ಹಲ್ಲೆ ಪ್ರಕರಣಗಳು
- ಶಂಕರನಾರಾಯಣ: ದಿನಾಂಕ 17.01.15 ರಂದು 08:30 ಘಂಟೆಗೆ ಪಿರ್ಯಾದಿದಾರರಾದ ವಸಂತ ಶೆಟ್ಟಿ (43) ತಂದೆ. ಮಹಾಬಲ ಶೆಟ್ಟಿ ವಾಸ. ಕೊಂಡಳ್ಳಿ ಶಂಕರನಾರಾಯಣ ಗ್ರಾಮ ಕುಂದಾಪುರ ತಾಲೂಕು ರವರು ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಕೊಂಡಳ್ಳಿ ಎಂಬಲ್ಲಿ ಮನೆಯಲ್ಲಿ ಇರುವಾಗ ಆರೋಪಿ ಶ್ರೀಮತಿ ಸರಸ್ವತಿ ಶೆಟ್ಟಿ ಕೊಂಡಳ್ಳಿ ಶಂಕರನಾರಾಯಣ ಗ್ರಾಮ ಕುಂದಾಪುರ ತಾಲೂಕು ರವರು ಫಿರ್ಯಾದಿದಾರರ ಹೆಂಡತಿ ಶ್ರೀಮತಿ ಜ್ಯೋತಿ ಶೆಟ್ಟಿ ರವರಿಗೆ ಬೈಯುತ್ತಿದ್ದು ಈ ಬಗ್ಗೆ ಇನ್ನು ಮುಂದೆ ನನ್ನ ಹೆಂಡತಿಗೆ ಬೈಯ್ದರೆ ಜಾಗ್ರತೆ ಎಂದು ಫಿರ್ಯಾದಿದಾರರು ಹೇಳಿದಾಗ ಆರೋಪಿಯು ಫಿರ್ಯಾದಿದಾರರ ಎಡಕೈಯ ಮಣಿಗಂಟಿನ ಬಳಿ ಹಲ್ಲೆ ಮಾಡಿರುತ್ತಾರೆ ಎಂಬುದಾಗಿ ವಸಂತ ಶೆಟ್ಟಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2015 ಕಲಂ: 323, 324 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
- ಶಂಕರನಾರಾಯಣ: ದಿನಾಂಕ 17.01.15 ರಂದು 08:30 ಘಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸರಸ್ವತಿ ಶೆಟ್ಟಿ (60) ಗಂಡ. ಕುಶಲ ಶೆಟ್ಟಿ ವಾಸ.ಕೊಂಡಳ್ಳಿ ಶಂಕರನಾರಾಯಣ ಗ್ರಾಮ ಕುಂದಾಪುರ ತಾಲೂಕು ರವರು ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಕೊಂಡಳ್ಳಿ ಎಂಬಲ್ಲಿ ಆರೋಪಿ ವಸಂತ ಶೆಟ್ಟಿ ಕೊಂಡಳ್ಳಿ ಶಂಕರನಾರಾಯಣ ಗ್ರಾಮ ಕುಂದಾಪುರ ತಾಲೂಕು ರವರ ಎದುರಿನ ಮನೆಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಯು ಫಿರ್ಯಾದಿದಾರರಲ್ಲಿ ನನ್ನ ಜಾಗಕ್ಕೆ ಯಾಕೆ ಬಂದಿದ್ದು ಎಂದು ಹೇಳಿ ಕೈಯಿಂದ ಕಪಾಲಕ್ಕೆ ಹೊಡೆದು ನಂತರ ಊರುಗೋಲಿನಿಂದ ಸೊಂಟ ಹಾಗೂ ಬೆನ್ನಿಗೆ ಹಲ್ಲೆ ಮಾಡಿರುವುದಾಗಿದೆ ಎಂಬುದಾಗಿ ಶ್ರೀಮತಿ ಸರಸ್ವತಿ ಶೆಟ್ಟಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2015 ಕಲಂ: 323, 324 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
- ಹೆಬ್ರಿ: ಪಿರ್ಯಾದಿದಾರರಾದ ಶಂಕರ ಶೆಟ್ಟಿ (58) ತಂದೆ: ರಾಮಣ್ಣ ಶೆಟ್ಟಿ ವಾಸ:ಅಲ್ಬಾಡಿ ನಡು ಮನೆ, ಅಲ್ಬಾಡಿ ಗ್ರಾಮ, ಕಾರ್ಕಳ ತಾಲೂಕು ಎಂಬವರು ದಿನಾಂಕ 17.01.2015 ರಂದು ತನ್ನ ಕೆ.ಎ.20.ಡಬ್ಲ್ಯು.3424 ನೇ ಮೋಟಾರ್ ಸೈಕಲಿನಲ್ಲಿ ತನ್ನ ಮನೆಯಿಂದ ಹೆಬ್ರಿ ಬೇಳಂಜೆ ಮುಖ್ಯ ರಸ್ತೆಯಲ್ಲಿ ಚಾರಾಕ್ಕೆ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 06:45 ಗಂಟೆಗೆ ಬೇಳಂಜೆ ಗ್ರಾಮದ ಸೊಳ್ಳೆಕಟ್ಟೆ ಭಜನಾ ಮಂದಿರದ ಹತ್ತಿರ ತಲುಪುವಾಗ ಹೆಬ್ರಿ ಕಡೆಯಿಂದ ಬೇಳಂಜೆ ಕಡೆಗೆ ಕೆ.ಎ.20.ಎಕ್ಸ್.7655 ನೇ ಮೋಟಾರ್ ಸೈಕಲನ್ನು ಅದರ ಚಾಲಕ ಶಶಿಧರ ಎಂಬವರು ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ರಕ್ತಗಾಯವಾಗಿದ್ದು ಮಣಿಪಾಲದ ಕೆ.ಎಮ್ .ಸಿ ಆಸ್ಪತ್ರೆಯಲ್ಲಿ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬುದಾಗಿ ಶಂಕರ ಶೆಟ್ಟಿ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/2015 ಕಲಂ: 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
- ಅಮಾಸೆಬೈಲು: ದಿನಾಂಕ 17/01/2015 ರಂದು ಪಿರ್ಯಾದಿದಾರರಾದ ಉಮೇಶ್ (20) ತಂದೆ ದೇವಣ್ಣ ನಾಯ್ಕ ವಾಸ ಮೀನ ಗದ್ದೆ ಬೇಳಂಜೆ ಅಂಚೆ ಕಾರ್ಕಳ ತಾಲೂಕು ಎಂಬವರ ತಂದೆಯವರಾದ ದೇವಣ್ಣ ನಾಯ್ಕ (55) ರವರು ಶೇಖರ ಶೆಟ್ಟಿ ಶೇಡಿಮನೆ ಗ್ರಾಮದ ಕೆಸ್ಕಾರ್ ಜೆಡ್ಡು ಎಂಬುವವರ ಮನೆಗೆ ಕೆಲಸಕ್ಕೆ ಹೋಗಿದ್ದು ಬೆಳಿಗ್ಗೆ 8:30 ಗಂಟೆಗೆ ಕೃಷಿ ಕೆಲಸದ ಬಗ್ಗೆ ತೋಟದಲ್ಲಿ ಎತ್ತರದ ಮರವನ್ನು ಹತ್ತಿ ಸೊಪ್ಪು ತೆಗೆಯುವಾಗ ಆಯ ತಪ್ಪಿ ಕೆಳಗೆ ಬಿದ್ದು ತೀವೃ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಉಮೇಶ್ ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 01/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment