Tuesday, January 13, 2015

Daily Crime Reports As on 13/01/2015 at 07:00 Hrs

ಅಪಘಾತ ಪ್ರಕರಣ
  • ಶಂಕರನಾರಾಯಣ: KA20A8147 ನಂಬ್ರದ ಲಾರಿ ಚಾಲಕ ರಾಘು ಪೂಜಾರಿ ದಿನಾಂಕ 12-01-2015 ರಂದು 15:00 ಗಂಟೆಗೆ ಉಡುಪಿ ತಾಲೂಕು ಬೆಳ್ವೆ ಗ್ರಾಮದ ಗೋಳಿಯಂಗಡಿ ಎಂಬಲ್ಲಿ ತನ್ನ ಬಾಬ್ತು KA 20A8147 ನಂಬ್ರದ ಲಾರಿಯನ್ನು ಗೋಳಿಯಂಗಡಿ ಕಡೆಯಿಂದ ಬೆಳ್ವೆ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅಂದರೆ ಬೆಳ್ವೆ ಕಡೆಯಿಂದ ಗೋಳಿಯಂಗಡಿ ಕಡೆಗೆ ಶ್ರೀನಿವಾಸ ಮಯ್ಯ ಇವರು  ಚಲಾಯಿಸಿಕೊಂಡು ಬಂದ ಹೊಸ ಟಾಟಾ ಇಂಡಿಗೋ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 02/15 ಕಲಂ 279 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ:ದಿನಾಂಕ 12/01/2015 ರಂದು ಸಮಯ ಸುಮಾರು ಮದ್ಯಾಹ್ನ 02:40 ಗಂಟೆಗೆ ಕುಂದಾಪುರ  ತಾಲೂಕು ಕಸಬಾ ಗ್ರಾಮದ ಚಿನ್ಮಯಿ ಆಸ್ಪತ್ರೆಯ ಬಳಿ ರಸ್ತೆಯಲ್ಲಿ ಆಪಾದಿತ ಆನಂದ ನಾಯ್ಕ್ ಎಂಬವರು KA20-D-3155  ನೇ ಲಾರಿಯನ್ನು ಓಂ ಟೈಲ್ಸ್ ಕಾರ್ಖಾನೆ ಕಡೆಯಿಂದ ಕುಂದಾಪುರ ಪೇಟೆ ಕಡೆಗೆ ಅತೀವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕುಂದಾಪುರ ಪೇಟೆ ಕಡೆಯಿಂದ ಓಂ ಟೈಲ್ಸ್ ಕಾರ್ಖಾನೆ ಕಡೆಗೆ ಫಿರ್ಯಾದಿ ಮಹಾಬಲ ಇವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸೂರ್ಯ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA20-EC-7424 ನೇ ಮೋಟಾರ್ ಸೈಕಲ್ ಗೆ ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ ಫಿರ್ಯಾದಿ ಹಾಗೂ ಮೋಟಾರ್ ಸೈಕಲ್ ಸವಾರ ವಾಹನ ಸಮೇತ ರಸ್ತೆಗೆ  ಬಿದ್ದು ಮೋಟಾರ್ ಸೈಕಲ್ ಸವಾರ ಸೂರ್ಯ ಎಂಬವರಿಗೆ ಬಲ ಕೈ ಮೊಣಗಂಟು ಮೂಳೆಮುರಿತ, ಎಡ ಕಾಲಿನ ಹಿಂಬದಿಗೆ ತರಚಿದ ಗಾಯ ಹಾಗೂ ಬೆನ್ನುಮೂಳೆ ಜಖಂಗೊಂಡಿದ್ದು, ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ  ಆಸ್ಪತ್ರೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/15 ಕಲಂ 279, 338  ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಸುಲಿಗೆ ಪ್ರಕರಣ
  • ಉಡುಪಿ: ಫಿರ್ಯಾದಿ ವನಜಾಕ್ಷಿ ಇವರು  ದಿನಾಂಕ 12-01-2015 ರಂದು ಹಳೆ ಡಿಸಿ ಆಫೀಸ್ ನಿಂದ ರಾ.ಹೇ 66 ಕಡೆಗೆ ಹೋಗುವ ರಸ್ತೆಯಲ್ಲಿ ಬರುವಾಗ ಸಂಜೆ 17:30 ಗಂಟೆಗೆ ಫಿರ್ಯಾದಿದಾರರ ಮನೆಯ ಪಕ್ಕದ ತಿರುವಿನಲ್ಲಿ  ರಸ್ತೆದಾಟಲು ನಿಂತಿರುವಾಗ ಒಬ್ಬ ಯುವಕ ಫಿರ್ಯಾದಿದಾರರ ಹಿಂದಿನಿಂದ ಬಂದು ಕೈಯಿಂದ ಮುಖಕ್ಕೆ ಗುದ್ದಿ ಎಡ ಹೆಗಲಿನಲ್ಲಿದ್ದ ವ್ಯಾನಿಟಿ ಬ್ಯಾಗನ್ನು ಎಳೆದಿಕೊಂಡಿದ್ದು ಅದೇ ಸಮಯಕ್ಕೆ ರಾ.ಹೇ 66 ರಲ್ಲಿ ಬಂದ ಬೈಕಿನ ಹಿಂಬದಿ ಕುಳಿತು ಹೋಗಿರುತ್ತಾನೆ. ವ್ಯಾನಿಟಿ ಬ್ಯಾಕ್ ಎಳೆದ ರಭಸಕ್ಕೆ ಫಿರ್ಯಾದಿದಾರರು ನೆಲಕ್ಕೆ ಬಿದ್ದು ಗಾಯಗಳಾಗಿದ್ದು ಚಿಕಿತ್ಸೆಯ ಬಗ್ಗೆ ವೈದ್ಯರ ಬಳಿ ಹೋದಲ್ಲಿ ಪರೀಕ್ಷಿಸಿದ ವೈದ್ಯರು ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ವ್ಯಾನಿಟಿ ಬ್ಯಾಗಿನಲ್ಲಿದ್ದ ಕೃಷಿಗೆ ಸಂಬಂದಿಸಿದ ದಾಖಲೆಗಳನ್ನು ಮತ್ತು ನೂರು ರೂಪಾಯಿಗಳನ್ನು ಎಳೆದುಕೊಂಡು  ಹೋಗಿರುವುದಾಗಿದೆ, ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2015 ಕಲಂ 394 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಶ್ರೀಮತಿ ಪದ್ಮಾವತಿ ಯಾವುದೋ ಕಾರಣದಿಂದ ಜೀಗುಪ್ಸೆಗೊಂಡು  ದಿನಾಂಕ: 11.01.2015 ರಂದು ಮದ್ಯಾಹ್ನ 12:00 ಗಂಟೆಯಿಂದ ದಿನ ಬೆಳಗ್ಗಿನ ಜಾವದ ಮದ್ಯಾವದಿಯಲ್ಲಿ ಹಂಕೆಟ್ಟ ಕರಂಬ್ಯಾಲು ಈದು ಗ್ರಾಮ ಎಂಬಲ್ಲಿರುವ ತನ್ನ ಗಂಡನ ಮನೆಯ ತೋಟದಲ್ಲಿರುವ ಕೆರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ  ಕ್ರಮಾಂಕ  01/2015 ಕಲಂ: 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  

No comments: