ಅಪಘಾತ ಪ್ರಕರಣ
- ಕುಂದಾಪುರ ಸಂಚಾರ:ದಿನಾಂಕ:12/01/2015 ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಕೊಟೇಶ್ವರ ಜಂಕ್ಷನ್‌ನ ಮಹೇಂದ್ರ ಶೋರೂಮ್ ಎದುರುಗಡೆ ಪಿರ್ಯಾದಿದಾರರಾದ ಬಲೀದ್ರ (50) ತಂದೆ:ದಿವಂಗತ ಮಂಜುನಾಥ ಪೂಜಾರಿ, ವಾಸ:ಜಟ್ಟಿಗೇಶ್ವರ ದೇವಸ್ಥಾನದ ಹತ್ತಿರ, ಮಣೂರು ಗ್ರಾಮ, ಉಡುಪಿ ತಾಲೂಕುರವರು KA 20 EG 1603 ನೇ ಮೋಟಾರ್ ಸೈಕಲನ್ನು ತೆಕ್ಕಟ್ಟೆ ಕಡೆಯಿಂದ ಕೊಟೇಶ್ವರ ಕಡೆಗೆ ಚಲಾಯಿಸಿಕೊಂಡು ಬಂದು ಮಹೇಂದ್ರ ಶೋರೂಮ್‌ಗೆ ಹೋಗುವರೇ ಇಂಡಿಕೇಟರ್ ಹಾಕಿ ಬಲಬದಿಗೆ ತಿರುಗಿಸುತ್ತಿರುವಾಗ ತೆಕ್ಕಟ್ಟೆ ಕಡೆಯಿಂದ KA 20 P 6160 ನೇ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬಲೀದ್ರರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಣ್ಣಿನ ಕೆಳಗೆ,ಎಡಕಾಲಿನ ಹಿಮ್ಮಡಿಗೆ ತರಚಿದ ಗಾಯವಾಗಿದ್ದು, ಸೊಂಟಕ್ಕೆ ಒಳ ಜಖಂ ಉಂಟಾಗಿ ಚಿಕಿತ್ಸೆ ಬಗ್ಗೆ ಕೊಟೇಶ್ವರದ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಆಪಾದಿತ ಚಾಲಕನು ಕಾರನ್ನು ನಿಲ್ಲಿಸದೆ ಹೋಗಿರುತ್ತಾನೆ. ಈ ಬಗ್ಗೆ ಬಲೀದ್ರರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 06/2015 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment