ಅಸ್ವಾಭಾವಿಕ
ಮರಣ ಪ್ರಕರಣ
- ಕೋಟ:ಪಿರ್ಯಾದಿದಾರರಾದ ಬಚ್ಚು (27) ತಂದೆ:ದಿವಂಗತ ಮುದ್ದು, ವಾಸ:ಕಾಜ್ರಳ್ಳಿ 5 ಸೆಂಟ್ಸ್, ಸಾಯಿಬ್ರಕಟ್ಟೆ ಅಂಚೆ,ಶಿರಿಯಾರ ಗ್ರಾಮ,ಉಡುಪಿ ತಾಲೂಕುರವರ ಅಣ್ಣನ ಮಗನಾದ ಸಂತೋಷ (20) ಎಂಬವರು ದಿನಾಂಕ:14/01/2015 ರಂದು ಬೆಳಿಗ್ಗೆ 9:30 ಗಂಟೆಗೆ ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ಎಂಬಲ್ಲಿರುವ ತನ್ನ ಮನೆಯ ಬಾವಿಯ ಬಳಿಯ ಮರದ ಕಂಬಕ್ಕೆ ಒರಗಿಕೊಂಡು ಸ್ನೇಹಿತರಾದ ಉಮೇಶ ಮತ್ತು ಬಸವ ಎಂಬವರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಮರದ ಕಂಬ ತುಂಡಾಗಿ ಸಂತೋಷನು ಆಯತಪ್ಪಿ ಕಂಬದ ಸಮೇತ ಬಾವಿಗೆ ಬಿದ್ದು ತಲೆಯ ಹಿಂಬದಿಗೆ ಬಾವಿಯೊಳಗೆ ಅಳವಡಿಸಿದ್ದ ಸಿಮೆಂಟ್ ರಿಂಗ್ ತಾಗಿ ತೀವ್ರಗಾಯಗೊಂಡು ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಚ್ಚುರವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 02/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment