ವಂಚನೆ
ಪ್ರಕರಣ
ಮನುಷ್ಯ
ಕಾಣೆ ಪ್ರಕರಣ- ಕುಂದಾಪುರ: ಪಿರ್ಯಾದುದಾರರಾದ ಎಂ. ಎ. ಖಾಲಿದ್ (52) ತಂದೆ: ಎಂ.ಬಿ. ಅಹಮ್ಮದ್ ವಾಸ: ಮುರ್ಶಿದಾ ಮಂಜಿಲ್, ಕೋಟೇಶ್ವರ, ಮೂಡುಗೋಪಾಡಿ, ಕುಂದಾಪುರ ತಾಲೂಕು ಎಂಬವರ ಕೆಎ 20 ಬಿ 0947 ನೇ ಲಾರಿಯನ್ನು ಆಪಾದಿತ ಮಹಮ್ಮದ್ ಹನೀಫ್ ಕೋಟೇಶ್ವರ, ಕುಂದಾಪುರ ತಾಲೂಕು ಎಂಬಾತನು ಮೋಸ ಹಾಗೂ ಕಪಟತನದಿಂದ ಪಡೆದು ವಂಚಿಸುವ ಉದ್ದೇಶದಿಂದ ದಿನಾಂಕ 13/03/2014 ರಂದು ಕುಂದಾಪುರದ ಕೋಟೇಶ್ವರದ ಬಳಿ ಲಾರಿಯನ್ನು ತಿಂಗಳ ಬಾಡಿಗೆ 18,000/- ರಂತೆ 3 ತಿಂಗಳ ಬಾಡಿಗೆಗೆ ಕೇಳಿದ್ದು, ಆದರೆ ಪಿರ್ಯಾದಿದಾರರು ಲಾರಿಯನ್ನು 7,50,000/- ಲಕ್ಷಕ್ಕೆ ಮಾರಾಟ ಮಾಡಿಕೊಟ್ಟಿದ್ದು, ಪೈನಾನ್ಸ್ ನಲ್ಲಿ ಬಾಕಿಯಿರುವ 4,50,000/- ಲಕ್ಷ ಹಣವನ್ನು ತಾನೇ ತೀರಿಸುವುದಾಗಿ ಅಲ್ಲದೇ 3,00,000/- ಲಕ್ಷ ಹಣವನ್ನು 6 ತಿಂಗಳ ಒಳಗೆ ಕೊಡುವುದಾಗಿ ಹೇಳಿ ನಂಬಿಸಿ, ಮುಂಗಡವಾಗಿ 50,000/- ಹಣವನ್ನು ಆರೋಪಿಯು ಪಿರ್ಯಾದಿದಾರರಿಗೆ ನೀಡಿದ್ದು, ಅದೇ ದಿನ ಲಾರಿಯನ್ನು ತೆಗೆದುಕೊಂಡು ಹೋಗಿದ್ದು, ಆರೋಪಿಯು ಪಿರ್ಯಾದಿದಾರರು ಹೇಳಿದಂತೆ ನಡೆದುಕೊಳ್ಳದೇ ಇದ್ದು, ದಿನಾಂಕ: 20/04/2014 ರಂದು ಪಿರ್ಯಾದಿದಾರರು ಪೋನ್ ಮಾಡಿದಾಗ ಹಣವನ್ನು ಸ್ವಲ್ಪ ದಿವಸದಲ್ಲಿ ಕೊಡುವುದಾಗಿ ಹೇಳಿದ್ದು, ಆದರೆ ದಿನಾಂಕ: 29/01/2014 ರಂದು ಪೋನ್ ಮಾಡಿದಾಗ ಹಣವನ್ನು ತೆಗೆದುಕೊಂಡು ಬರುವಾಗ ಹಾಸನದಲ್ಲಿ ಚುನಾವಣಾ ಅಧಿಕಾರಿಗಳು ಹಣ ಜಪ್ತಿ ಮಾಡಿರುವುದಾಗಿ ತಿಳಿಸಿ, ನಂತರ ಪೋನ್ ಕಾಲ್ ನ್ನು ಸ್ವೀಕರಿಸದೇ ಫೈನಾನ್ಸ್ ಸಾಲದ ಕಂತನ್ನು ಕಟ್ಟದೇ ಪಿರ್ಯಾದಿದಾರರಿಗೆ 2,50,000/- ಲಕ್ಷ ಹಣವನ್ನು ನೀಡದೇ, ಸರಕಾರಕ್ಕೆ ತೆರಿಗೆ ಕಟ್ಟದೇ ಕುಂದಾಪುರದಲ್ಲಿ ಲಾರಿ, ಟೆಂಪೋ, ಕಾರನ್ನು ಬೇರೆಯವರಿಂದ ಮೋಸದಿಂದ ಪ್ರೇರೇಪಿಸಿ ಪಡೆದು ವಂಚನೆ ಮಾಡಿರುವುದಲ್ಲದೇ ಲಾರಿಯನ್ನು ವಾಪಾಸು ನೀಡದೇ ವಂಚಿಸಿರುವುದಾಗಿದೆ ಎಂಬುದಾಗಿ ಎಂ. ಎ. ಖಾಲಿದ್ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2015 ಕಲಂ: 417, 420 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
- ಶಂಕರನಾರಾಯಣ: ಪಿರ್ಯಾಧಿದಾರರಾದ ಸಿದ್ದ (54) ತಂದೆ ಕಾಳ ವಾಸ ಜನತಾ ಕಾಲೋನಿ, ಗೋಳಿಯಂಗಡಿ, ಕುಂದಾಪುರ ತಾಲೂಕು ಎಂಬಬರ 25 ವರ್ಷ ಪ್ರಾಯದ ಮಗನಾದ ಅಣ್ಣಪ್ಪ ಎಂಬವರು ದಿನಾಂಕ 13/01/2015 ರಂದು ಮದ್ಯಾಹ್ನ 2.00 ಗಂಟೆಗೆ ಕುಂದಾಪುರ ತಾಲೂಕು ಬೆಳ್ವೆ ಗ್ರಾಮದ ಗೋಳಿಯಂಗಡಿ ಜನತಾ ಕಾಲೋನಿ ಯಲ್ಲಿರುವ ತನ್ನ ಮನೆಯಿಂದ ಹೋದವರು ಈ ವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂಬುದಾಗಿ ಸಿದ್ದ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/2015 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment