ಅಪಘಾತ ಪ್ರಕರಣ
- ಬೈಂದೂರು: ದಿನಾಂಕ 21/01/2015 ರಂದು ಮದ್ಯಾಹ್ನ 03:30 ಗಂಟೆಯ ವೇಳೆಗೆ ಪಿರ್ಯಾಧಿ ಭುಜಂಗ ಶೆಟ್ಟಿ ಇವರು ಅವರ ಬಾಬ್ತು KA 28 N 6368 ನೇ ಕಾರಿನಲ್ಲಿ ಕಾರಿ ಚಾಲಕ ಶಿವ ಬಸಪ್ಪ@ ಕುಮಾರ್ ಹಾಗೂ ಅವರ ಮೈದುನ ಪ್ರಥ್ವೀದರ್ ಶೆಟ್ಟಿಯವರೊಂದಿಗೆ ಆನೆಗುಡ್ಡೆಯಿಂದ ಬಿಜಾಪುರ ಕಡೆಗೆ ಹೋಗುತ್ತಾ ಕುಂದಾಪುರ ತಾಲೂಕು ಕಂಬದಕೋಣೆ ಗ್ರಾಮದ ಕಂಬದಕೋಣೆ ಹೈಸ್ಕೂಲ್ ಹತ್ತಿರ ತಲುಪುತ್ತಿರುವಾಗ ಬೈಂದೂರು ಕಡೆಯಿಂದ MH 24 V 7828 ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿ ದಾರರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಎರಡೂ ಕಾರು ಜಖಂಗೊಂಡು ಎರಡು ಕಾರಿನಲ್ಲಿದ್ದವರಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2015 ಕಲಂ : 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕುಂದಾಪುರ: ದಿನಾಂಕ 22/01/2015 ರಂದು ಸಮಯ ಸುಮಾರು ಬೆಳಿಗ್ಗೆ 9:00 ಗಂಟೆಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಚಿಕನ್ ಸಾಲ್ ರಸ್ತೆಯ ಮೈಲಾರೇಶ್ವರ ದೇವಸ್ಥಾನದ ಹತ್ತಿರ ರಸ್ತೆಯಲ್ಲಿ ಆಪಾದಿತ KA-20 A-8282 ನೇ ಶಾಲಾ ಬಸ್ ಚಾಲಕನು ಬಸ್ ಅನ್ನು ಸಂಗಂ ಕಡೆಯಿಂದ ಹಳೇಬಸ್ ನಿಲ್ದಾಣದ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಸುನಿಲ್ ಕುಮಾರ್ ಇವರು ಹಳೇಬಸ್ ನಿಲ್ದಾಣದ ಕಡೆಯಿಂದ ಸಂಗಂ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ EE-4582 ನೇ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಬಲ ಕಾಲು ತೊಡೆ, ಮುಂಗಾಲಿಗೆ ಜಖಂ ಹಾಗೂ ಒಳನೋವು ಮತ್ತು ಎಡ ಪಾದದ ಮೇಲ್ಭಾಗದಲ್ಲಿ ರಕ್ತ ಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2015 ಕಲಂ 279, 337 ಐಪಿಸಿ, 134 (ಎ) &(ಬಿ) ಐ.ಎಮ್.ವಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment