ಕಳವು
ಪ್ರಕರಣ
- ಉಡುಪಿ ನಗರ:ಪಿರ್ಯಾದಿದಾರರಾದ ಎಂ.ಆನಂದ ರಾಯ ಪೈ, ತಂದೆ:ದಿವಂಗತ ನರಸಿಂಹ ಪೈ, ವಾಸ:3-110ಇ, ಶ್ರೀಮಹಾಲಸಾ, ಪದ್ಮನಾಭ ನಗರ, ಚಿಟ್ಪಾಡಿ ಉಡುಪಿರವರು ತನ್ನ ಕೆಎ 20 ಎಲ್ 7997ನೇ ನಂಬ್ರದ ಹೀರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲನ್ನು ದಿನಾಂಕ:11/01/2015 ರಂದು ಬೆಳಿಗ್ಗೆ 11:30 ಗಂಟೆಗೆ ಉಡುಪಿ ಜಿ.ಬಿ ಪಂತ್ ಮಾರ್ಗದ ತನ್ನ ಇಂಪೀರಿಯಲ್ ಹೊಲಿಗೆ ಯಂತ್ರದ ಅಂಗಡಿಯ ಎದುರು ನಿಲ್ಲಿಸಿ ಮಂಚಕಲ್ ದೇವಸ್ದಾನಕ್ಕೆ ಹೋಗಿ ಸಂಜೆ ಸುಮಾರು 18:00 ಗಂಟೆಗೆ ವಾಪಾಸ್ಸು ಬಂದಾಗ ಎಂ.ಆನಂದ ರಾಯ ಪೈರವರು ತನ್ನ ಅಂಗಡಿ ಎದುರು ನಿಲ್ಲಿಸಿದ್ದ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಎಂ.ಆನಂದ ರಾಯ ಪೈರವರು ಸದ್ರಿ ಮೋಟಾರ್ ಸೈಕಲನ್ನು ಉಡುಪಿ ಪರಿಸರದಲ್ಲಿ ಹುಡುಕಾಡಿ ಅಕ್ಕಪಕ್ಕದವರಲ್ಲಿ ವಿಚಾರಿಸಿ ಈವರೆಗೂ ಪತ್ತೆಯಾಗದೇ ಇರುವುದರಿಂದ ದೂರು ನೀಡಲು ವಿಳಂಬವಾಗಿರುತ್ತದೆ.ಕಳವಾದ ವಾಹನದ ಅಂದಾಜು ಮೌಲ್ಯ 15000/-ರೂಪಾಯಿ ಆಗಿರುತ್ತದೆ. ಈ ಬಗ್ಗೆ ಎಂ.ಆನಂದ ರಾಯ ಪೈರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 08/2015 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಕಾರ್ಕಳ ನಗರ:ಪಿರ್ಯಾದಿದಾರರಾದ ಸುನಿಲ್ ಮೋರಸ್ (29) ತಂದೆ:ಇನಾಸ್ ಮೋರಾಸ್, ವಾಸ:ಬೈಲುಮನೆ, ಸೂರಾಲ್ ಗುಂಡಾಜೆ, ಕರಿಯಕಲ್ಲು ಮಿಯ್ಯಾರು ಗ್ರಾಮ ಕಾರ್ಕಳರವರ ಅಣ್ಣ ಅಗಸ್ಟಿನ್ ಮೋರಸ್ (40) ಎಂಬವರು ಖಾಯಿಲೆ ಪೀಡಿತರಾಗಿದ್ದು ನಿಶ್ಯಕ್ತಿಯಿಂದ ಮನೆಯಲ್ಲಿಯೇ ಇದ್ದವರು ಚಿಕಿತ್ಸೆ ಬಗ್ಗೆ ದಿನಾಂಕ:02/01/2015 ರಂದು ಬೆಳಿಗ್ಗೆ 11:00 ಗಂಟೆಗೆ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಕರಿಯಕಲ್ಲು ಸೂರಾಲ್ ಗುಂಡಾಜೆ ಬೈಲುಮನೆ ಎಂಬಲ್ಲಿಂದ ಉಡುಪಿಗೆಂದು ಹೊರಟು ಆ ಬಳಿಕ ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಅಗಸ್ಟಿನ್ ಮೋರಸ್‌ರವರ ಹುಡುಕಾಟದ್ಲಲಿರುತ್ತಾ ದಿನಾಂಕ:11/05/2014 ರಂದು ಬೆಳಿಗ್ಗೆ 10:00 ಅವರ ಮೃತದೇಹವು ಮಿಯ್ಯಾರು ಗ್ರಾಮದ ಕಜೆ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುತ್ತದೆ. ಮೃತ ಅಗಸ್ಟಿನ್ ಮೋರಾಸ್‌ರವರು ಉಡುಪಿಗೆಂದು ಹೊರಟವರು ದಾರಿ ಮಧ್ಯೆ ಕಜೆ ಎಂಬಲ್ಲಿ ನಿಶ್ಯಕ್ತಿಯಿಂದ ಬಿದ್ದು ಅಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಸುನಿಲ್ ಮೊರಾಸ್‌ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 01/2015 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಕೋಟ:ದಿನಾಂಕ 10/01/2015 ರಂದು ಪಿರ್ಯಾದಿದಾರರಾದ ಚಂದ್ರಶೇಖರ ಐತಾಳರವರ ಅಳಿಯನಾದ ಸುಘೋಷ (10) ಎಂಬವರು ದಿನಾಂಕ:10/01/2015 ರಂದು ಸಂಜೆ 4:30 ಗಂಟೆಗೆ ಉಡುಪಿ ತಾಲೂಕು ಬನ್ನಾಡಿ ಗ್ರಾಮದ ಉಪ್ಲಾಡಿ ಎಂಬಲ್ಲಿನ ತನ್ನ ಮನೆಯಿಂದ ಪಕ್ಕದ ಮನೆಯ ಹುಡುಗನೊಂದಿಗೆ ಆಟವಾಡಲು ಹೋದವನು ಈವರೆಗೂ ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾನೆ ಎಂಬಿತ್ಯಾದಿಯಾಗಿ ನೀಡಿದ ಪಿರ್ಯಾದಿಯ ಆಧಾರದ ಮೇಲೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 04/2015 ಕಲಂ 363 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದ ತನಿಖೆಯ ವೇಳೆ ಕಾಣೆಯಾದ ಹುಡುಗ ಸುಘೋಷ ಎಂಬಾತನು ಪಕ್ಕದ ಮನೆಯ ಜಯದೇವ ಅಡಿಗ ಎಂಬ ಹುಡುಗನೊಂದಿಗೆ ಆಟ ಆಡಲು ಹೋಗಿದ್ದನೆಂದೂ ನಂತರ ಯಾರು ನೋಡಿರುವುದಿಲ್ಲವೆಂದು ಹಾಗೂ ಜಯದೇವ ಅಡಿಗನ ಬಗ್ಗೆ ಸುಘೋಷನ ಮನೆಯವರು ಮತ್ತು ಗ್ರಾಮದಲ್ಲಿ ಬಲವಾದ ಸಂಶಯದ ಮಾತುಗಳು ಕೇಳಿ ಬಂದ ಮೇರೆಗೆ ಆತನನ್ನು ವಿಚಾರಣೆಗೆ ಹುಡುಕಿದಾಗ ಮನೆಯಿಂದ 11/01/2015 ರಂದು ತಲೆಮರೆಸಿಕೊಂಡಿದ್ದು ಜಯದೇವನ ಪತ್ತೆಯ ಬಗ್ಗೆ ಎಲ್ಲಾ ಕಡೆಗೆ ಹುಡುಕಾಡಿದಾಗ ಆತನು ತನ್ನ ಸೈಕಲ್‌ನ್ನು ಟ್ಯೂಷನ್ ಕ್ಲಾಸಿಗೆ ಹೋಗುವ ಮನೆಯ ಬಳಿ ಕೋಟ ಮೂರ್ ಕೈ ಎಂಬಲ್ಲಿ ನಿಲ್ಲಿಸಿ ಹೋಗಿರುತ್ತಾನೆ ಎಂದು ಮಾಹಿತಿ ಸಿಕ್ಕಿರುತ್ತದೆ. ನಂತರ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದಾಗ ತಾನು ದಿನಾಂಕ 10/01/2015 ರಂದು ಶನಿವಾರ ಮಧ್ಯಾಹ್ನ ಸುಘೋಷ ನನ್ನು ತನ್ನ ಮನೆಗೆ ಬಂದಾಗ ನನಗೆ ಬೈದಿದ್ದಿಯಲ್ಲಾ ಯಾಕೆ ಎಂದು ಕೇಳಿದ್ದು ಆಗ ತಾನು ಆತನಿಗೆ ಮಂಚದಿಂದ ಎಳೆದು ಹೊಡೆಯಲು ಹೋದಾಗ ಅವನಿಗೂ ನನಗೂ ಉರುಳಾಟ ಆಗುವಾಗ ನನ್ನ ಬಲಕೈ ಮತ್ತು ಎಡಕೈ ಬೆರಳಿಗೆ ಪರಚಿದನು. ಆವಾಗ ನಾನು ಸಿಟ್ಟುಗೊಂಡು ಆತನನ್ನು ಕೊಂದೇ ಬಿಡಬೇಕೆಂದು ನಿರ್ಧರಿಸಿ ನನ್ನ ಕೈಯಿಂದ ಆತನ ಎಡ ಕೆನ್ನೆಗೆ ಎರಡು ಬಾರಿ ಬಲವಾಗಿ ಮುಷ್ಠಿಯಿಂದ ಹೊಡೆದೆನು. ನಂತರ ಆತನನ್ನು ಪಕ್ಕದಲ್ಲಿರುವ ಕಂಬಕ್ಕೆ ತಲೆ ಚಚ್ಚುವಂತೆ ದೂಡಿದೆನು. ಆತನು ನೆಲಕ್ಕೆ ಕವುಚಿ ಬಿದ್ದನು. ಪುನಃ ಹೊಡೆಯಲು ಅಂಗಾತ ಮಾಡಿದಾಗ ಆತನ ಹಣೆಗೆ ಬಾಸುಂಡೆ ಬಂದಿದ್ದು ಆತನು ಅಲ್ಲಾಡಲಿಲ್ಲ. ಸರಿಯಾಗಿ ಅಲ್ಲಾಡಿಸಿ ನೋಡಿ ಉಸಿರಾಡುತ್ತೇನೋ ಎಂದು ನೋಡುವಾಗ ಉಸಿರಾಡುತ್ತಿರಲಿಲ್ಲ. ಆವಾಗ ನಾನು ಆತನು ಸತ್ತನೆಂದು ಗೊತ್ತಾಗಿ ಹೆದರಿ ಅವರ ಮನೆಯವರಿಗೆ ಗೊತ್ತಾಗಬಾರದೆಂದು ಉಪಾಯ ಮಾಡಿ ಸುಘೋಷನ ದೇಹವನ್ನು ಎತ್ತಿಕೊಂಡು ಹೋಗಿ ಮನೆಯ ಹತ್ತಿರದ ದೊಡ್ಡ ಬಾವಿಗೆ ಹಾಕಿದೆನು ಎಂದು ತಿಳಿಸಿದ್ದು, ಈ ಬಗ್ಗೆ ಈ ಪ್ರಕರಣವನ್ನು 302, 201 ಐಪಿಸಿಯನ್ನಾಗಿ ಪರಿವರ್ತಿಸಲಾಗಿದೆ.
No comments:
Post a Comment