Monday, January 19, 2015

Daily Crimes Reported as On 19/01/2015 at 07:00 Hrs

ಅಪಘಾತ ಪ್ರಕರಣಗಳು
  • ಉಡುಪಿ ಸಂಚಾರ:ಪಿರ್ಯಾದಿದಾರರಾದ ಶ್ರೀ ದಿನೇಶ್ ದೇವಾಡಿಗ (49) ತಂದೆ:ಗುರುವಯ್ಯ ದೇವಾಡಿಗ ವಾಸ:ಶೃತಿ ನಿಲಯ, ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ, ಚಾಂತಾರು ಗ್ರಾಮ, ಬ್ರಹ್ಮಾವರ ಉಡುಪಿರವರು ಈ ದಿನಾಂಕ:18/01/2015 ರಂದು ಮದ್ಯಾಹ್ನ 3:35 ಗಂಟೆಗೆ ತನ್ನ ಕೆಎ.20-ಡಬ್ಲ್ಯೂ-3105ನೇ ಮೋಟಾರ್ ಸೈಕಲಿನಲ್ಲಿ ಸಹ ಸವಾರರನ್ನಾಗಿ ಅವರ ಅಣ್ಣ ರಮೇಶ್ ದೇವಾಡಿಗ ಎಂಬವರನ್ನು ಕುಳ್ಳಿರಿಸಿಕೊಂಡು ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಉಡುಪಿ ಕಲ್ಸಂಕ, ಗುಂಡಿಬೈಲು ಮಾರ್ಗವಾಗಿ ಅಂಬಾಗಿಲು ದುರ್ಗಾ ಜನರಲ್ ಸ್ಟೋರ್ ಬಳಿ ತಲುಪುವಾಗ ಹಿಂದಿನಿಂದ ಬಂದ ಕೆಎ 20 ಝಡ್-0255ನೇ ಕಾರು ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ದಿನೇಶ್ ದೇವಾಡಿಗರ ಮೋಟಾರ್ ಸೈಕಲಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲಿನಲ್ಲಿದ್ದ ಇಬ್ಬರು ರಸ್ತೆಗೆ ಬಿದ್ದು ದಿನೇಶ್ ದೇವಾಡಿಗರ ಬಲ ಹಣೆಗೆ, ಎರಡೂ ಕೈಗಳಿಗೆ ಮತ್ತು ಎಡಕಾಲಿನ ತೋರು ಬೆರಳಿಗೆ ರಕ್ತಗಾಯವಾಗಿದ್ದು, ರಮೇಶ್ ದೇವಾಡಿಗರವರ ಎರಡೂ ಕೈಗಳಿಗೆ ರಕ್ತಗಾಯವಾಗಿ ಚಿಕಿತ್ಸೆ  ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಈ ಬಗ್ಗೆ ದಿನೇಶ್ ದೇವಾಡಿಗರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 05/2015 ಕಲಂ:279, 337,ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
  • ಕೊಲ್ಲೂರು:ದಿನಾಂಕ:18/01/2015  ರಂದು ಸಂಜೆ 04.30 ಗಂಟೆಗೆ ಚಿತ್ತೂರು ಕಡೆಯಿಂದ ವಂಡ್ಸೆ ಕಡೆಗೆ ಕೆ.ಎ 20.ಬಿ 8988 ನೇ 407 ಮಿನಿ ಬಸ್ಸಿನ ಚಾಲಕ ಎನ್. ಮಹ್ಮದ್ ಆಸ್ಲಂ ನು ತಾನು ಚಲಾಯಿಸುತ್ತಿದ್ದ ವಾಹನವನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ವಂಡ್ಸೆ ಗ್ರಾಮದ ಚಿತ್ತರಾಡಿ ಕ್ರಾಸ್ ಬಳಿ ಎದುರಿನಿಂದ ಬರುತ್ತಿದ್ದ ಕೆ.ಎ.20 ಇ.ಬಿ.1390 ನೇ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ನಜ್ಜು- ಗುಜ್ಜಾಗಿ ಬೈಕ್ ಸವಾರ ಪ್ರಶಾಂತ ಶೆಟ್ಟಿಗೆ  ಮೂಳೆ ಮುರಿತವಾಗಿ, ಕೈಗೆ ತೀವೃ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕರುಣಾಕರ ಶೆಟ್ಟಿ (43) ತಂದೆ:ದಿವಂಗತ ಆನಂದ ಶೆಟ್ಟಿ ವಾಸ:ದುರ್ಗಾಶ್ರೀ ಹೆಟ್ನಬೈಲು ನಂದ್ರೋಳ್ಳಿ ಬೆಳ್ಳಾಲ ಗ್ರಾಮ ಕುಂದಾಪುರ ತಾಲೂಕುರವರು ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 04/2015  ಕಲಂ:279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
  • ಬೈಂದೂರು:ದಿನಾಂಕ 17/01/2015 ರಂದು ಮದ್ಯಾಹ್ನ 02:00 ಗಂಟೆಗೆ ಪಿರ್ಯಾದಿದಾರರಾದ ಗೋಪಾಲ ತಂದೆ:ದಿವಂಗತ ಬಡಿಯಾ, ವಾಸ:ತ್ರಿಶಕ್ತಿ ನಿಲಯ, ತ್ರಾಸಿ ಗ್ರಾಮ, ಕುಂದಾಪುರ ತಾಲೂಕುರವರು ತನ್ನ ಮಕ್ಕಳಾದ ಪೂಜಾ ಮತ್ತು ಪೂಜಿತ (9) ರವರನ್ನು ಕರೆದುಕೊಂಡು ನಾಯ್ಕನಕಟ್ಟೆಯ ಕಿರಿಯ ಪ್ರಾಥಮಿಕ  ಶಾಲೆಯಿಂದ ವಾಪಾಸ್ಸು ಮನೆಯ ಕಡೆಗೆ ನಾಯ್ಕನ ಕಟ್ಟೆಯ ಜಟ್ಟಿಗೇಶ್ವರ ದೇವಸ್ಥಾನದ ಕಡೆಗೆ ಬರುವ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯಲ್ಲಿ ಮಣ್ಣು  ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ  ಕುಂದಾಪುರ ತಾಲೂಕು ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆ  ಜಟ್ಟಿಗೇಶ್ವರ ದೇವಸ್ಥಾನದ ಎದುರು ತಲುಪುತ್ತಿದ್ದಂತೆ   KA 01 MP 5 ನೇ ಸ್ಕಾರ್ಪಿಯೋ ಕಾರಿಯ ಚಾಲಕನು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪೂಜಿತಾಳಿಗೆ ಡಿಕ್ಕಿ ಹೊಡೆದ ಪರಿಣಾಮ ಪೂಜಿತಾಳ ಎರಡು ಕಾಲಿಗೆ ರಕ್ತಗಾಯವಾಗಿರುತ್ತದೆ.ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2015  ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

No comments: