ಇತರೇ
ಪ್ರಕರಣ
- ಶಿರ್ವಾ: ಪಿರ್ಯಾದಿ ಶ್ರೀಮತಿ ವಿಮಲ ಆಂಚನ್ ಇವರು ದಿನಾಂಕ 16.01.2015 ರಂದು ಮಹಮ್ಮದ್ ಅಜಾಮ್ ಮೆಹ್ರಾಬ್ ಬೆಳಪು ಗ್ರಾಮ ಎಂಬವರ ಮೇಲೆ ದೂರು ಅರ್ಜಿಯನ್ನು ಶಿರ್ವ ಠಾಣೆಯಲ್ಲಿ ನೀಡಿದ್ದು ಈ ದೂರು ಅರ್ಜಿ ಪ್ರಶ್ನಿಸಿ ಮಹಮ್ಮದ್ ಅಜಾಮ್ ಮೆಹ್ರಾಬ್ ಬೆಳಪು ಗ್ರಾಮ ಈತನು, ಪಿರ್ಯಾದಿದಾರರು ದಿನಾಂಕ: 19.01.2015 ರಂದು 13:30 ಗಂಟೆಗೆ ಬೆಳಪು ಗ್ರಾಮ ಪಂಚಾಯತ್ ನಿಂದ ನಡೆದುಕೊಂಡು ದಾರಿಯ ಮಧ್ಯೆ ಹೋಗುತ್ತಿದ್ದಾಗ ತಡೆದು ನಿಲ್ಲಿಸಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2014, ಕಲಂ 341,504,506 ಐಪಿಸಿ ಮತ್ತು ಕಲಂ 3 [1] [10] ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಕಾರ್ಕಳ: ಕಾರ್ಕಳ ತಾಲೂಕಿನ ಕಸಬ ಗ್ರಾಮದ ಮಾರ್ಕೆಟ್ ರಸ್ತೆ ಸತ್ಯನಾರಾಯಣ ನಗರದ ಶ್ರಿ ಲಕ್ಷ್ಮೀ ನಿವಾಸ ಮನೆಯ ನಿವಾಸಿ ಪ್ರಾಯ ಸುಮಾರು 53 ವರ್ಷದ ಶ್ರೀಮತಿ ಹರ್ಷಿಣಿ ಡಿ ಆರ್ಯ ಇವರು ಸುಮಾರು 15 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಯಾವುದೋ ಕಾರಣದಿಂದ ತನ್ನ ಜೀವನದಲ್ಲಿ ಬೇಸರಗೊಂಡು ದಿನಾಂಕ 19/01/2015 ರ 17:00 ಗಂಟೆಯಿಂದ 20:00 ಗಂಟೆಯ ಮಧ್ಯೆ ಕಾರ್ಕಳ ರಾಮ ಸಮುದ್ರದ ಕೆರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 04/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment