Thursday, January 15, 2015

Daily Crimes Reported as On 15/01/2015 at 17:00 Hrs

ಅಪಘಾತ ಪ್ರಕರಣ
  • ಬೈಂದೂರು:ದಿನಾಂಕ 14/01/2015 ರಂದು ಸಂಜೆ 04:00 ಗಂಟೆಗೆ ಪಿರ್ಯಾದಿದಾರರಾದ ಮಹಾಬಲ ದೇವಾಡಿಗ (57) ತಂದೆ:ದಿವಂಗತ ಮೂರ್ತಿ, ಶಿವಶಂಕರ ಮನೆ, ಯಡ್ತರೆ  ಗ್ರಾಮ, ಕುಂದಾಪುರ ತಾಲೂಕುರವರು ತನ್ನ ಹೆಂಡತಿ ಮುಕಾಂಬುವನ್ನು KA 20 U 684 ನೇ ಮೋಟಾರ್‌ ಸೈಕಲ್‌ನಲ್ಲಿ ಹಿಂಬದಿಯಲ್ಲಿ ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಅಂಬಾಗಿಲು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಬೈಂದೂರು ಮಸೀದಿ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ KA 20 Z 8677 ನೇ ಕಾರಿನ ಚಾಲಕನು ಆತನ ಕಾರನ್ನು ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಹಾಬಲ ದೇವಾಡಿಗರವರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಮೊಟಾರ್‌ ಸೈಕಲ್‌ ಸಮೇತ ರಸ್ತೆಗೆ  ಬಿದ್ದು ಮಹಾಬಲ ದೇವಾಡಿಗರಿಗೆ ಬಲ ಕಾಲ ಪಾದಕ್ಕೆ ಒಳ ಜಖಂ ಆಗಿರುತ್ತದೆ. ಮಹಾಬಲ ದೇವಾಡಿಗರ ಹೆಂಡತಿ ಮುಕಾಂಬುಗೆ ತಲೆಗೆ ತೀವೃ ರೀತಿಯ ರಕ್ತಗಾಯವಾಗಿ ಎಡ ಕಾಲ ಮಣಿಗಂಟಿಗೆ ರಕ್ತಗಾಯವಾಗಿ ಮುಕಾಂಬುರವರು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ.ಈ ಬಗ್ಗೆ ಮಹಾಬಲ ದೇವಾಡಿಗರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 07/2015 ಕಲಂ:279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಉಡುಪಿನಗರ:ಉಡುಪಿ ತಾಲೂಕು 76 ಬಡಗಬೆಟ್ಟು ಗ್ರಾಮದ ಗುರ್ನೆಬೆಟ್ಟು ಎಂಬಲ್ಲಿ ಪಿರ್ಯಾದಿದಾರರಾದ ಸುವರ್ಧನ್ ನಾಯಕ್ (37) ತಂದೆ:ದಿವಂಗತ ಸುಬ್ಬಣ್ಣ ನಾಯಕ್,  ವಾಸ:ಗುರ್ನೆಬೆಟ್ಟು ಮನೆ, 76 ಬಡಗಬೆಟ್ಟು, ಅಲೆವೂರು ಅಂಚೆರವರ ಮನೆಯ ಬಾವಿಗೆ ಅಳವಡಿಸಿದ 11,000/ ರೂಪಾಯಿ ಮೌಲ್ಯದ ಟೆಕ್ಸ್ಮೋ (TEXMO)  ಕಂಪೆನಿಯ 1 ಹೆಚ್‌ಪಿ  ಮೋಟಾರ್ ಪಂಪನ್ನು  ದಿನಾಂಕ:13/11/2015 ರ ರಾತ್ರಿ 11:00 ಗಂಟೆಯಿಂದ  ದಿನಾಂಕ:14/01/2015 ರ 14:00 ಗಂಟೆಯ ನಡುವಿನ ಸಮಯದಲ್ಲಿ  ಯಾರೋ ಕಳ್ಳರು ವಿದ್ಯುತ್ ವಯರ್, ಪೈಪು ಮತ್ತು ನೈಲಾನ್ ಹಗ್ಗವನ್ನು ತುಂಡು ಮಾಡಿ ಪಂಪನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸುವರ್ಧನ್ ನಾಯಕ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 10/2015 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸುಲಿಗೆ ಪ್ರಕರಣ
  • ಕಾಪು:ದಿನಾಂಕ 14/01/2015 ರಂದು ರಾತ್ರಿ 08:03 ಗಂಟೆಗೆ ಉಡುಪಿ ತಾಲೂಕು ಏಣಗುಡ್ಡೆ ಗ್ರಾಮದ ಕಟಪಾಡಿ ಜಂಕ್ಷನ್ ಬಳಿ  ಹೂವಿನ ಅಂಗಡಿಯ ಎದುರು ಪಿರ್ಯಾದಿದಾರರಾದ ಗಣೇಶ ಕೆ. ಗಾಣಿಗ (51) ತಂದೆ:ಕೃಷ್ಣಯ್ಯ ಗಾಣಿಗ ವಾಸ:ಸಮೃದ್ಧಿ ಸರಕಾರಿ ಗುಡ್ಡೆ, ಮೂಡಬೆಟ್ಟು ಗ್ರಾಮ, ಶಂಕರಪುರ ಪೋಸ್ಟ್, ಉಡುಪಿ ತಾಲೂಕುರವರ ಹೆಂಡತಿ ಶ್ರಿಮತಿ ಮಾಲತಿರವರು ಬಸ್ಸಿನಿಂದ ಇಳಿದು ನಡೆದುಕೊಂಡು ಹೋಗುತ್ತಿರುವಾಗ ಒಂದು ಮೋಟಾರು ಸೈಕಲಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳ ಪೈಕಿ ಹಿಂಬದಿ ಸವಾರ ಮಾಲತಿರವರ ಕುತ್ತಿಗೆಗೆ  ಕೈ ಹಾಕಿ, ಕುತ್ತಿಗೆಯಲ್ಲಿದ್ದ  ಚಿನ್ನದ ಕರಿಮಣಿ ಸರವನ್ನು ಎಳೆದಿದ್ದು, ಎಳೆಯುವಾಗ ಮಾಲತಿರವರು ಸರವನ್ನು ಹಿಡಿದುಕೊಂಡಿದ್ದು, ತುಂಡಾದ ಕರಿಮಣಿ ಸರದ ಅರ್ಧ ಭಾಗವನ್ನು ಅಪರಿಚಿತ ವ್ಯಕ್ತಿಗಳು ಎಳೆದುಕೊಂಡು  ಮೋಟಾರು ಸೈಕಲಿನಲ್ಲಿ ಪರಾರಿಯಾಗಿರುತ್ತಾರೆ. ಕರಿಮಣಿ ಸರದ ಅರ್ಧ ಭಾಗ ಮಾಲತಿರವರ ಕೈಯಲ್ಲಿ ಉಳಿದಿರುತ್ತದೆ. ಅಪರಿಚಿತ ವ್ಯಕ್ತಿಗಳು ಎಳೆದುಕೊಂಡು ಹೋದ ಕರಿಮಣಿ ಸರದ ಅರ್ಧ ಭಾಗವು ಸುಮಾರು 2 ಪವನ್  ಆಗಿದ್ದು ಇದರ ಅಂದಾಜು ಮೌಲ್ಯ 45,000/- ರೂಪಾಯಿ ಆಗಬಹುದು ಎಂಬುದಾಗಿ ಗಣೇಶ ಕೆ. ಗಾಣಿಗರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ:09/2015 ಕಲಂ:392 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
  • ಕೋಟ:ಪಿರ್ಯಾದಿದಾರರಾದ ಪಿ.ಕಲ್ಯಾಣ ಕುಮಾರ ಅಡಿಗ (47), ತಂದೆ:ಪಿ.ಗೋವಿಂದ ಅಡಿಗ, ವಾಸ:ಉಪ್ಲಾಡಿ ಬಡಾಬೆಟ್ಟು, ಬನ್ನಾಡಿ ಗ್ರಾಮ, ಉಡುಪಿ ತಾಲೂಕುರವರು ದಿನಾಂಕ:14/01/2015 ರಂದು ರಾತ್ರಿ 8:00 ಗಂಟೆಗೆ ಉಡುಪಿ ತಾಲೂಕು ಬನ್ನಾಡಿ ಗ್ರಾಮದ ಉಪ್ಲಾಡಿ ಬಡಾಬೆಟ್ಟು ಎಂಬಲ್ಲಿರುವ  ತನ್ನ ವಾಸದ ಮನೆಯಲ್ಲಿರುವಾಗ ರಾತ್ರಿ 10:15 ಗಂಟೆಗೆ ಜನಗಳು ತನ್ನ ಮನೆಯ ಅಂಗಳದಲ್ಲಿ ಮಾತನಾಡುವ ಶಬ್ದ ಕೇಳಿ ಕಿಟಕಿ ತೆಗೆದು ನೋಡುವಾಗ  ಆರೋಪಿಗಳಾದ ಶ್ರೀನಿವಾಸ ಪೂಜಾರಿ, ಸಂಜೀವ ಪೂಜಾರಿ, ದಯಾಕರ ಪೂಜಾರಿ, ಜಯಕರ ಪೂಜಾರಿ, ಗೋಪಾಲ ಪೂಜಾರಿ, ಗಿರಿಜ ಪೂಜಾರ್ತಿ, ವಸಂತ  ನಾಯರಿ ಹಾಗೂ ಇತರರು ಏ ಭಟ್ಟ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ, ಕೊಂದು ಹಾಕುತ್ತೇವೆ ಹಾಗೂ ನಿನ್ನ ಮನೆಯನ್ನು ಸುಟ್ಟು ಹಾಕುತ್ತೇವೆಎಂದು ಬೆದರಿಕೆ  ಹಾಕಿ, ಆರೋಪಿಗಳು ಪಿ.ಕಲ್ಯಾಣ ಕುಮಾರ ಅಡಿಗರವರ ವಾಸದ ಮನೆ, ದನದ ಕೊಟ್ಟಿಗೆ, ಬಚ್ಚಲು ಮನೆಗೆ ಡಿಸೇಲ್ ಹಾಗೂ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವುದಾಗಿದೆ. ಇದರಿಂದ ಪಿ.ಕಲ್ಯಾಣ ಕುಮಾರ ಅಡಿಗರವರ ಮನೆಯ ಅರ್ಧಭಾಗ ಸುಟ್ಟು ಹೋಗಿರುತ್ತದೆ. ಈ ಬಗ್ಗೆ ಪಿ.ಕಲ್ಯಾಣ ಕುಮಾರ ಅಡಿಗರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 08/2015 ಕಲಂ:143,147,436,427,149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣ
  • ಗಂಗೊಳ್ಳಿ:ಪಿರ್ಯಾದಿದಾರರಾದ ಮಹಮ್ಮದ್ ರಫೀಕ್ (54) ತಂದೆ:ಜೈನುದ್ದೀನ್ ಕುಕೋಯಾ ವಾಸ:ಸರ್ವ ಪ್ರಕಾಶ್ ನಗರ, ಅಂಕದಕಟ್ಟೆ, ಕುಂದಾಪುರ ತಾಲೂಕುರವರಿಗೆ ಮೀನು ವ್ಯವಹಾರದ 28 ಲಕ್ಷ ರೂಪಾಯಿ ಹಣವನ್ನು ಆಪಾದಿತ ದಿವಾಕರ ಖಾರ್ವಿ, ಬಂದರು ಗಂಗೊಳ್ಳಿ ಎಂಬವರು ಕೊಡಬೇಕಾಗಿದ್ದು ಈ ಹಣವನ್ನು ಮಹಮ್ಮದ್ ರಫೀಕ್‌ರವರು ಅನೇಕ ಬಾರಿ ದಿವಾಕರ ಖಾರ್ವಿರವರಲ್ಲಿ ಕೇಳಿದ್ದರೂ ಕೊಟ್ಟಿರಲಿಲ್ಲ. ದಿನಾಂಕ:14/01/15 ರಂದು ಆಪಾದಿತನು  ಮಹಮ್ಮದ್ ರಫೀಕ್‌ರವರ ತಮ್ಮನಿಗೆ ಫೋನ್ ಮಾಡಿ  ಗಂಗೊಳ್ಳಿ  ಮೀನುಗಾರಿಕಾ ಕಛೇರಿಗೆ ತನ್ನ ಆಫೀಸಿಗೆ ಬರುವಂತೆ ತಿಳಿಸಿದ್ದು, ಅದರಂತೆ ಮಹಮ್ಮದ್ ರಫೀಕ್‌ ತನ್ನ ತಮ್ಮನೊಂದಿಗೆ ಮಧ್ಯಾಹ್ನ 03:30 ಗಂಟೆಗೆ ಗಂಗೊಳ್ಳಿ ಬಂದರು ಮೀನುಗಾರಿಕಾ ಕಛೇರಿಗೆ ಹೋದಾಗ ಕಛೇರಿಯಲ್ಲಿ ದಿವಾಕರ ಖಾರ್ವಿರವರು ಇದ್ದಿದ್ದು ಮಹಮ್ಮದ್ ರಫೀಕ್‌ರವರು ಅವರಲ್ಲಿ ಹಣವನ್ನು ಕೇಳಿದಾಗ ಮಾತಿನ ಚಕಮಕಿ ನಡೆದು ಮಹಮ್ಮದ್ ರಫೀಕ್‌ರಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ದೂಡಿ ಹಾಕಿದ್ದು, ಬಿದ್ದ ಪರಿಣಾಮ ಸಾಮಾನ್ಯ  ಸ್ವರೂಪದ  ನೋವು ಉಂಟಾಗಿದ್ದು, ಮಹಮ್ಮದ್ ರಫೀಕ್‌ರಿಗೆ ನಿನ್ನನ್ನು  ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ.ಈ ಬಗ್ಗೆ ಮಹಮ್ಮದ್ ರಫೀಕ್‌ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 08/2015 ಕಲಂ:323,504,506 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

No comments: