 Hrs



ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿ ಗೋಡ್ವಿನ್ ದಾಂತಿ ಇವರು ತಮ್ಮ ಬಾಬ್ತು ಕಾರಿನಲ್ಲಿ ದಿನಾಂಕ:22/01/2015 ರಂದು 6:30 ಗಂಟೆಗೆ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಕಾರ್ಕಳ ಕಡೆಯಿಂದ ದೂಪದ ಕಟ್ಟೆ ಕಡೆಗೆ ಬರುತ್ತಿರುವಾಗ ಅವರ ಎದುರಿನಲ್ಲಿ ಅವರ ಸ್ನೇಹಿತ ಸೂರಜ್ ಎಂಬುವರು ಕೆ ಎ 20 ಇ ಜಿ 1748 ನೇ ಬೈಕಿನಲ್ಲಿ ಪಿರ್ಯಾದಿದಾರರ ಸಂಬಂದಿಕ ಬ್ರಿಯಾನ್ ಎಂಬುವರನ್ನು ಸಹಾ ಸವಾರರನ್ನಾಗಿ ಕುಳ್ಳಿರಿಸಿಕೊಂಡು ದೂಪದ ಕಟ್ಟೆ ಕಡೆಗೆ ಹೊಗುತ್ತಾ ದೂಪದ ಕಟ್ಟೆ ಪರ್ಪಲೆ ಗುಡ್ಡೆ ತಿರುವು ರಸ್ತೆಯಲ್ಲಿ ಸೂರಜ್ ತನ್ನ ಬಾಬ್ತು ಬೈಕನ್ನು ಅತೀ ವೇಗ ಹಾಗೂ ಅಜಾಗೂರುಕತೆಯಿಂದ ಚಲಾಯಿಸಿದ ಪರಿಣಾಮ ಬೈಕ್‌ ಸ್ಕಿಡ್ಡಾಗಿ ಬಿದ್ದು ಬೈಕಿನಲ್ಲಿದ್ದ ಸೂರಜ್‌ನಿಗೆ ಬಲ ಪಾದಕ್ಕೆ ತೀವ್ರ ತರಹದ ಗಾಯ ಹಾಗೂ ಬ್ರಿಯಾನ್ನಾಗೆ ತೊಡೆಯ ಮೂಳೆ ಮುರಿತ ಹಾಗೂ ಬಲ ಕೈಗೆ ತರಚಿದ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2015  ಕಲಂ 279, 337  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: