ಅಪಘಾತ ಪ್ರಕರಣ
- ಗಂಗೊಳ್ಳಿ: ದಿನಾಂಕ: 12.01.2015 ರಂದು 17:30 ಗಂಟೆಗೆ ಪಿರ್ಯಾದಿ ಹುಸೇನ್ ಶೇಕ್ ಹಮ್ಮದ್ ಇವರು ತಮ್ಮ ಮಗ ತಮೀಮ್ ರವರೊಂದಿಗೆ ತಮ್ಮ ಕಾರು ನಂಬ್ರ KA 20 ME 999 ಟಾಟಾ ಇಂಡಿಗೋ ಕಾರಿನಲ್ಲಿ ರಾ.ಹೇ. 66 ತ್ರಾಸಿ ಜಂಕ್ಷನ್ ಬಳಿ ತ್ರಾಸಿ ಚರ್ಚಗೆ ಹೋಗುವ ರಸ್ತೆಯ ಬಳಿ ಬರುವಾಗ ಎದುರಿನಿಂದ ಅಂದರೆ ತ್ರಾಸಿ ಕಡೆಯಿಂದ ಟಾಟಾ ಸುಮೋ ಕಾರು NO KA 20 -P- 4490 ಅದರ ಚಾಲಕನು ಅತೀವೇಗ ಹಾಗೂ ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರ ಕಾರಿಗೆ ಬಲಗಡೆಗೆ ಢಿಕ್ಕಿ ಹೊಡದು ಪರಿಣಾಮ ಕಾರು ರಸ್ತೆಯ ಎಡಬದಿಯಲ್ಲಿರುವ ತಗ್ಗು ಪ್ರದೇಶಕ್ಕೆ ಎಸೆಯಲ್ಪಟ್ಟು ಕಾರಿನಲ್ಲಿದ್ದ ಪಿರ್ಯಾದಿದಾರ ಹಣೆಯ ಬಲಬದಿಗೆ, ಎದೆಯ ಎಡಬದಿಯ ಮಗುಲಿಗೆ ಮತ್ತು ಎಡಕಾಲಿಗೆ ಜಖಂ ಗೊಂಡಿದ್ದು, ಪಿರ್ಯಾಧಿಯ ಮಗನಿಗೆ ಎರಡು ಕಾಲುಗಳಿಗೆ ತಲೆಗೆ ಹಾಗೂ ಎದೆಗೆ ಜಖಂ ಗೊಂಡಿದ್ದು, ಕಾರಿನ ಎದುರು ಭಾಗ ಜಖಂ ಗೊಂಡಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/15 ಕಲಂ 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment