ಅಪಘಾತ ಪ್ರಕರಣ
- ಮಣಿಪಾಲ: ಪಿರ್ಯಾದಿ ಪ್ರಭಾಕರ ಆಚಾರ್ಯ ಇವರು ಅವರ ಚಿಕ್ಕಪ್ಪನ ಮಗ ಸುಬ್ರಹ್ಮಣ್ಯ ಎಂಬವರ ಜೊತೆ ದಿನಾಂಕ: 13/01/2015 ರಂದು ಮದ್ಯಾಹ್ನ 1-20 ಗಂಟೆ ಸಮಯಕ್ಕೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಶಿವಮೊಗ್ಗ ಬಸ್ಸು ನಿಲ್ದಾಣ(ಮಣಿಪಾಲ- ಕಾರ್ಕಳ ರಸ್ತೆ) ಬಳಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಕೆಎ.20.4182 ನೇ ಲಾರಿಯನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಬ್ರಹ್ಮಣ್ಯ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಸುಬ್ರಹ್ಮಣ್ಯರವರು ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 6/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ
ಪ್ರಕರಣ
- ಕಾರ್ಕಳ: ದಿನಾಂಕ 13/01/2015 ರಂದು 14:00 ಗಂಟೆಗೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ಬೈಲೂರು ಎಂಬಲ್ಲಿ ಫಿರ್ಯಾದಿ ಅಬ್ದುಲ್ ಅರ್ಶದ್, ಇವರು ದಾರರು ತನ್ನ ಬಾಬ್ತು ಮಹೀಂದ್ರಾ ಲೋಗನ್ ಕಾರು ನಂಬ್ರ ಕೆಎ.20.ಎನ್.5041 ನೇಯದರಲ್ಲಿ ತನ್ನ ಸ್ನೇಹಿತರಾದ ರೋಹನ್ ಮತ್ತು ಸೌದ್ ಎಂಬವರೊಂದಿಗೆ ಉಡುಪಿಯಿಂದ ಕಾರ್ಕಳದ ಕಡೆಗೆ ಬರುತ್ತಿದ್ದು, ಆ ಸಮಯ ಅವರ ಮುಂದಿನಿಂದ ತೆರಳುತ್ತಿದ್ದ ಕಾಫಿ ಬಣ್ಣದ ಮಾರುತಿ ವ್ಯಾಗನರ್ ಕಾರನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೇ ಬಲಬದಿಗೆ ತಿರುಗಿಸಿದಾಗ ಫಿರ್ಯಾಧಿದಾರರು ತನ್ನ ಕಾರಿಗೆ ಬ್ರೇಕ್ ಹಾಕಿದ್ದು, ಇದರಿಂದ ಫಿರ್ಯಾಧಿದಾರರ ಹಿಂದಿನಿಂದ ಬರುತ್ತಿದ್ದ ಮೋಟಾರು ಸೈಕಲ್ಲೊಂದು ಅವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಫಿರ್ಯಾಧಿದಾರರು ಮತ್ತು ಅವರ ಸ್ನೇಹಿತರು ಮೋಟಾರು ಸೈಕಲಿನವರನ್ನು ವಿಚಾರಿಸಿ, ವ್ಯಾಗನರ್ ಕಾರಿನವರಿಗೆ ನೀವು ಯಾವುದೇ ಸೂಚನೆ ನೀಡದೇ ವಾಹನವನ್ನು ತಿರುಗಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದಕ್ಕೆ ಕಾರಿನಲ್ಲಿದ್ದ ಸುಮಿತ್ ಹಾಗೂ ಇತರ ಇಬ್ಬರು ಫಿರ್ಯಾಧಿದಾರರ ಅಂಗಿಯ ಕಾಲರ್ ಹಿಡಿದು ಕೈಗಳಿಂದ ಹಲ್ಲೆ ನಡೆಸಿದ್ದಲ್ಲದೇ ಜೊತೆಯಲ್ಲಿದ್ದ ಅವರ ಸ್ನೇಹಿತರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಕೆನ್ನೆಗೆ ಹೊಡೆದು, ಕಾಲಿನಿಂದ ಹೊಟ್ಟೆಗೆ ತುಳಿದಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 7/2015 ಕಲಂ 341 323 504 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment