ಅಪಘಾತ
ಪ್ರಕರಣ
- ಮಣಿಪಾಲ:ಪಿರ್ಯಾದಿದಾರರಾದ ವೆಂಕಟೇಶ, ತಂದೆ:ಶಿವನಗೌಡ, ವಾಸ:ಮನೆ ನಂಬ್ರ 16-16ಎ4,ಅನಂತನಗರ, ಮಣಿಪಾಲ, ಉಡುಪಿರವರು ದಿನಾಂಕ:18/01/15 ರಂದು ಮೋಟಾರ್ ಸೈಕಲ್ ನಂಬ್ರ ಕೆಎ 21 ಎಲ್ 1074 ನೇದನ್ನು ಸವಾರಿ ಮಾಡಿಕೊಂಡು ಮಣ್ಣಪಳ್ಳದಿಂದ ಮಣಿಪಾಲ ಕಡೆಗೆ ಬರುತ್ತಿರುವಾಗ ಸಂಜೆ ಸುಮಾರು 4:20 ಗಂಟೆಗೆ ಪ್ರಸನ್ನ ಗಣಪತಿ ದೇವಸ್ಥಾನದ ಬಳಿ ಇರುವ ಟೈಲರ್ ಶಾಪ್ ಬಳಿ ತಲುಪುವಾಗ ಎದುರಿನಿಂದ ಹುಡ್ಕೋ ಕಾಲೋನಿ ಕಡೆಯಿಂದ ಜಿಎ 02 ಸಿ 8612ನೇ ಮೋಟಾರ್ ಸೈಕಲನ್ನು ಅದರ ಸವಾರನು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ವೆಂಕಟೇಶರವರ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ವೆಂಕಟೇಶರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಅವರ ಎರಡು ಕಾಲು ಮತ್ತು ಕೈಗೆ ಗಾಯ ಉಂಟಾಗಿದ್ದು, ಅವರನ್ನು ಅಲ್ಲಿ ಸೇರಿದವರು ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾಗಿರುತ್ತದೆ. ಈ ಬಗ್ಗೆ ವೆಂಕಟೇಶರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 08/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
- ಹಿರಿಯಡ್ಕ:ಪಿರ್ಯಾದಿದಾರರಾದ ಶಿವಪ್ರಸಾದ್ ನಾಯ್ಕ (26) ತಂದೆ:ಶೀನ ನಾಯ್ಕ, ವಾಸ:ಕುಯಿಲಾಡಿ ದರ್ಕಾಸ್, ಬೊಮ್ಮರಬೆಟ್ಟು ಗ್ರಾಮ, ಪಂಚನ ಬೆಟ್ಟು ಅಂಚೆ, ಉಡುಪಿ ತಾಲೂಕುರವರ ತಂದೆ ಶೀನ ನಾಯ್ಕ (60) ಎಂಬವರು ವಿಪರೀತ ಮದ್ಯ ಸೇವನೆಯ ಚಟದವರಾಗಿದ್ದು ಜೊತೆಗೆ ಕಳೆದ ಮೂರು ವರ್ಷದಿಂದ ವಿಪರೀತ ಬೆನ್ನು ನೋವಿನಿಂದಲೂ ನರಳುತ್ತಿದ್ದು ಗುಣಮುಖವಾಗದೆ, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:18/01/2015 ರ ಮಧ್ಯಾಹ್ನ 01:30 ರಿಂದ ಸಂಜೆ 4:30 ರ ನಡುವಿನ ವೇಳೆ ಮನೆ ಸಮೀಪದ ಹಾಡಿಯ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಿವಪ್ರಸಾದ್ ನಾಯ್ಕರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 04/15 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಮಲ್ಪೆ:ಪಿರ್ಯಾದಿದಾರರಾದ ಅಶೋಕ ಪೂಜಾರಿ (39) ತಂದೆ:ದಿವಂಗತ ನಾರಾಯಣ ಪೂಜಾರಿ ವಾಸ:ಚೆನ್ನಂಗಡಿ, ಕೊಡವೂರು ಗ್ರಾಮ ಉಡುಪಿರವರ ತಮ್ಮನಾದ ಅಶ್ವತ್ (29) ಎಂಬಾತನು ಕೊಡವೂರು ಗ್ರಾಮದ ಚೆನ್ನಾಡಿ ಎಂಬಲ್ಲಿನ ತನ್ನ ಮನೆಯಲ್ಲಿ ದಿನಾಂಕ:19/01/2015 ರಂದು ರಾತ್ರಿ 8:00 ಗಂಟೆಗೆ ಊಟ ಮಾಡಿ ಮಲಗಿದ್ದು, ಬೆಳಿಗ್ಗೆ 7:00 ಗಂಟೆಗೆ ಅಶೋಕ ಪೂಜಾರಿರವರ ಮನೆಯವರು ನೋಡುವಾಗ ಕೋಣೆಯ ಮಾಡಿನ ಜಂತಿಗೆ, ಕುತ್ತಿಗೆಗೆ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅಶ್ವತ್‌ರವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಶೋಕ ಪೂಜಾರಿರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 03/2015 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಹೆಬ್ರಿ:ಪಿರ್ಯಾದಿದಾರರಾದ ಮಮತಾ ಶೆಟ್ಟಿ (27), ತಂದೆ:ವಿಶ್ವನಾಥ ಶೆಟ್ಟಿ, ವಾಸ:ವಿನಯ, ಸಂಬೆಟ್ಟು, ಮುದ್ರಾಡಿ ಗ್ರಾಮ, ಕಾರ್ಕಳ ತಾಲೂಕುರವರ ಚಿಕ್ಕಮ್ಮನ ಗಂಡ ಉದಯ ಶೆಟ್ಟಿ (50) ವಾಸ:ಸಂಬೆಟ್ಟು, ಮುದ್ರಾಡಿ ಗ್ರಾಮ, ಕಾರ್ಕಳ ತಾಲೂಕುರವರು ವಿಪರೀತ ಮದ್ಯಸೇವನೆ ಮಾಡುತ್ತಿದ್ದು. ಅವರನ್ನು ಸುಮಾರು 6 ತಿಂಗಳ ಹಿಂದೆ ಮದ್ಯ ಸೇವನೆ ಮಾಡುವುದನ್ನು ಬಿಡಿಸಲು ಉಡುಪಿ ಬಾಳಿಗ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ವೇಳೆಯಲ್ಲಿ ವೈದ್ಯರು ಉದಯ ಶೆಟ್ಟಿಯವರ ಹೊಟ್ಟೆಯ ಪಿತ್ತಕೋಶದಲ್ಲಿ ತೊಂದರೆಯಾಗಿರುವುದಾಗಿಯೂ, ತೊಂದರೆಗೆ ಅವರ ಕುಡಿತವೇ ಕಾರಣ ಎಂಬುದಾಗಿ ತಿಳಿಸಿದ್ದು, ಆ ಬಳಿಕ ಉದಯ ಶೆಟ್ಟಿರವರು ಕುಡಿಯುವುದನ್ನು ಬಿಟ್ಟಿದ್ದರು, ಬಳಿಕ ಅವರು ಯಾವಾಗಲೂ ಮನೆಯಲ್ಲಿ ಖಿನ್ನತೆಯಿಂದ ಇದ್ದು, ಮಾನಸಿಕವಾಗಿ ಕೊರಗುತ್ತಿದ್ದು, ಇದೇ ವಿಚಾರದಲ್ಲಿ ಉದಯ ಶೆಟ್ಟಿರವರು ಮನನೊಂದು ಜೀವನದಲ್ಲಿ ಜಿಗುಷ್ಸೆಗೊಂಡು ಈ ದಿನ ದಿನಾಂಕ:19/01/15 ರಂದು ಬೆಳಿಗ್ಗೆ 05:00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯ ಮದ್ಯಾವಧಿಯಲ್ಲಿ ತನ್ನ ಹೆಂಡತಿ ಮನೆಯಾದ ಮುದ್ರಾಡಿ ಗ್ರಾಮದ ಸಂಬೆಟ್ಟು ಎಂಬಲ್ಲಿ ಮನೆಯ ಬಳಿ ಇರುವ ಪಾಜೆ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಮಮತಾ ಶೆಟ್ಟಿರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 05/15 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಕೋಟ:ದಿನಾಂಕ:02/01/2015 ರಂದು ಸಂಜೆ ಸಮಯ 4:00 ಗಂಟೆಗೆ ಈಸ್ಟರ್ ಡಯಾಸ್ (50) ರವರು ತನ್ನ ಮನೆಯಾದ ಐರೋಡಿ ಗ್ರಾಮದ ಮಾಬುಕಳ ಕರ್ಕಿಬೈಲು ಎಂಬಲ್ಲಿರುವ ತನ್ನ ಮನೆಯ ಬಚ್ಚಲು ಮನೆಯಲ್ಲಿ ನೀರು ಕಾಯಿಸಲು ಹೋಗಿ ಒಲೆಗೆ ಬೆಂಕಿ ಉರಿಸುವಾಗ ಅವರು ಧರಿಸಿದ್ದ ನೈಟಿಗೆ ಬೆಂಕಿ ತಾಗಿ ಉರಿದು ಬೆನ್ನಿನ ಭಾಗಕ್ಕೆ ಸುಟ್ಟ ಗಾಯವಾಗಿದ್ದು ನಂತರ ಆಕೆಯ ಮಗನಾದ ಥೋಮಸ್ ಡಯಾಸ್‌ರವರು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರದ ಪ್ರಣವ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು, ದಿನಾಂಕ:18/01/2015 ರಂದು ಚಿಕಿತ್ಸೆ ಫಲಕಾರಿಯಾಗದೇ ಸಂಜೆ 07:15 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಥೋಮಸ್ ಡಯಾಸ್ (29)ತಂದೆ:ದಿವಂಗತ ಲುವಿ ಡಯಾಜ್, ವಾಸ:ಕರ್ಕಿಬೈಲು ಮಾಬುಕಳ, ಐರೋಡಿ, ಕೋಟತಟ್ಟು ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 03/2015 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment