Wednesday, January 14, 2015

Daily Crimes Reported as On 14/01/2015 at 19:30 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ:ಪಿರ್ಯಾದಿದಾರರಾದ ರಾಘವೇಂದ್ರ ಪೂಜಾರಿ (29) ತಂದೆ:ಭೋಜ ಪೂಜಾರಿ ವಾಸ:ಶ್ರೀಕೃಷ್ಣ ನಿಲಯ, ಅಸೋಡು ಗ್ರಾಮ & ಅಂಚೆ, ಕುಂದಾಪುರ ತಾಲೂಕುರವರ ಅಕ್ಕನ ಗಂಡ ಮಂಜುನಾಥ ಪೂಜಾರಿ (45) ಎಂಬವರು ಕುಂದಾಪುರ ತಾಲೂಕು ಅಸೋಡು ಗ್ರಾಮದಲ್ಲಿರುವ ತನ್ನ ಹೆಂಡತಿ ಮನೆಯಲ್ಲಿ ವಾಸವಾಗಿದ್ದು, ದಿನಾಂಕ:14/01/2015 ರಂದು ಬೆಳಿಗ್ಗೆ 08:30 ಗಂಟೆಯಿಂದ 10:30 ಗಂಟೆ ನಡುವಿನ ಸಮಯದಲ್ಲಿ ಮನೆಯ ಪಕ್ಕದ ಕೊಟ್ಟಿಗೆಯ ಪಕ್ಕಾಸಿಗೆ ಹುರಿ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ.ಈ ಬಗ್ಗೆ ರಾಘವೇಂದ್ರ ಪೂಜಾರಿರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 01/2015 ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.      

No comments: