Thursday, January 15, 2015

Daily Crime Reports As on 15/01/2015 at 07:00 Hrs

ಮಟ್ಕಾ ಜುಗಾರಿ ಪ್ರಕರಣ
  • ಕೋಟ: ದಿನಾಂಕ:14/01/2015  ರಂದು ಕಮಲಾಕರ್ ಆರ್ ನಾಯ್ಕ್, ಪಿ.ಎಸ್.ಐ ಕೋಟ ಠಾಣೆ ಇವರಿಗೆ ದೊರೆತ ಖಚಿತ ವರ್ತಮಾನದಂತೆ  ಸಿಬ್ಬಂದಿಗಳೊಂದಿಗೆ ಉಡುಪಿ ತಾಲೂಕು ಐರೋಡಿ ಗ್ರಾಮದ ಸುಷ್ಮಾ ವೈನ್‌ ಶಾಪ್ ಬಳಿ ಇರುವ ಮೀನು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ  ಹಣವನ್ನು ಪಣವನ್ನಾಗಿರಿಸಿ ಮಟ್ಕಾ ಜುಗಾರಿ  ಆಟ ನಡೆಸುತ್ತಿದುದ್ದನ್ನು ಖಚಿತ ಪಡಿಸಿ ಕೊಂಡು 19:30 ಗಂಟೆಗೆ ದಾಳಿ ನೆಡೆಸಿ ಮಟ್ಕಾ ಜುಗಾರಿ ಆಟ ನೆಡೆಸುತ್ತಿದ್ದ  ಆರೋಪಿ ಶಂಭು ಪೂಜಾರಿ   ಎಂಬವರನ್ನು  ದಸ್ತಗಿರಿ ಮಾಡಿ ಆರೋಪಿ  ಬಳಸುತ್ತಿದ್ದ ಮಟ್ಕಾ ಚೀಟಿ -1,ಬಾಲ್ ಪೆನ್ನು -1 ನಗದು ರೂ-1930/-ನ್ನು ಸ್ವಾಧೀನ ಪಡಿಸಿಕೊಂಡು ಒಂದನೇ ಆರೋಪಿಯು ಮಟ್ಕಾ ಜುಗಾರಿಯಿಂದ ಸಂಗ್ರಹಿಸಿದ ಹಣವನ್ನು ಜೋಸೆಫ್ ಡಿ ಅಲ್ಮೇಡಾ ಎಂಬವರಿಗೆ ನೀಡುತ್ತಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 08/2015 ಕಲಂ 78(1)(3) ಕೆ.ಪಿ ಅ್ಯಕ್ಟ್   ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಪಘಾತ ಪ್ರಕರಣ 
  • ಬೈಂದೂರು: ದಿನಾಂಕ 13/01/2015 ರಂದು  ರಾತ್ರಿ  20-30 ಗಂಟೆಗೆ ಸುಮಾರಿಗೆ ಪಿರ್ಯಾದಿ ಮಂಜುನಾಥ ಪೂಜಾರಿ ಇವರು  ಅವರ ಅಣ್ಣನವರಾದ ಕೃಷ್ಣ ಪೂಜಾರಿಯವರೊಂದಿಗೆ ತಗ್ಗರ್ಸೆ ಗ್ರಾಮದ ಗುಡ್ಡೆ ಅಂಗಡಿಯಿಂದ  ಯಡ್ತರೆಗೆ ಬರಲು ಕುಂದಾಪುರ ತಾಲೂಕು ತಗ್ಗರ್ಸೆ ಗ್ರಾಮದ  ಗುಡ್ಡೆ ಅಂಗಡಿ  ಎಂಬಲ್ಲಿ  ಕೊಲ್ಲೂರು ಬೈಂದೂರು  ರಸ್ತೆಯ  ಎಡಬದಿಯಲ್ಲಿ  ಮಣ್ಣು ರಸ್ತೆಯಲ್ಲಿ  ಬಸ್ಸಿಗಾಗಿ ಕಾಯುತ್ತ   ನಿಂತುಕೊಂಡಿರುವಾಗ    ಬೈಂದೂರು  ಕಡೆಯಿಂದ  KA-20-W-9836   ನೇ ಮೋಟಾರ್ ಸೈಕಲ್ ಅನ್ನು ಅದರ  ಸವಾರನು  ಅತೀ ವೇಗ  ಮತ್ತು ಅಜಾಗರೂಕತೆಯಿಂದ  ರಸ್ತೆಯ  ತೀರಾ ಬಲಬದಿಗೆ  ಚಲಾಯಿಸಿಕೊಂಡು ಬಂದು  ಮಣ್ಣು ರಸ್ತೆಯಲ್ಲಿ  ನಿಂತುಕೊಂಡಿದ್ದ  ಪಿರ್ಯಾದಿದಾರರ ಅಣ್ಣ ಕೃಷ್ಣ ಪೂಜಾರಿಯವರಿಗೆ  ಢಿಕ್ಕಿ ಹೊಡೆದ ಪರಿಣಾಮ ಅವರು ಕೆಳಗೆ ಬಿದ್ದು  ಅವರ  ಎಡಕಾಲ  ಮೋಣಗಂಟಿಗೆ ಮತ್ತು ಎಡಕಾಲ ಕೊಲುಕಾಲಿಗೆ ರಕ್ತಗಾಯ  ಮತ್ತು ಒಳಜಂಖ  ಉಂಟಾಗಿರುತ್ತದೆ. ಈ ಅಪಘಾತಕ್ಕೆ KA-20-W-9836   ನೇ ಮೋಟಾರ್ ಸೈಕಲ್ ಸವಾರನಾದ  ರವೀಂದ್ರ ರವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 06/2015 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಸುಲಿಗೆ ಪ್ರಕರಣ 
  • ಶಿರ್ವಾ: ಪಿರ್ಯಾದಿ ಶ್ರೀಮತಿ ಎಲಿಜಾ  ಬಿ ಮಾರ್ಟಿಸ್‌ ಇವರು  ದಿನಾಂಕ: 14.01.2015  ರಂದು  ಮುದರಂಗಡಿ ಸಾಂತ್‌ ಮಾರಿ  ಹಬ್ಬಕ್ಕೆ   ತನ್ನ ಸಂಬಂದಿಕರ  ಮನೆಯಾದ  ಮುದರಂಗಡಿಗೆ ಬಂದಿದ್ದು  ಸದ್ರಿಯವರ  ಮನೆಯಲ್ಲಿ  ಊಟೋಪಚಾರ  ಮುಗಿಸಿ  ವಾಪಾಸು  ತನ್ನ  ಮನೆಗೆ  ಬರುವರೇ  ಮೈಕೋಡಿ  ರಸ್ತೆಯಲ್ಲಿ  ಸಮಯ  03:15  ಗಂಟೆಗೆ  ನಡೆದುಕೊಂಡು  ಬರುತ್ತಿರುವಾಗ  ಹಿಂದಿನಿಂದ  ಮೋಟಾರ್‌   ಸೈಕಲ್‌ನಲ್ಲಿ ಬಂದ  ಇಬ್ಬರು  ವ್ಯಕ್ತಿಗಳು   ಅವರ  ಕುತ್ತಿಗೆಗೆ  ಕೈಹಾಕಿ  ಸುಮಾರು  25  ಗ್ರಾಂ  ತೂಕದ  ಚಿನ್ನದ  ಸರವನ್ನು  ಎಳೆದುಕೊಂಡು  ಹೋಗಿದ್ದು  ಅಂದಾಜು ಮೌಲ್ಯ  60,000/-  ಆಗಬಹುದು.    ಈ ಬಗ್ಗೆ ಶಿರ್ವಾ  ಠಾಣಾ ಅಪರಾಧ ಕ್ರಮಾಂಕ 04/2015  ಕಲಂ 392 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   
ಮನುಷ್ಯ ಕಾಣೆ ಪ್ರಕರಣ  
  • ಬ್ರಹ್ಮಾವರ : ದಿನಾಂಕ: 29/12/2014 ರಂದು 15.00 ಗಂಟೆಗೆ ಉಡುಪಿ ತಾಲೂಕು ಯಡ್ತಾಡಿ ಗ್ರಾಮದ ಪರಿಪೂರ್ಣ ಎಂಬಲ್ಲಿ ವಸಂತಿ ಶೆಟ್ಟಿ ಇವರ ಮನೆಯಲ್ಲಿ ಕೆಲಸಕ್ಕಿದ್ದ ಮಹಾನಂದ ಯಾದವ್ (24) ಎಂಬವರನ್ನು ಇವರು 500 ರೂ ಚಿಲ್ಲರೆ ತರಲು ಮನೆಯ ಬಳಿಯ ಸೊಸೈಟಿಗೆ ಕಳುಹಿಸಿದ್ದು, ವಾಪಾಸ್ಸು ಮನೆಗೆ ಬಾರದೆ  ಕಾಣೆಯಾಗಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 11/2015 ಕಲಂ: ಗಂಡಸು ಕಾಣೆಯಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ. 
ಹಲ್ಲೆ ಪ್ರಕರಣ  
  • ಹೆಬ್ರಿ ಸುಂದರ (53), ತಂದೆ: ಚಂದು ಪೂಜಾರಿವಂಡಾರಬೆಟ್ಟುವಿನ ಹೆರ್ಗಲ್ಲು, ಚಾರ ಗ್ರಾಮ, ಕಾರ್ಕಳ  ಎಂಬುವವರು ದಿನಾಂಕ 13-01-2015 ರಂದು ರಾತ್ರಿ 7:30 ಗಂಟೆಗೆ ಕಾರ್ಕಳ ತಾಲೂಕುಚಾರ ಗ್ರಾಮದವಂಡಾರಬೆಟ್ಟುಹೆರ್ಗಲ್ಲು ಎಂಬಲ್ಲಿಯ ತನ್ನ ಬಾಬ್ತು ವಾಸದ ಮನೆಯ ಗೇಟಿನ ಬಳಿ ಇದ್ದ ಹುಲ್ಲಿನ ಕಟ್ಟನ್ನು ತೆಗೆಯುತ್ತಿರುವಾಗ ಗೋವಿಂದ ಗಾಣಿಗ ಎಂಬುವವರು ಇವರ ಗೇಟಿನ ಒಳಗೆ ಪ್ರವೇಶಿಸಿ ಆತನ ಕೈಯಲ್ಲಿದ್ದ ತಲವಾರಿನಿಂದ ಹೊಡೆದ ಪರಿಣಾಮ ಸುಂದರ ಎಡ ಭುಜಕ್ಕೆಬಲಕೈ ಮೊಣಗಂಟಿಗೆಹಾಗೂ ಬಲ ಕಾಲಿನ ಮೊಣ ಗಂಟಿನ ಬಳಿ ಗೀರಿದ ಗಾಯವಾಗಿದ್ದು ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಪ್ರಕರಣಕ್ಕೆ ಈ ಹಿಂದೆ ಗೇರು ಬೀಜ ತೆಗೆಯುವ ವಿಷಯದಲ್ಲಿ ಮನಸ್ತಾಪವಿದ್ದುದೇ ಕಾರಣವಾಗಿರುತ್ತದೆ ಎಂಬುದಾಗಿ  ಸುಂದರ್‌ ಇವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 05/15 ಕಲಂ: 447, 324 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಗಂಗೊಳ್ಳಿ ಮೀನುಗಾರಿಕಾ ಮೇಲ್ವಿಚಾರಕಾ ಸರಕಾರಿ ನೌಕರರಾದ ದಿವಾಕರ ಎಂಬವರು ದಿನಾಂಕ 14/01/2015 ರಂದು ಮಧ್ಯಾಹ್ನ 03-15ಗಂಟೆಗೆ ಬಂದರು ಒಳಗಡೆ ಸರಕಾರಿ ಮೀನುಗಾರಿಕಾ ಕಛೇರಿಯಲ್ಲಿ ಕೆಲಸ ಮಾಡಿಕೊಂಡಿರುವಾಗ ಇವರ ಪರಿಚಯದ ಜಿ.ಎಂ.ರಫಿಕ್ ಎಂಬವರು KA20-Z-5837 ನೇಯದರಲ್ಲಿ ಬಂದು ಕಛೇರಿಯ ಒಳಗಡೆ ಹೋಗಿ ಬಂದು ಇವರನ್ನು ಕಛೇರಿಯ ಹಾಲ್ ಗೆ ಕರೆದು ದಿವಾಕರ್‌ರವರ ತಮ್ಮ ಕರುಣಾಕರ ಮತ್ತು ಜೆ.ಎಂ.ರಫೀಕ್ ಎಂಬವರ ನಡುವೆ ಇರುವ ಮೀನು ವ್ಯವಹಾರದ ಹಣದ ಲೆಕ್ಕಾಚಾರ ಮಾಡಿಕೊಡುವಂತೆ ಹೇಳಿದ್ದುಅದನ್ನು ದಿವಾಕರ್‌ರವರು ನಿರಾಕರಿಸಿದ ಕಾರಣ ಅದೇ ದ್ವೇಷದಲ್ಲಿ ಆರೋಪಿ ಜಿ.ಎಂ  ರಫೀಕ್‌ರು ಅವಾಚ್ಯ ಶಬ್ದಗಳಿಂದ ಬೈದು ಜೀವಬೇದರಿಕೆ ಹಾಕಿ ಶರ್ಟ್ ಹಿಡಿದು ಎದೆಗೆ ಕೈ ಯಿಂದ ಗುದ್ದಿ ಕೆಳಗೆ ಬೀಳಿಸಿ ಕಾಲಿನಿಂದ ತುಳಿದು ಹಲ್ಲೆ ನಡೆಸಿಕರ್ತವ್ಯಕ್ಕೆ ತಡೆ ಉಂಟುಮಾಡಿರುತ್ತಾನೆ ಎಂಬುದಾಗಿ ದಿವಾಕರ್‌ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 07/2015 ಕಲಂ 353, 323, 504, 506 ಐಪಿಸಿ  ಪ್ರಕ ರಣ ದಾಖಲಾಗಿರುತ್ತದೆ.

No comments: