ಅಪಘಾತ ಪ್ರಕರಣಗಳು
- ಪಡುಬಿದ್ರಿ: ದಿನಾಂಕ. 17.01.2015 ರಂದು 21:45 ಗಂಟೆಗೆ ನಂದಿಕೂರು ಗ್ರಾಮದ ಶ್ರೀ ರಾಮಮಂದಿರದ ಹತ್ತಿರ, ರಾಜ್ಯ ಹೆದ್ದಾರಿ 1 ರಲ್ಲಿ ಆರ್.ಎನ್.ಎಸ್ ಕಂಪೆನಿಯವರಿಂದ ರಸ್ತೆಯ ಕಾಮಗಾರಿ ನಡೆಯುತ್ತಿರುವ ಮುಖ್ಯ ರಸ್ತೆಯ ಪಕ್ಕದ ಮಣ್ಣು ರಸ್ತೆಯಲ್ಲಿ ರಿಪ್ಲೇಕ್ಟರ್ ಸೇಪ್ಟಿ ಕೋನ್ ಅಳವಡಿಸಿ ನಿಲ್ಲಿಸಲಾಗಿದ್ದ ಟೆಂಡಮ್ ರೋಲರ್ ಸೀರಿಯಲ್ ನಂ.234902310323 ಕೋಡ್ 81ಜಿ07 ನೇದಕ್ಕೆ ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಕೆಎ-19-ಸಿ-5099 ನೇ ಬಸ್ಸನ್ನು ಅದರ ಚಾಲಕರಾದ ಆರೋಪಿ ರಾಮಕೃಷ್ಣ ಎಂಬವರು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ರೋಲರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ರೋಲರ್ ಸಂಪೂರ್ಣ ಜಖಂಗೊಂಡಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರಿಗ ಸಣ್ಣ ಪುಟ್ಟ ಗಾಯವಾಗಿರುತ್ತದೆ ಎಂಬಿತ್ಯಾದಿ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/15 ಕಲಂ: ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕೋಟ:ದಿನಾಂಕ 17/01/2015 ರಂದು ಸುರೇಶ ಪೂಜಾರಿ, ತಂದೆ: ನಾರಾಯಣ ಪೂಜಾರಿ, ವಾಸ:ಹಂದೆ ದೇವಸ್ಥಾನ ವಠಾರ ,ಹಂದಟ್ಟು ಕೋಟತಟ್ಟು ಗ್ರಾಮ ಉಡುಪಿ ತಾಲೂಕು ಇವರು ರಾತ್ರಿ ಸಮಯ ಸುಮಾರು 8.30 ಗಂಟೆಗೆ ಕೋಟ ಹೈಸ್ಕೂಲ್ ಬಸ್ ನಿಲ್ದಾಣದ ಬಳಿ ನಿಂತುಕೊಂಡು ಉಮೇಶ್ ನಾಯರಿ ಮತ್ತು ಅಜಿತ್ ಕುಮಾರ್ ಶೆಟ್ಟಿ ರವರೊಂದಿಗೆ ಮಾತನಾಡುತ್ತಿರುವಾಗ ರಾಹೆ 66ರ ಸಮೀಪ ಹಂದೆ ದೇವಸ್ಥಾನದ ಎದುರುಗಡೆ ಡಾಮರು ರಸ್ತೆಯ ಪಶ್ವಿಮ ಬದಿಯ ಮಣ್ಣಿನ ಕಚ್ಚಾರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀನಿವಾಸ ಎಂಬವರಿಗೆ ಸಾಲಿಗ್ರಾಮ ಕಡೆಯಿಂದ ಕೋಟ ಕಡೆಗೆ ಮೋಟಾರು ಸೈಕಲ್ ನಂಬ್ರ ಕೆಎ20ಈಎ4752ನೇದರಲ್ಲಿ ಅದರ ಸವಾರನಾದ ಕಾರ್ಕಡದ ಐತ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ರಾಹೆ 66ರ ಡಾಮರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬಂದು ತೀರಾ ಎಡಕ್ಕೆ ಚಲಾಯಿಸಿ ಶ್ರೀನಿವಾಸರವರಿಗೆ ಢಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಅಲ್ಲದೇ ಮೋಟಾರು ಸೈಕಲ್ ಸವಾರನು ಡಾಮರು ರಸ್ತೆಗೆ ಅಡ್ಡ ಬಿದ್ದ ಪರಿಣಾಮ ಸಣ್ಣಪುಟ್ಟ ತರಚಿದ ಗಾಯವಾಗಿರುವುದಾಗಿದೆ ಎಂಬಯದಾಗಿನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 10/2015 ಕಲಂ 279, 304(ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
- ಕುಂದಾಪುರ ಸಂಚಾರ:ದಿನಾಂಕ 17/01/15 ರಂದು ಸಮಯ ಸುಮಾರು ಮದ್ಯಾಹ್ನ 01:00 ಗಂಟೆಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಮಾಸ್ತಿಕಟ್ಟೆ ರಸ್ತೆಯ ಸೀತಾರಾಮ ನಶ್ಯ ಅಂಗಡಿಯ ಎದುರುಗಡೆ ರಸ್ತೆಯಲ್ಲಿ ಆಪಾದಿತ ರಮೇಶ್ ಪೂಜಾರಿ ಎಂಬವರು KA 19 MA 7684 ನೇ ಕಾರನ್ನು ಮಾಸ್ತಿಕಟ್ಟೆ ಕಡೆಯಿಂದ ಹಳೇಬಸ್ ನಿಲ್ದಾಣದ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನೆಡೆದುಕೊಂಡು ಬರುತ್ತೀದ್ದ ದಿನಕರ ಕಾಂಚನ್ (24), ತಂದೆ:ರಾಮ ವಾಸ:ಮಾತ್ರ ಪೂಜಾ ನಿಲಯ ,ಬೀಜಾಡಿ, ಹೊದ್ರಾಳಿ ,ಕೊಟೇಶ್ವರ ರವರಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ದಿನಕರ ಕಾಂಚನ್ ಎಂಬವರಿಗೆ ಬಲ ಭುಜ ,ಸೊಂಟಕ್ಕೆ ಒಳ ಜಖಂಗೊಂಡಿದ್ದು, ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 08/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ
- ಮಲ್ಪೆ:ದಿನಾಂಕ:17/01/2015 ರಂದು ಬೆಳಿಗ್ಗೆ ಸುಮಾರು 08:00 ಗಂಟೆಗೆ ಸಂದೀಪ್ ಕುಮಾರ್, ತಂದೆ:ಭಾಸ್ಕರ್ ಸುವರ್ಣ, ವಾಸ: ‘ರಮ್ಯಶ್ರೀ’ ಶಿವ ಪಂಚಾಕ್ಷರಿ ಭಜನಾ ಮಂದಿರದ ಹತ್ತಿರ, ಕೊಳ, ಮಲ್ಪೆ, ಕೊಡವೂರು ಗ್ರಾಮ ಇವರು ತನ್ನ ಕೆಎ 20 ಎಕ್ಸ್ 8117 ‘ಹೊಂಡಾ ಶೈನ್’ ಮೋಟಾರ್ ಸೈಕಲನ್ನು ಕೊಡವೂರು ಗ್ರಾಮದ ಕೊಳ ಪ್ರೆಂಡ್ಸ ಸರ್ಕಲ್ ಹತ್ತಿರ ಇಟ್ಟು ಸ್ನೇಹಿತರೊಂದಿಗೆ ಮಲ್ಪೆ ಬೀಚ್ ಕಡೆ ಹೋಗಿದ್ದು, ಸಮಯ ಸುಮಾರು ಮದ್ಯಾಹ್ನ 01:00 ಗಂಟೆಯೊಷ್ಟೊತ್ತಿಗೆ ವಾಪಸ್ಸು ಕೊಳ ಪ್ರೆಂಡ್ಸ ಸರ್ಕಲ್ ಹತ್ತಿರ ಬಂದು ನೋಡಿದಾಗ ಇವರ ಬಾಬ್ತು ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಸಂದೀಪ್ ಕುಮಾರ್‌ರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 14/2015 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ
- ಉಡುಪಿ ನಗರ : ಶಮೀಳಾ ಸಾಮಗ (29) ಗಂಡ:ನಾಗ ಪ್ರಸಾದ್ ಸಾಮಗ, ವಾಸ:ಸಾಮಗ ನಿಲಯ, ದೊಮವತಿ ರಸ್ತೆ ಬನ್ನಂಜೆ ಉಡುಪಿ ಇವರ 8 ವರ್ಷದ ಮಗ ಆದಿತ್ಯ ಸಾಮಗ ಉಡುಪಿ ವಿದ್ಯೋದಯ ಶಾಲೆಗೆ ದಿನಾಂಕ:16/01/2015 ರಂದು ಬೆಳಿಗ್ಗೆ 9:15 ಗಂಟೆಗೆ ಹೋಗುವಾಗ ದಾವಣಗೆರೆ ಮೂಲದ ಪ್ರಸ್ತತ ಉಡುಪಿಯಲ್ಲಿ ವಾಸವಾಗಿರುವ ಹಾಲೇಶ್ ಗೌಡ ಎಂಬವರು ಪರಿಚಯ ಮಾಡಿಕೊಂಡು, ಇತ್ತೀಚಿನ ದಿನಗಳಲ್ಲಿ ಹಾಲೇಶ್ ಗೌಡನು ಶಮೀಳಾ ಸಾಮಗರ ಮಗನನ್ನು ಪುಸಾಯಿಸಿ ಅಪಹರಣ ಮಾಡುವ ಸಂಚು ನಡೆಸುತ್ತಿದ್ದಾನೆ. ಶಮೀಳಾ ಸಾಮಗರು ಮಗನನ್ನು ಶಾಲೆಗೆ ಬಿಡುವಾಗ ಆತನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಇವರ ಯಜಮಾನರಿಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ. ಹಾಲೇಶ್ ಗೌಡನು ಶಮೀಳಾ ಸಾಮಗ ಗಂಡ ನಾಗಪ್ರಸಾದ್ ಸಾಮಗ ಮತ್ತು ಮಕ್ಕಳಿಗೆ ಹಾಗೂ ಅತ್ತೆಗೊ ಕಿರುಕುಳ ಕೊಡುತ್ತಿದ್ದು ಹಾಲೇಶ್ ಗೌಡನಿಂದ ಜೀವ ಬೆದರಿಕೆ ಎದುರಾಗಿದೆ, ಆದ್ದರಿಂದ ಹಾಲೇಶ್ ಗೌಡನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ : 12/2015 ಕಲಂ 506, 511 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜುಗಾರಿ ಪ್ರಕರಣ
- ಗಂಗೊಳ್ಳಿ:ದಿನಾಂಕ:17/01/2015 ರಂದು ಆಲೂರು ಗ್ರಾಮದ ನ್ಯೂ ಮಂಗಳೂರು ಕಟ್ಟಿಂಗ್ ಶಾಪ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕ ಜುಗಾರಿ ನಡೆಯುತ್ತಿರುವುದಾಗಿ ಸುಬ್ಬಣ್ಣ ಬಿ., ಪಿ.ಎಸ್.ಐ ಗಂಗೊಳ್ಳಿ ಠಾಣೆರವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ 17-00 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಸಂತೋಷ ಭಂಡಾರಿಯನ್ನು ಮಟ್ಕ ಜುಗಾರಿಯ ಹಣದೊಂದಿಗೆ ದಸ್ತಗಿರಿ ಮಾಡಿ ಮಟ್ಕ ಜುಗಾರಿ ಆಟದಿಂದ ಸಂಗ್ರಹಿಸಿದ ನಗದು ಹಣ 690/- ರೂಪಾಯಿ ಮತ್ತು ಮಟ್ಕ ಚೀಟಿ, ಬಾಲ್ ಪೆನ್ನುನ್ನು ಸ್ವಾಧೀನಪಡಿಸಿಕೊಂಡು ಮಟ್ಕಾ ಬಿಡ್ಡರ್ ಮಂಜುನಾಥ ಭಂಡಾರಿ ಮತ್ತು ಸಂತೋಷ ಇವರ ವಿರುದ್ಧ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ : 09/2015 ಕಲಂ 78 (1) (111) ಕೆ.ಪಿ ಆ್ಯಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಪಡುಬಿದ್ರಿ:ದಿನಾಂಕ:17/01/2015 ರಂದು ಸಂಜೆ 16:30 ಗಂಟೆಗೆ ವಾಮನ ಕೋಟ್ಯಾನ್, ಅಧ್ಯಕ್ಷರು, ಗ್ರಾಮ ಪಂಚಾಯತ್, ಹೆಜಮಾಡಿ ಗ್ರಾಮ, ಉಡುಪಿ ಇವರಿಗೆ ಹೆಜಮಾಡಿ ಗ್ರಾಮದ ಅಳಿವೆಕೋಡಿ ಸಮುದ್ರ ತೀರದಲ್ಲಿ ಮೃತ ದೇಹವಿರುವುದಾಗಿ ಪೋನ್ ಕರೆ ಬಂದಿದ್ದು, ಸ್ಥಳಕ್ಕೆ ಹೋಗಿ ಅಲ್ಲಿಗೆ ಹೋಗಿ ನೋಡಲಾಗಿ ಸಮುದ್ರ ದಡದಲ್ಲಿ ಅಂಗಾತವಾಗಿ ಮಲಗಿದ್ದ ಸ್ಥಿತಿಯಲ್ಲಿ ಅಪರಿಚಿತ ಗಂಡಸಿನ ಮೃತ ದೇಹ ಕಂಡು ಬಂದಿದ್ದು, ಮೃತ ದೇಹವು ಸುಮಾರು 3 ದಿನಗಳ ಹಿಂದೆ ಸಮುದ್ರ ನೀರಿಗೆ ಬಿದ್ದಿರ ಬಹುದು. ಮೃತ ದೇಹದ ಚಹರೆ ಅಂದಾಜು ಸುಮಾರು ಐದೂವರೇ ಅಡಿ ಉದ್ದ, ಸಾಧಾರಣಾ ಮೈಕಟ್ಟು, ಕಪ್ಪು ಪ್ಯಾಂಟು ಹಾಗೂ ತಿಳಿ ನೀಲಿ ಬಣ್ಣದ ಉದ್ದ ಕೈಯ ಅಂಗಿ ಹಾಗೂ ಒಳಗಡೆ ಬಿಳಿ ಬಣ್ಣದ ಬನಿಯಾನ್ ಧರಿಸಿರುತ್ತಾರೆ. ಕುತ್ತಿಗೆಯಲ್ಲಿ ಕಪ್ಪು ಬಣ್ಣದ ನೂಲಿಗೆ ತಹಿತ ಕಟ್ಟಿರುತ್ತಾರೆ. ಕಾಲಿನಲ್ಲಿ ಕಪ್ಪು ಬಣ್ಣದ ಶೂ ಹಾಗೂ ಕಪ್ಪು ಬಣ್ಣದ ಸೊಕ್ಸ್ ಇರುತ್ತದೆ, ಕೈ ಯಲ್ಲಿ ಕಪ್ಪು ಬಣ್ಣದ ವಾಚ್ ಇರುತ್ತದೆ ಎಂಬುದಾಗಿ ವಾಮನ ಕೋಟ್ಯಾನ್‌ರವರು ನೀಡಿದ ದೂನರಿಂತೆ ಪಡುಬಿದ್ರಿ ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ : 02/15 ಕಲಂ. 174 ಸಿಆರ್.ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment