ಅಪಘಾತ ಪ್ರಕರಣಗಳು
- ಕಾಪು: ದಿನಾಂಕ 21/01/2015 ರಂದು ರಾತ್ರಿ 10:45 ಗಂಟೆಗೆ ಉಡುಪಿ ತಾಲೂಕು ಪಾಂಗಾಳ ಗ್ರಾಮದ ಪಾಂಗಾಳ ವಿಜಯ ಬ್ಯಾಂಕ್ ಬಳಿ ರಾಹೆ 66 ರಲ್ಲಿ ಪಿರ್ಯಾದಿದಾರರಾದ ಸಿ. ಮುರಳಿಧರ ರಾವ್ (61) ತಂದೆ: ದಿ. ವಾಸುದೇವ್ ರಾವ್ ವಾಸ: ಮನೆ ನಂಬ್ರ 2-32 ಚರ್ಚ್ ರೋಡ್ ಕಟಪಾಡಿ ಯೇಣಗುಡ್ಡೆ ಗ್ರಾಮ ರವರು ಪಡುಬಿದ್ರಿಯಿಂದ ಉಡುಪಿ ಕಡೆಗೆ ತನ್ನ ಕೆ.ಎ 20 ಎನ್ -5977ನೇ ಮಾರುತಿ ಓಮ್ನಿ ಕಾರಿನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಕೆ.ಎ.20 ಸಿ-1995 ನೇ ಟಿಪ್ಪರ್ ಚಾಲಕನು ತನ್ನ ಟಿಪ್ಪರನ್ನು ನಿರ್ಲಕ್ಷ್ಯತನದಿಂದ ಅಡ್ಡದಿಡ್ಡಿಯಾಗಿ ಚಲಾಯಿಸಿ ತೀರಾ ಎಡಬದಿಗೆ ಬಂದು ಪಿರ್ಯಾದಿದಾರರ ಮಾರುತಿ ಓಮ್ನಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರು, ಕಾರು ಚಾಲಕ ಶಬೀರ್ ಅಹಮ್ಮದ್, ಹಾಗೂ ಶ್ರೀಮತಿ ಗುಲಾಬಿ ರವರು ಗಾಯಗೊಂಡಿದ್ದು, ಅಲ್ಲದೇ ಮಾರುತಿ ಓಮ್ನಿ ಸಹ ಜಖಂಗೊಂಡಿರುವುದಾಗಿದೆ ಎಂಬುದಾಗಿ ಸಿ. ಮುರಳಿಧರ ರಾವ್ ರವರು ನೀಡಿದ ದೂರಿನಂತೆ ಕಾಪು ಪೋಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2015 ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
- ಕಾರ್ಕಳ: ದಿನಾಂಕ 21.01.2015 ರಂದು ಪಿರ್ಯಾದಿದಾರರಾದ ಸಿದ್ದಾರ್ಥ್ ಜೈನ್ (19) ತಂದೆ: ಪಣೀಂದ್ರ ಕುಮಾರ್ ಜೈನ್, ವಾಸ: ಸರಸ್ವತಿ ನಿಲಯ, ಎಳನೀರು, ಮಲವಂತಗೆ ಗ್ರಾಮ ಬೆಳ್ತಂಗಡಿ ತಾಲೂಕು ರವರು ಕಾರ್ಕಳಧ ಬಾಹುಬಲಿ ಮಸ್ತಕಾಭಿಷೇಕದ ಪ್ರಯುಕ್ತ ತನ್ನ KA 20 C 5114 ಮಾರುತಿ ಕಾರಿನಲ್ಲಿ ತಾಯಿ ಜಯಲಕ್ಷ್ಮಿ, ಅಕ್ಕ ಅರ್ಚನಾ, ಅಣ್ಣ ದೀಕ್ಷಿತ್ ಹಾಗೂ ಕಾರಿನ ಚಾಲಕ ಅಹಮ್ಮದ್ ಅಬ್ಜಲ್ ಇವರೊಂದಿಗೆ ಕಾರ್ಕಳಕ್ಕೆ ಬಂದು ದಿನಾಂಕ 22.01.2015 ರಂದು ಬೆಳಗ್ಗಿನ ಜಾವ ಮಸ್ತಕಾಭಿಷೇಕ ಕಾರ್ಯಕ್ರಮ ಮುಗಿಸಿ ವಾಪಸ್ಸು ಕಾರ್ಕಳ ಕಡೆಯಿಂದ ಕುದ್ರೆಮುಖ ಕಡೆಗೆ ಹೋಗುವಾಗ 01:00 ಗಂಟೆ ಸುಮಾರಿಗೆ ಮಾಳಾ ಚೆಕ್ ಪೋಸ್ಟ್ ನಿಂದ ಸುಮಾರು 250 ಮೀಟರ್ ದೂರದಲ್ಲಿ ರಾಷ್ಟ್ರಿಯ ಹೆದ್ದಾರಿ 13 ರಲ್ಲಿ ಕಾರನ್ನು ಚಾಲಕ ಅಹಮ್ಮದ್ ಅಬ್ಜಲ್ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿಯ ಕಲ್ಲೊಂದಕ್ಕೆ ಡಿಕ್ಕಿ ಹೊಡೆದು ಕಾರು ಮಗುಚಿ ಬಿದ್ದು ಕಾರಿನಲ್ಲಿದ್ದ ಜಯಲಕ್ಷ್ಮಿ ಇವರಿಗೆ ತರಚಿದ ಗಾಯ, ಅರ್ಚನಾ ಇವರಿಗೆ ಎಡಕೈ ರಿಸ್ಟ್ ಬಳಿ ಜಜ್ಜಿದ ಗಾಯ ಹಾಗೂ ದೀಕ್ಷಿತ್ ಎಂಬವರಿಗೆ ಎಡ ಭುಜದ ಹತ್ತಿರ ಮೂಳೆ ಮುರಿತದ ಗಾಯವಾಗಿರುತ್ತದೆ ಎಂಬುದಾಗಿ ಸಿದ್ದಾರ್ಥ್ ಜೈನ್ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/2015 ಕಲಂ:279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ
- ಹೆಬ್ರಿ: ದಿನಾಂಕ 12/01/15 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿದಾರರಾದ ಅಶ್ವಥ ಕುಲಾಲ್ (23), ತಂದೆ: ಸುರೇಶ್ ಕುಲಾಲ್ ವಾಸ: “ಲಕ್ಷ್ಮಿ ನಿವಾಸ”, ಹಿತ್ಲುಗುಂಡಿ ಹೌಸ್, ವರಂಗ ಗ್ರಾಮ, ಕಾರ್ಕಳ ತಾಲೂಕು ರವರು ತನ್ನ ಕೆ.ಎ. 20.ಇ.ಇ.4250 ನೇ ಬಜಾಜ್ ಪಲ್ಸರ್ ಮೋಟಾರ್ ಸೈಕಲನ್ನು ತಾನು ಕೆಲಸ ಮಾಡುವ ಹೆಬ್ರಿ ಗ್ರಾಮದ ಹೆಬ್ರಿ ಕನ್ಯಾನದಲ್ಲಿರುವ ಬನಶಂಕರಿ ಇಂಜಿನಿಯರ್ ವರ್ಕ್ಸ್ ಕಂಪೌಂಡ್ ನ ಹೊರಗೆ ನಿಲ್ಲಿಸಿದ್ದು, ರಾತ್ರಿ 9:00 ಗಂಟೆಗೆ ಬಂದು ನೋಡಿದಾಗ ಸದರಿ ಮೋಟಾರ್ ಸೈಕಲ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಇದರ ಅಂದಾಜು ಮೌಲ್ಯ ಸುಮಾರು 45.000/-ರೂಪಾಯಿ ಆಗಿರುತ್ತದೆ ಎಂಬುದಾಗಿ ಅಶ್ವಥ ಕುಲಾಲ್ ರವರು ನೀಡಿದ ದೂರಿನಂತೆ ಹೆಬ್ರಿ ಪೋಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2015 ಕಲಂ: 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಕಾರ್ಕಳ: ಪಿರ್ಯಾಧಿದಾರರಾದ ಯಮುನಾ (35) ತಂದೆ: ಚಲ್ಲ @ ಚಲ್ಪಟ್ಟ ವಾಸ: ಆರ್ಯಾಡು ಮನೆ, ಬನಂದಳಿಕೆ ಗ್ರಾಮ, ಕಾರ್ಕಳ ತಾಲೂಕು ಎಂಬವರ ತಂದೆ 65 ವರ್ಷ ಪ್ರಾಯದ ಚಲ್ಲ @ ಚಲ್ಪಟ್ಟ ಎಂಬುವರು ದಿನಾಂಕ 21.01.2015 ರಂದು ಮದ್ಯಾಹ್ನ 12:00 ಗಂಟೆಗೆ ಮನೆಯಿಂದ ಹೋದವರು ರಾತ್ರಿ ಮನೆಗೆ ಬಾರದೆ ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22.01.2015 ಬೆಳಿಗ್ಗೆ ನಂದಳಿಕೆ ಗ್ರಾಮದ ಆರ್ಯಾಡು ಎಂಬಲ್ಲಿ ತನ್ನ ಮನೆಯ ಪಕ್ಕದ ಹಾಡಿಯಲ್ಲಿ ಮರದ ಗೆಲ್ಲಿಗೆ ಕಬ್ಬಿಣದ ಸರಿಗೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ ಎಂಬುದಾಗಿ ಯಮುನಾ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 03/2015 ಕಲಂ: 174 ಸಿ.ಆರ್. ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment