ಅಪಘಾತ ಪ್ರಕರಣ
ವಂಚನೆ ಪ್ರಕರಣ
- ಬೈಂದೂರು: ದಿನಾಂಕ 13/01/2015 ರಂದು ಬೆಳಿಗ್ಗೆ 08:30 ಗಂಟೆಗೆ ಸಂತೋಷ ಎಂಬಾತನು ಕೆ.ಎ 20 ಇಇ 7122 ನೇ ಮೋಟಾರ್ ಸೈಕಲ್‌ನಲ್ಲಿ ಪಿರ್ಯಾಧಿದಾರರಾದ ಚಂದ್ರ (27) ತಂದೆ: ನಾರಾಯಣ ವಾಸ: ಗುಂಜಾನುಗುಡ್ಡೆ ನಾಗೂರು ಕಿರಿಮಂಜೇಶ್ವರ ಗ್ರಾಮ ಕುಂದಾಪುರ ತಾಲೂಕು ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಿರಿಮಂಜೇಶ್ವರದಿಂದ ಕಡೆಯಿಂದ ಗಂಗೊಳ್ಳಿ ಕಡೆಗೆ ರಾಹೆ 66 ರಲ್ಲಿ ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ ಹೈಸ್ಕೂಲ್ ಹತ್ತಿರ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕುಂದಾಪುರ ಕಡೆಯಿಂದ ಕಿರಿಮಂಜೇಶ್ವರ ಕಡೆಗೆ ಕೆ.ಎ 20 ಬಿ 7945 ನೇ ಲಾರಿಯನ್ನು ಅದರ ಚಾಲಕ ಐವನ್ ಗೋನ್ಸಲಿಸ್ ಎಂಬಾತನು ಅತೀ ವೇಗ ಹಾಗೂ ಅಜಾಕರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮೇಲೆ ರಸ್ತೆಯ ಬಲ ಬದಿಯ ಹೈಸ್ಕೂಲ್ ಕ್ರಾಸ್ ರಸ್ತೆಗೆ ತಿರುಗಿಸಿದ ಪರಿಣಾಮ ಲಾರಿಯು ಪಿರ್ಯಾಧಿದಾರರು ಸಹ ಸವಾರರಾಗಿ ಪ್ರಯಾಣಿಸುತ್ತಿದ್ದ ಕೆ.ಎ 20 ಇಇ 7122 ನೇ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಪಿರ್ಯಾಧಿದಾರರು ಹಾಗೂ ಮೋಟಾರ್ ಸೈಕಲ್ ಸವಾರ ಸಂತೋಷನು ರಸ್ತೆಗೆ ಬಿದ್ದು ಸಂತೋಷನ ಹಣೆಗೆ, ತುಟಿಗೆ, ಕೆನ್ನೆಗೆ ರಕ್ತಗಾಯವಾಗಿರುತ್ತದೆ ಎಂಬುದಾಗಿ ಚಂದ್ರ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2015 ಕಲಂ: ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ
- ಕುಂದಾಪುರ: ಪಿರ್ಯಾದಿದಾರರಾದ ಅಬ್ದುಲ್ ಸಲಾಂ (47) ತಂದೆ: ಅಬ್ದುಲ್ ಖಾದರ್ ವಾಸ: ಆಶ್ರಯ ಕಾಲೋನಿ, 2 ನೇ ಅಡ್ಡರಸ್ತೆ, ಕೊಡಪಾಡಿ, ಭರತ ನಗರ, ತ್ರಾಸಿ, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ರವರ ಕೆಎ 30 ಎ 3473 ನೇ ಲಾರಿಯನ್ನು ಆಪಾದಿತ ಮಹಮ್ಮದ್ ಹನೀಫ್ ಮಂಗಳೂರು ಎಂಬಾತನು ಮೋಸ ಹಾಗೂ ಕಪಟತನದಿಂದ ಪಡೆದು ವಂಚಿಸುವ ಉದ್ದೇಶದಿಂದ ದಿನಾಂಕ 28.01.2014 ರಂದು ಕುಂದಾಪುರ ಡಿಪ್ಲೋಮೆಂಟ್ ಹೋಟೇಲ್‌ನಲ್ಲಿ ಮಾತುಕತೆ ನಡೆಸಿ ರೂಪಾಯಿ 3,75,000/- ಕ್ಕೆ ಖರೀದಿ ಮಾಡುವುದಾಗಿ, ಅದರಲ್ಲಿ ರೂಪಾಯಿ 75,000/- ಮುಂಗಡ ನಗದು ಹಾಗೂ ಉಳಿದ ರೂಪಾಯಿ 3 ಲಕ್ಷವನ್ನು ಫೈನಾನ್ಸ್ ಸಾಲಕ್ಕೆ ಕಟ್ಟಿ ದಿನಾಂಕ 10.05.2014 ರ ಒಳಗಾಗಿ ಸಾಲವನ್ನು ಪೂರ್ಣವಾಗಿ ತೀರಿಸುವುದಾಗಿ ನಂಬಿಸಿ ದಿನಾಂಕ 29.01.2014 ರಂದು ಕುಂದಾಪುರದ ಬೀಜಾಡಿ ಸರ್ವಿಸ್ ಸ್ಟೇಶನ್ ಬಳಿ ರೂಪಾಯಿ 75,000/- ಮುಂಗಡ ಹಣ ನೀಡಿ ಲಾರಿಯನ್ನು ವಶಕ್ಕೆ ತೆಗೆದುಕೊಂಡು ದಿನಾಂಕ 01.02.2014 ರಂದು ಕರಾರುಪತ್ರವನ್ನು ತಯಾರಿಸಿ ಬಳಿಕ ಸಾಲವನ್ನು ತೀರಿಸದೆ, ಹಣವನ್ನೂ ನೀಡದೆ ಲಾರಿಯನ್ನು ಹಿಂಡಿರುಗಿಸದೆ ಅಪ್ರಾಮಾಣಿಕತನದಿಂದ ದುರುಪಯೋಗಪಡಿಸಿಕೊಂಡು ವಂಚಿಸಿರುವುದಾಗಿದೆ ಎಂಬುದಾಗಿ ಅಬ್ದುಲ್ ಸಲಾಂ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2015 ಕಲಂ 417, 420 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment