Sunday, January 18, 2015

Daily Crime Reports As on 18/01/2015 at 19:30 Hrs

ಅಪಘಾತ ಪ್ರಕರಣಗಳು 
  • ಕೊಲ್ಲೂರು: ದಿನಾಂಕ 15/01/2015  ರಂದು ಪಿರ್ಯಾದಿದಾರರಾದ ಸದಾಶಿವ ಆಚಾರ್‌ (43) ತಂದೆ: ಲಕ್ಷ್ಮಣ್‌ ಆಚಾರ್‌ ವಾಸ: ಸರ್ಪನಕಟ್ಟೆ, ಯಳವಾಡಿಕವರ್‌ ಭಟ್ಕಳ ತಾಲೂಕು, ಉತ್ತರಕನ್ನಡ ಜಿಲ್ಲೆ ಎಂಬವರ ಸಂಬಂದಿಕರಾದ ಮಂಜುನಾಥ ಕೆ ಆಚಾರ್‌ ಹಾಗೂ ಅವರ ಮಗ ಪ್ರದೀಪ್‌ ಆಚಾರ್‌ ಇವರು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಬಳಿಕ ವಾಪಾಸು ಭಟ್ಕಳಕ್ಕೆ ಕೆ.ಎ 47 ಜೆ 6508 ನೇ ಬೈಕ್‌ ನಲ್ಲಿ ಹೋಗುವಾಗ ಸಮಯ ಸುಮಾರು 18:00 ಗಂಟೆಗೆ ಚಿತ್ತೂರು ಪೇಟೆಯಿಂದ ಮುಂದಕ್ಕೆ ಕೊಲ್ಲೂರು ಕಡೆ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಕೆ.ಎ 47 ಜೆ 6508 ನೇ ಬೈಕ್‌ ಸವಾರ ಮಂಜುನಾಥ. ಕೆ ಆಚಾರ್‌ ರವರು ಅತೀ ವೇಗ ಮತ್ತು ಅಜಾಗರುಕತೆಯಿಂದ ತನ್ನ ಮೋಟಾರು ಬೈಕ್‌ ನ್ನು ಚಲಾಯಿಸಿಕೊಂಡು ಬಂದು ಒಮ್ಮೆಲೆ ಬ್ರೇಕ್‌ ಹಾಕಿದ ಕಾರಣ ಬೈಕ್‌ ಸ್ಕಿಡ್‌ ಆಗಿ ಕೆಳಗೆ ಬಿದ್ದ ಪರಿಣಾಮ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಸಹ ಸವಾರ ಪ್ರದೀಪ್‌ ಆಚಾರ್‌ ಇವರಿಗೆ ಮುಖದ ಭಾಗಕ್ಕೆ ಗಂಭೀರ ಸ್ವರೂಪದ ಗಾಯ ಉಂಟಾಗಿದ್ದು ಚಿಕಿತ್ಸೆ ಬಗ್ಗೆ  ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದು ಬಳಿಕ ಮಂಗಳೂರಿನ ಫಾದರ್‌ ಮುಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಸದಾಶಿವ ಆಚಾರ್‌ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2015 ಕಲಂ: ಕಲಂ 279, 338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಪಡುಬಿದ್ರಿ: ದಿನಾಂಕ 17.01.2015 ರಂದು 22:30 ಗಂಟೆಗೆ ನಡ್ಸಾಲು ಗ್ರಾಮದ ಪಡುಬಿದ್ರಿ ಸೋನು ಡಾಬಾದಲ್ಲಿ ಪಿರ್ಯಾದಿದಾರರಾದ ಬಾಲಕೃಷ್ಣ ಬಿ. ಶೆಟ್ಟಿ (52) ತಂದೆ ದಿ. ಬೋಜ ಶೆಟ್ಟಿ ವಾಸ ಪ್ಲಾಟ್ ನಂಬ್ರ. 702, 8ನೇ ಮಹಡಿ, ವೆಂಕಟಗಿರಿ ರೆಸಿಡೆನ್ಸಿ, ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಎದುರುಗಡೆ, ಮುಲ್ಕಿ, ಮಂಗಳೂರು ತಾಲೂಕು ದ.ಕ. ಜಿಲ್ಲೆ. ರವರು ಊಟ ಮುಗಿಸಿ ಡಾಬಾದ ಎದುರು ರಾ.ಹೆ 66 ರ ಪಕ್ಕದಲ್ಲಿ ಮಣ್ಣು ರಸ್ತೆಯಲ್ಲಿ ನಿಂತು ಕೊಂಡಿರುವಾಗ ಉಚ್ಚಿಲ ಕಡೆಯಿಂದ ಪಡುಬಿದ್ರಿ ಕಡೆಗೆ ಕೆಎ-20-ಎಂ.ಎ-0503 ನೇ ಕಾರಿನ ಚಾಲಕ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲ ಕಾಲು ಹಾಗೂ ಎಡ ಕೈಗೆ ಮೂಳೆ ಮುರಿತವಾಗಿರುತ್ತದೆ. ಎದೆಗೆ ಒಳ ನೋವು ಆಗಿರುತ್ತದೆ. ಹಣೆಗೆ ರಕ್ತಗಾಯವಾಗಿರುತ್ತದೆ. ಬಲಕೈ ಮಣಿಗಂಟಿನಲ್ಲಿ, ಬಲ ಕೆನ್ನೆಯಲ್ಲಿ ಹಾಗೂ ಎಡಕಾಲಿನ ಮೊಣ ಗಂಟಿನಲ್ಲಿ ತರಚಿದ ಗಾಯವಾಗಿ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಬಾಲಕೃಷ್ಣ ಬಿ. ಶೆಟ್ಟಿ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/2015 ಕಲಂ: ಕಲಂ 279, 338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ
  • ಬ್ರಹ್ಮಾವರ: ದಿನಾಂಕ: 17/01/2015 ರಂದು 10.00 ಗಂಟೆಗೆ ಉಡುಪಿ ತಾಲೂಕು ಹೆಗ್ಗುಂಜೆ ಗ್ರಾಮದ ಮೈರ್ ಕೊಮೆ ಎಂಬಲ್ಲಿ ಯಶೋದ ಎಂಬವರ ಅಂಗಳದಲ್ಲಿ ಯಶೋದರಿಗೆ ಬೈಯುತ್ತಿದ್ದ ಆಪಾದಿತ ಚಂದ್ರ ನಾಯ್ಕನಿಗೆ ಪಿರ್ಯಾದಿದಾರರಾದ ಗೋವಿಂದ (37) ತಂದೆ: ಚೀಂಪ ವಾಸ: ಮುನ್ಕಿನಜೆಡ್ ಆರೂರು ಗ್ರಾಮ ಉಡುಪಿ ತಾಲೂಕು ರವರು ಮತ್ತು ಜಯರಾಮ ಎಂಬವರು ಯಾಕೆ ಬೈಯುತ್ತಿದ್ದಿ ಎಂದು ಕೇಳಿದಾಗ ಆಪಾದಿತನು ಏನೂ ಮಾತನಾಡದೆ ಒಮ್ಮೆಲೆ ಜಯರಾಮರ ಮೈಮೇಲೆ ಬಂದು ಬಲ ಕೈಯ ಕಿರುಬೆಳಿಗೆ ಕಚ್ಚಿ ತೀವ್ರ ಗಾಯಗೊಳಿಸಿರುತ್ತಾನೆ. ನಂತರ ಜಯರಾಮನನ್ನು ಬಿಟ್ಟು ಪಿರ್ಯಾದಿದಾರರ ಮೈ ಮೇಲೆ ಬಂದು ಪಿರ್ಯಾದಿದಾರರ ಎಡಕೈಯ ತೋರುಬೆರಳಿಗೆ ಕಚ್ಚಿ ತೀವ್ರ ತರದ ಗಾಯವುಂಟುಮಾಡಿರುತ್ತಾನೆ ಎಂಬುದಾಗಿ ಗೋವಿಂದ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2015 ಕಲಂ: ಕಲಂ 326 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣಗಳು 
  • ಪಡುಬಿದ್ರಿ: ದಿನಾಂಕ 14.01.2015 ರಂದು ಸಾಯಂಕಾಲ 4:00 ಗಂಟೆಯಿಂದ ದಿನಾಂಕ 18.01.2015 ರಂದು ಬೆಳಿಗ್ಗೆ 07:00 ಗಂಟೆಯ ಮಧ್ಯೆ ಪಾದೇಬೆಟ್ಟು ಗ್ರಾಮದ ಕೊಂಕಣ ಪಡ್ಲು ಎಂಬಲ್ಲಿರುವ ಕೊಡ್ದಬ್ಬು ದೈವಸ್ಥಾನದ ಮುಂದಿನ ಮುಖ್ಯ ದ್ವಾರದ ಬಾಗಿಲ ಬೀಗ ಮುರಿದು ಯಾರೋ ಕಳ್ಳರು ಒಳ ಪ್ರವೇಶಿಸಿ ದೈವಸ್ಥಾನದ ಒಳಗಿದ್ದ ಪಂಚಲೋಹದ  ಕೊಡ್ದಬ್ಬು ದೈವದ ಮೂರ್ತಿ, ಧೂಮವತಿ ದೈವದ ಮೂರ್ತಿ, ತನ್ನಿಮಾನಿಗ  ದೈವದ ಮೂರ್ತಿ ಹಾಗೂ ಧೂಮವತಿ ದೈವದ ಕುದುರೆ ಸುಮಾರು 1 ಅಡಿ ಎತ್ತರದ ಮೂರ್ತಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾಗಿರುವ 4 ಮೂರ್ತಿಯ ಅಂದಾಜು ಮೌಲ್ಯ ರೂಪಾಯಿ 48,000/- ಆಗಿರುತ್ತದೆ ಎಂಬುದಾಗಿ ಬಾಬು ಕೋಟ್ಯಾನ್ (59) ತಂದೆ ದಿ. ಮುದರ ಗುರಿಕಾರ ವಾಸ ಶ್ರೀ ಗಣೇಶ್ ಕೃಪಾ, ಪಾದೇಬೆಟ್ಟು ಗ್ರಾಮ, ಪಡುಬಿದ್ರಿ  ಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2015 ಕಲಂ: ಕಲಂ 454, 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಪಡುಬಿದ್ರಿ: ದಿನಾಂಕ 17.01.2015 ರಂದು ಸಾಯಂಕಾಲ 19:00 ಗಂಟೆಯಿಂದ ದಿನಾಂಕ 18.01.2015 ರಂದು ಬೆಳಿಗ್ಗೆ 06:00 ಗಂಟೆಯ ಮಧ್ಯೆ ಪಾದೇಬೆಟ್ಟು ಗ್ರಾಮದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಮುಖ್ಯ ದ್ವಾರದ ಬಾಗಿಲ ಚಿಲಕದ ಕೊಂಡಿಯನ್ನು ಹಾಗೂ ಗರ್ಭಗುಡಿಗೆ ಹಾಕಿರುವ ಶಟರನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಗರ್ಭಗುಡಿಯಲ್ಲಿದ್ದ ಪಂಚಲೋಹದ ಶ್ರೀ ರಾಮ, ಲಕ್ಷ್ಮಣ, ಸೀತೆ, ಹನುಮಂತ ಹಾಗೂ ಅನ್ನಪೂರ್ಣೇಶ್ವರಿ ದೇವರ ಸಣ್ಣ ಮೂರ್ತಿಗಳನ್ನು ಕಳವು ಮಾಡಿರುವುದಲ್ಲದೇ ಗರ್ಭಗುಡಿಯ ಪಕ್ಕದಲ್ಲಿದ್ದ ಇದ್ದಂತಹ ಕಾಣಿಕೆ ಡಬ್ಬಿ ಕೂಡಾ ಕಳವು ಮಾಡಿರುವುದಾಗಿದೆ.  ಕಳವಾಗಿರುವ ಮೂರ್ತಿಯ ಹಾಗೂ ಕಾಣಿಕೆ ಡಬ್ಬಿಯ ಅಂದಾಜು ಮೌಲ್ಯ ರೂಪಾಯಿ 12,000/= ಆಗಿರುತ್ತದೆ ಎಂಬುದಾಗಿ ಸುಬ್ರಮಣ್ಯ ಉಡುಪ (45) ತಂದೆ ದಿ. ಲಕ್ಷ್ಮಿ ನಾರಾಯಣ ಉಡುಪ ವಾಸ ಶ್ರೀ ಮಾತಾ, ಪಾದೆಬೆಟ್ಟು ಗ್ರಾಮ, ಪಡುಬಿದ್ರಿ ಅಂಚೆ, ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2015 ಕಲಂ: ಕಲಂ 454, 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: